Select Your Language

Notifications

webdunia
webdunia
webdunia
webdunia

ಸಲ್ಲುಗೆ ಜೈಲಾದರೆ ನನ್ನ ಬದುಕಲ್ಲಿ ಯಾವ ಬದಲಾವಣೆಯಿಲ್ಲ: ಹಿಟ್ ಅಂಡ್ ರನ್ ಪೀಡಿತ

ಸಲ್ಲುಗೆ ಜೈಲಾದರೆ ನನ್ನ ಬದುಕಲ್ಲಿ ಯಾವ ಬದಲಾವಣೆಯಿಲ್ಲ: ಹಿಟ್ ಅಂಡ್ ರನ್ ಪೀಡಿತ
ನವದೆಹಲಿ , ಬುಧವಾರ, 6 ಮೇ 2015 (18:01 IST)
ಸಪ್ಟಂಬರ್ 28, 2002ರಲ್ಲಿ ಬಾಂದ್ರಾದ ಅಮೇರಿಕ ಎಕ್ಸಪ್ರೆಸ್ ಬೇಕರಿ ಎದುರು ಮಲಗಿದ್ದ ನಾಲ್ಕು ಜನರ ಮೇಲೆ ನಟ ಸಲ್ಮಾನ್ ಅವರ ಕಾರು ಹರಿದು ಒಬ್ಬ ವ್ಯಕ್ತಿ ವ್ಯಕ್ತಿ ಮೃತಪಟ್ಟಿದ್ದರೆ ಮೂವರು ಗಾಯಗೊಂಡಿದ್ದರು.ಘಟನೆಯಲ್ಲಿ ಗಾಯಗೊಂಡಿರುವ ಕಲೀಮ್ ಇಂದಿನ ತೀರ್ಪಿನಿಂದ ನನಗಾಗುವುದು ಏನೂ ಇಲ್ಲ ಎಂದು ಖಾನ್ ಅವರಿಗೆ ಶಿಕ್ಷೆಯಾದುದರ ಬಗ್ಗೆ ನೀರಸವಾಗಿ ಪ್ರತಿಕ್ರಿಯಿಸಿದ್ದಾರೆ. 

ಉತ್ತರಪ್ರದೇಶದ ಸುಲ್ತಾನಪುರ ಜಿಲ್ಲೆಯ ಅಸ್ರೋಗಾ ಎಂಬ ಪುಟ್ಟ ಗ್ರಾಮದಲ್ಲಿ ವಾಸವಾಗಿರುವ ಕಲೀಮ್ ಅವರಿಗೆ, 2002ರಲ್ಲಿ ನಡೆದ ಅಪಘಾತದಲ್ಲಿ ಕೈ, ಕಾಲು ಮತ್ತು ಬೆನ್ನಿಗೆ ಗಾಯವಾಗಿತ್ತು. ಇದರ ಪರಿಣಾಮ ತಾನು ಹೆಚ್ಚು ಹೊತ್ತು ನಿಂತುಕೊಳ್ಳಲು ಸಹ ಸಾಧ್ಯವಾಗುತ್ತಿಲ್ಲವೆಂದು ಕಲೀಮ್ ಹೇಳುತ್ತಾರೆ. 
 
"ಘಟನೆ ನಡೆದಾಗ ನಾನು 1.5 ಲಕ್ಷ ಹಣವನ್ನು ಪರಿಹಾರ ಧನವಾಗಿ ಪಡೆದುಕೊಂಡಿದ್ದೆ. ಅದು ನನ್ನ ಚಿಕಿತ್ಸೆಗಾಗಿ ಬಳಕೆಯಾಯಿತು. ಮತ್ತೆ ನಮಗೆ ಪರಿಹಾರ ಧನ ಸಿಗುವುದಿಲ್ಲವೆಂದಾದರೆ ಸಲ್ಮಾನ್ ಖಾನ್‌ಗೆ ಶಿಕ್ಷೆಯಾದರೇನು ಅಥವಾ ನಿರಪರಾಧಿಯೆಂದು ಬಿಡುಗಡೆಯಾದರೇನು", ಎಂದು ಪ್ರಶ್ನಿಸಿದ್ದಾರೆ. 
 
ಕಳೆದ ವರ್ಷ ಮೇ ತಿಂಗಳಲ್ಲಿ  ಕಲೀಮ್ ಮತ್ತು ಗಾಯಗೊಂಡಿದ್ದ ಇತರ ಮೂವರು ಕೋರ್ಟ್‌ನಲ್ಲಿ ಸಾಕ್ಷ ಹೇಳಿದ್ದರು. ಐವರ ಮೇಲೆ ಕಾರು ಚಲಾಯಿಸಿದ್ದ ವೇಳೆ ಸಲ್ಮಾನ್ ಕುಡಿದ ಮತ್ತಿನಲ್ಲಿದ್ದ. ಘಟನೆ ನಡೆದ ನಂತರ ಡ್ರೈವರ್ ಸೀಟ್ ಡೋರ್ ಕಡೆಯಿಂದ ಸಲ್ಮಾನ್ ಕೆಳಕ್ಕಿಳಿದಿದ್ದ. ಆತನ ಬಾಡಿಗಾರ್ಡ್  ಬಲಬದಿಯ ಮೂಲಕ ಕೆಳಕ್ಕಿಳಿದಿದ್ದರು. ಘಟನೆ ನಡೆದಾಗ ಅಲ್ಲಿದ್ದ ಜನರು ಅಪಘಾತಕ್ಕೊಳಗಾದ ನಮ್ಮನ್ನು ರಕ್ಷಿಸಲು ಧಾವಿಸಿ ಬಂದಿದ್ದರೆ, ಸಲ್ಮಾನ್ ಸ್ಥಳದಿಂದ ಪರಾರಿಯಾಗಿದ್ದರು ಎಂದು ಅವರು ನ್ಯಾಯಾಲಯದಲ್ಲಿ ಹೇಳಿದ್ದರು. 

Share this Story:

Follow Webdunia kannada