Webdunia - Bharat's app for daily news and videos

Install App

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಮ್ಮ ಆಸ್ತಿ ಶೇ.55 ರಷ್ಟು ಸರ್ಕಾರಕ್ಕೆ, ಉಳಿದಿದ್ದು ನಮಗೆ: ಸ್ಯಾಮ್ ಪಿತ್ರೋಡಾ ಸಮರ್ಥನೆ

Krishnaveni K
ಬುಧವಾರ, 24 ಏಪ್ರಿಲ್ 2024 (12:18 IST)
Photo Courtesy: Twitter
ನವದೆಹಲಿ: ಇತ್ತೀಚೆಗೆ ಪ್ರಧಾನಿ ಮೋದಿ ಕಾಂಗ್ರೆಸ್ ನ ಚುನಾವಣಾ ಪ್ರಣಾಳಿಕೆಯನ್ನು ಗಮನಿಸಿ ನಿಮ್ಮ ಸಂಪತ್ತಿನ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದೆ, ನೀವು ಗಳಿಸಿದ ಸಂಪತ್ತನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹೆಚ್ಚು ಮಕ್ಕಳಿರುವವರಿಗೆ ಹಂಚುತ್ತದೆ ಎಂದಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು.

ಇದೀಗ ಕಾಂಗ್ರೆಸ್ ಸಾಗರೋತ್ತರ ವಿಭಾಗದ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಜಾರಿಗೆ ತರಲು ಉದ್ದೇಶಿಸಿರುವ ಹೊಸ ಕಾನೂನಿನ ಬಗ್ಗೆ ಮಾಹಿತಿ ನೀಡಿದ್ದಾರೆ. ಅಮೆರಿಕಾದ ಚಿಕಾಗೋದಲ್ಲಿ ಕಾಂಗ್ರೆಸ್ ಜಾರಿಗೆ ತರಲು ಉದ್ದೇಶಿಸಿರುವ ಕಾನೂನನ್ನು ಅವರು ಸಮರ್ಥಿಸಿಕೊಂಡಿದ್ದಾರೆ.

ಪಿತ್ರಾರ್ಜಿತವಾಗಿ ಬಂದ ಆಸ್ತಿಗೆ ಶೇ.55 ತೆರಿಗೆ ವಿಧಿಸುವ ಕಾನೂನು ಅಮೆರಿಕಾದಲ್ಲಿದೆ. ಇದು ಭಾರತದಲ್ಲೂ ಬರಬೇಕಿದೆ. ಒಂದು ವೇಳೆ ಒಬ್ಬ ವ್ಯಕ್ತಿ 100 ಡಾಲರ್ ಸಂಪಾದಿಸಿದ್ದರೆ ಆತನ ನಂತರ ಆತನ ಮಕ್ಕಳೂ ಅಷ್ಟೂ ಆಸ್ತಿಯನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಆದರೆ ಅದರಿಂದ ಸಮಾಜಕ್ಕೆ ಏನೂ ಕೊಡುಗೆ ಸಿಕ್ಕಂತಾಗುವುದಿಲ್ಲ. ಅದರ ಬದಲು ಶೇ.55 ರಷ್ಟು ಪಾಲು ಸರ್ಕಾರಕ್ಕೆ ಸೇರಿದರೆ ಅದನ್ನು ಬಡವರಿಗೆ ಹಂಚಬಹುದು. ಉಳಿದ ಶೇ.45 ರಷ್ಟು ಪಾಲು ಮಾತ್ರ ಕುಟುಂಬಸ್ಥರಿಗೆ ಸಿಗಲಿದೆ. ಇಂತಹದ್ದೊಂದು ಕಾನೂನು ಭಾರತದಲ್ಲೂ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಇದೊಂದು ಆಸಕ್ತಿದಾಯಕ ಕಾನೂನಾಗಿದ್ದು, ಭಾರತದಲ್ಲೂ ಇಂತಹ ಕಾನೂನುಗಳು ಬರಬೇಕು ಎಂದು ಪ್ರತಿಪಾದಿಸಿದ್ದಾರೆ. ಇದೀಗ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿರುವ ಅಂಶವೂ ಇದೇ ಅಂಶ ಸೂಚಿಸುತ್ತದೆ ಎನ್ನಲಾಗಿದೆ.  ಭಾರತದಲ್ಲಿ ಕನಿಷ್ಠ ವೇತನ ವ್ಯವಸ್ಥೆಯಿಲ್ಲ. ಬಡವರಿಗೆ ಇಷ್ಟು ಹಣವನ್ನು ನೀಡಬೇಕು ಎಂದು ಕಾನೂನು ತರಬೇಕು. ಅದರಂತೆ ಸಂಪತ್ತು ಹಂಚಬೇಕು. ಭಾರತದಲ್ಲಿ ಈಗ ಶ್ರೀಮಂತರು ವಿದೇಶಗಳಲ್ಲಿ ಪ್ರವಾಸ ಮಾಡುತ್ತಿರುತ್ತಾರೆ. ಆದರೆ ಇಲ್ಲಿ ಅವರ ಸಹಾಯಕರಿಗೆ ಹಣ ನೀಡುವುದಿಲ್ಲ. ನಮ್ಮ ಸಂಪತ್ತನ್ನು ಸಾರ್ವಜನಿಕರಿಗಾಗಿ ಬಿಟ್ಟುಬಿಡಬೇಕು ಎಂದು ವಾದಿಸಿದ್ದಾರೆ. ಈಗ ಕಾಂಗ್ರೆಸ್ ತರಲು ಉದ್ದೇಶಿಸಿರುವ ಕಾನೂನು ಕೂಡಾ ಇದೇ ಮಾದರಿಯದ್ದು ಎನ್ನಲಾಗಿದೆ.

