Select Your Language

Notifications

webdunia
webdunia
webdunia
webdunia

ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಸರ್ಕಾರ : ಮಹಾರಾಷ್ಟ್ರದಲ್ಲಿ ಬಿಜೆಪಿಯ ಚುನಾವಣಾ ರಣತಂತ್ರ

ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಸರ್ಕಾರ : ಮಹಾರಾಷ್ಟ್ರದಲ್ಲಿ ಬಿಜೆಪಿಯ ಚುನಾವಣಾ ರಣತಂತ್ರ
ಪುಣೆ , ಬುಧವಾರ, 30 ಜುಲೈ 2014 (16:39 IST)
ಅಭಿವೃದ್ಧಿಯ ಅಜೆಂಡಾವನ್ನು ಇಟ್ಟುಕೊಂಡು ಭಾರತೀಯ ಜನತಾ ಪಕ್ಷ ರಾಷ್ಟ್ರೀಯ ಚುನಾವಣೆಯನ್ನು ಗೆದ್ದುಕೊಂಡಿತು. ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಮತದಾರರನ್ನು ಸೆಳೆಯಲು ಬಿಜೆಪಿ 'ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಒಂದೇ ಸರ್ಕಾರ ' ಎನ್ನುವ ರಣತಂತ್ರ ಆರಂಭಿಸಿದೆ.

ಪುಣೆಯಲ್ಲಿ ಇತ್ತೀಚಿಗೆ ಸಭೆ ನಡೆಸಿದ ಬಿಜೆಪಿ ಮಾಧ್ಯಮ ರಣನೀತಿಕಾರರು ರಾಜ್ಯದಲ್ಲಿ ಬಿಜೆಪಿ ಮತ್ತು ಶಿವಸೇನೆ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಕೇಂದ್ರದಲ್ಲೂ ಆಡಳಿತದಲ್ಲಿರುವ ಅದೇ ಪಕ್ಷದ ಸರಕಾರದಿಂದ ಹೆಚ್ಚಿನ ಸೌಲತ್ತುಗಳು ಸಿಗುತ್ತವೆ ಎಂಬ ಅಜೆಂಡಾವನ್ನು ಇಟ್ಟುಕೊಂಡು ಚುನಾವಣೆಯನ್ನೆದುರಿಸುವ ನಿರ್ಧಾರ ಕೈಗೊಂಡರು ಎನ್ನಲಾಗುತ್ತಿದೆ. 
 
ಕಾಂಗ್ರೆಸ್-ಎನ್‌ಸಿಪಿ ಮೈತ್ರಿಯ ಸರಕಾರ  ಕೇಂದ್ರಕ್ಕೆ ಸಹಕಾರ ನೀಡುತ್ತಿಲ್ಲ ಎಂದು ಆಪಾದಿಸಿದ ಸಂಸದ ಅನಿಲ್ ಶಿರೋಲೆ  ಮುಂಬರುವ ಚುನಾವಣೆಯಲ್ಲಿ ರಾಜ್ಯದ ಜನತೆ ಬಿಜೆಪಿ ಶಿವಸೇನೆ ಮೈತ್ರಿಕೂಟವನ್ನು ಆಯ್ಕೆ ಮಾಡಿಕೊಂಡರೆ, ನಾವು ಉತ್ತಮ ಸಮನ್ವಯತೆ ಮತ್ತು ಸಹಕಾರವನ್ನು ನಿರೀಕ್ಷಿಸಬಹುದು. ಕೇಂದ್ರದ ನಿರ್ದೇಶನಗಳನ್ನು ಈಗಿರುವ ರಾಜ್ಯ ಸರಕಾರ ಅನುಸರಿಸದ ಕಾರಣಕ್ಕೆ ಪುಣೆಯಲ್ಲಿ ಮೆಟ್ರೋದಂತಹ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷಗಳು ಅಧಿಕಾರದಲ್ಲಿದ್ದರೆ ಇಂತಹ ಸಮಸ್ಯೆಗಳು ಉದ್ಭವವಾಗಲಾರದು ಎಂದರು. 

Share this Story:

Follow Webdunia kannada