Select Your Language

Notifications

webdunia
webdunia
webdunia
webdunia

ಸಲ್ಲು ಹೇಳಿಕೆಯನ್ನು ಖಂಡಿಸಿದ ತಂದೆ ಸಲೀಂ ಖಾನ್

ಸಲ್ಲು ಹೇಳಿಕೆಯನ್ನು ಖಂಡಿಸಿದ ತಂದೆ ಸಲೀಂ ಖಾನ್
ನವದೆಹಲಿ , ಸೋಮವಾರ, 27 ಜುಲೈ 2015 (12:38 IST)
ಗಲ್ಲು ಶಿಕ್ಷೆಗೆ ಗುರಿಯಾಗಿರುವ 1993ರ ಮುಂಬೈ ಸರಣಿ ಬಾಂಬ್‌‌ ಸ್ಫೋಟದ ಅಪರಾಧಿ ಯಾಕೂಬ್‌‌ ಮೆಮೊನ್‌‌‌ ಪರವಹಿಸಿ ನಟ ಸಲ್ಮಾನ್‌‌‌ ಖಾನ್‌‌ ನೀಡಿದ್ದ ಹೇಳಿಕೆಯನ್ನು ಅವರ ತಂದೆ ಸಲೀಂ ಖಾನ್‌‌‌ ಖಂಡಿಸಿದ್ದಾರೆ. 

"ಸಲ್ಮಾನ್‌‌ ಹೇಳಿಕೆ ಅರ್ಥಹೀನ ಮತ್ತು ಅಜ್ಞಾನದಿಂದ ಕೂಡಿದ್ದು, ಹಾಸ್ಯಾಸ್ಪದವಾಗಿದೆ. ಇದನ್ನು ನಾನು ಕೂಡ ಒಪ್ಪುವುದಿಲ್ಲ ಎಂದಿರುವ ಸಲೀಂ ಖಾನ್ ಮಗನ ಹೇಳಿಕೆಯನ್ನು ಯಾರು ಗಂಭೀರವಾಗಿ ಪರಿಗಣಿಸಬಾರದು", ಎಂದು ಹೇಳಿದ್ದಾರೆ.
 
1993ರ ಮುಂಬೈ ಬಾಂಬ್ ಸರಣಿ ಸ್ಫೋಟ ಪ್ರಕರಣದ ಅಪರಾಧಿ ಯಾಕೂಬ್ ಮೆಮನ್‌ನನ್ನು ಗಲ್ಲಿಗೇರಿಸಲು ಸರ್ಕಾರ ಜುಲೈ 30ನ್ನು ನಿಗದಿಗೊಳಿಸಿರುವ ಹಿನ್ನೆಲೆಯಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಯಾಕೂಬ್‌ಗೆ ನೀಡಲಾಗುತ್ತಿರುವ ಗಲ್ಲುಶಿಕ್ಷೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.  ಪ್ರಕರಣದಲ್ಲಿ ಯಾಕೂಬ್ ಸಹೋದರ ಟೈಗರ್ ಮೆಮನ್ ನಿಜವಾದ ಅಪರಾಧಿಯಾಗಿದ್ದಾನೆ. ಆದ್ದರಿಂದ ಆತನನ್ನು ಗಲ್ಲಿಗೇರಿಸಿ, ಅದನ್ನು ಬಿಟ್ಟು. ಯಾಕೂಬ್‌ಗೇಕೆ ಶಿಕ್ಷೆ ಎಂದು ಪ್ರಶ್ನಿಸಿ ಅವರು ಟ್ವೀಟ್ ಮಾಡಿದ್ದರು.
 
ಈ ಕುರಿತು ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆ ಟ್ವೀಟ್ ಹೇಳಿಕೆಗಳನ್ನು ಹಿಂಪಡೆದಿದ್ದ ಸಲ್ಲು ಕ್ಷಮೆ ಯಾಚಿಸಿದ್ದರು 
 
"ನಾನು ನೀಡಿದ್ದ ಹೇಳಿಕೆಗಳು ಸಂದೇಹಾರ್ಹವಾಗಿದ್ದು, ತಪ್ಪು ಅರ್ಥವನ್ನು ಕಲ್ಪಿಸುವಂತಿವೆ. ಆದ್ದರಿಂದ ಆ ಹೇಳಿಕೆಗಳನ್ನು ಹಿಂಪಡೆ ಎಂದು ನನ್ನ ತಂದೆ ನನಗೆ ದೂರವಾಣಿ ಕರೆ ಮಾಡಿ ತಿಳಿಸಿದರು. ಆದ ಕಾರಣ ನಾನು ಬೆಳಗ್ಗೆ ಟ್ವಿಟ್ಟರ್‌ನಲ್ಲಿ ದಾಖಲಿಸಿದ್ದ ಹೇಳಿಕೆಯನ್ನು ಹಿಂಪಡೆಯುತ್ತಿದ್ದೇನೆ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದಲ್ಲಿ ಕ್ಷಮೆಯಾಚಿಸುತ್ತೇನೆ. ನಾನು ಯಾಕುಬ್ ನಿರಾಪರಾಧಿ ಎಂದು ಹೇಳಿರಲಿಲ್ಲ. ನಾನು ಎಲ್ಲಾ ಧರ್ಮಗಳನ್ನೂ ಹಾಗೂ ದೇಶದ ಕಾನೂನನ್ನು ಗೌರವಿಸುತ್ತೇನೆ. ಆದ್ದರಿಂದ ನಾನು ನೀಡಿದ್ದ ಹೇಳಿಕೆಯನ್ನು ಹಿಂಪಡೆಯುತ್ತಿದ್ದೇನೆ", ಎಂದು ಸಲ್ಲು ಮತ್ತೆ ಟ್ವೀಟ್ ಮಾಡಿದ್ದರು. 
 
ಆದರೆ ಸಲ್ಮಾನ್‌‌ರ ಟ್ವೀಟ್‌‌ಗೆ ದೇಶಾದ್ಯಂತ ಭಾರಿ ವಿರೋಧ ವ್ಯಕ್ತವಾಗಿದೆ.  

Share this Story:

Follow Webdunia kannada