ಆದರೆ ನಾವು ಕಷ್ಟಪಟ್ಟು ಗಳಿಸಿದ ಆಸ್ತಿಯನ್ನು ಕಾನೂನಿನ ಹೆಸರಿನಲ್ಲಿ ಇತರರಿಗೆ ಬಲವಂತವಾಗಿ ಹಂಚಬೇಕೇ? ಈ ನಿಯಮ ಬಂದರೆ ಇದು ಹಿಂದೂಗಳಿಗೆ ಮಾತ್ರ ಅನ್ವಯವಾಗಲಿದೆ. ಯಾಕೆಂದರೆ ಮುಸ್ಲಿಮರಿಗೆ ಆಸ್ತಿ ಹಂಚಿಕೆ ವಿಚಾರದಲ್ಲಿ ಪ್ರತ್ಯೇಕ ಮುಸ್ಲಿಂ ಲಾ ಇದೆ. ಆದರೆ ಹಿಂದೂಗಳು ಮಾತ್ರ ಶೇ.55 ರಷ್ಟು ತೆರಿಗೆ ಮತ್ತು ಶೇ.45 ರಷ್ಟು ಆಸ್ತಿಯನ್ನು ಸರ್ಕಾರಕ್ಕೆ ಕೊಡಬೇಕಾಗುತ್ತದೆ ಎನ್ನುವುದು ಹಲವರ ಆಕ್ರೋಶವಾಗಿದೆ. ಗೃಹ ಸಚಿವ ಅಮಿತ್ ಶಾ ಕೂಡಾ ಕಾಂಗ್ರೆಸ್ ನ ಉದ್ದೇಶವನ್ನು ಸ್ವತಃ ಪಿತ್ರೋಡಾ ಅವರೇ ಬಹಿರಂಗಪಡಿಸಿದ್ದಾರೆ. ಇಂತಹ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಮ್ಮ-ನಿಮ್ಮ ಆಸ್ತಿ ಮೇಲೆ ನಮಗೇ ಅಧಿಕಾರವಿರಲ್ಲ ಎಂದು ಟೀಕೆ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments