Select Your Language

Notifications

webdunia
webdunia
webdunia
webdunia

ಹಿಟ್ ಆಂಡ್ ರನ್ ಕೇಸ್: ಸಲ್ಮಾನ್ ವಿಚಾರಣೆ ಜುಲೈ 13ಕ್ಕೆ ಮುಂದೂಡಿದ ಕೋರ್ಟ್

ಹಿಟ್ ಆಂಡ್ ರನ್ ಕೇಸ್: ಸಲ್ಮಾನ್ ವಿಚಾರಣೆ ಜುಲೈ 13ಕ್ಕೆ ಮುಂದೂಡಿದ ಕೋರ್ಟ್
ಮುಂಬೈ , ಬುಧವಾರ, 1 ಜುಲೈ 2015 (19:22 IST)
ಹಿಟ್ ಆಂಡ್ ರನ್ ಪ್ರಕರಣದಲ್ಲಿ ಐದು ವರ್ಷ ಶಿಕ್ಷೆಗೆ ಗುರಿಯಾದ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಪರ ವಕೀಲರು ದಾಖಲಾತಿಗಳನ್ನು ಪರಿಶೀಲಿಸಲು ಸಮಯದ ಅಗತ್ಯವಿದೆ ಎಂದು ಕೋರ್ಟ್‌ಗೆ ಕೋರಿದ್ದರಿಂದ ಜುಲೈ 13ಕ್ಕೆ ಮುಂದೂಡಿ ಆದೇಶ ಹೊರಡಿಸಿದೆ. 
 
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಹಾಗೂ ಸರಕಾರಿ ವಕೀಲರಿಗೆ ಪೇಪರ್ ಬುಕ್ ಸರಬರಾಜು ಮಾಡಲಾಗಿದ್ದರೂ ಸಲ್ಮಾನ್ ಪರ ವಕೀಲ ಅಮಿತ್ ದೇಸಾಯಿ, ದಾಖಲೆಗಳು ಸರಿಯಾಗಿವೆಯೇ ಎನ್ನುವ ಬಗ್ಗೆ ಪರಿಶೀಲನೆ ನಡೆಸಲು ಮೂರು ವಾರಗಳ ಸಮಯ ನೀಡುವಂತೆ ನ್ಯಾಯಾಲಯವನ್ನು ಕೋರಿದರು.  
 
ನ್ಯಾಯಮೂರ್ತಿ ಎ.ಆರ್.ಜೋಷಿ, ಸಲ್ಮಾನ್ ಪರ ವಕೀಲರ ಕೋರಿಕೆಯ ಮೇರೆಗೆ ಜುಲೈ 13 ಕ್ಕೆ ವಿಚಾರಣೆ ಮುಂದೂಡಿ ಆದೇಶ ಹೊರಡಿಸಿದ್ದಾರೆ. 
 
ಮಹಾರಾಷ್ಟ್ರ ಸರಕಾರದ ಪರವಾಗಿ ಮುಖ್ಯ ಸರಕಾರಿ ಅಭಿಯೋಜಕ ಎಸ್.ಎಸ್.ಶಿಂಧೆ, ನ್ಯಾಯಮೂರ್ತಿಗಳ ಆದೇಶಕ್ಕೆ ಒಪ್ಪಿಗೆ ಸೂಚಿಸಿದರು ಎಂದು ಮೂಲಗಳು ತಿಳಿಸಿವೆ.
 
ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಆದರೆ, ಅವರ ಸಹೋದರಿ ಅಳ್ವಿರಾ ಉಪಸ್ಥಿತರಿದ್ದರು ಎಂದು ಮೂಲಗಳು ತಿಳಿಸಿವೆ.
 

Share this Story:

Follow Webdunia kannada