Select Your Language

Notifications

webdunia
webdunia
webdunia
webdunia

ಪ್ರಧಾನಿಗೆ ಕಾಲಾವಕಾಶ ಅಗತ್ಯ: ಮೋದಿ ಬೆಂಬಲಕ್ಕೆ ನಿಂತ ಸಲ್ಮಾನ್ ಖಾನ್

ಪ್ರಧಾನಿಗೆ ಕಾಲಾವಕಾಶ ಅಗತ್ಯ: ಮೋದಿ ಬೆಂಬಲಕ್ಕೆ ನಿಂತ ಸಲ್ಮಾನ್ ಖಾನ್
ನವದೆಹಲಿ , ಮಂಗಳವಾರ, 16 ಸೆಪ್ಟಂಬರ್ 2014 (18:55 IST)
ಪ್ರಧಾನಿ ನರೇಂದ್ರ ಮೋದಿಯವರ ಮೊದಲ 100 ದಿನಗಳ ಆಡಳಿತಕ್ಕೆ ದೇಶವಾಸಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಅವರಿಗೆ ಮತ್ತೆ ಸ್ವಲ್ಪ ಸಮಯ ನೀಡಬೇಕು ಎಂದು ನಟ ಸಲ್ಮಾನ್ ಖಾನ್ ಅಭಿಪ್ರಾಯ ಪಟ್ಟಿದ್ದಾರೆ. 

ಮೋದಿಯವರ ಕಾರ್ಯನಿರ್ವಹಣೆ ಕುರಿತು ನಟನ ಅಭಿಪ್ರಾಯ ಕೇಳಿದಾಗ ಪ್ರತಿಕ್ರಿಯಿಸಿದ ಅವರು ಅವರು "ಅಧಿಕಾರಕ್ಕೇರಿ ಕೇವಲ 100 ದಿನಗಳಾಗಿವೆ. ಅವರಿಗೆ ಸ್ವಲ್ಪ ಹೆಚ್ಚಿನ  ಸಮಯ ನೀಡೋಣ. ಅವರಿದಕ್ಕೆ ಹಕ್ಕುದಾರರಾಗಿದ್ದಾರೆ. ತಮ್ಮ ತಂಡದೊಂದಿಗೆ ಹಗಲು ರಾತ್ರಿ ಅವರು ಶ್ರಮಿಸುತ್ತಾರೆ. ಜನರು ಜವಾಬ್ದಾರಿಯನ್ನು ತೆಗೆದುಕೊಳ್ಳ ಬಯಸುವುದಿಲ್ಲ. ಅವರನ್ನು  ಟೀಕೆ ಮಾಡುವ ಪ್ರತಿಯೊಬ್ಬರು ಮೊದಲು ನಿಮ್ಮ ನಿಮ್ಮ ಮನೆಯ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿ ತೋರಿಸಿ. ಆಗ ನಿಮಗೆ ಆಡಳಿತ ನಡೆಸುವುದರಲ್ಲಿ ಎದುರಾಗುವ  ಎಡರು ತೊಡರುಗಳ ಪರಿಚಯವಾಗುತ್ತದೆ. ಮನೆ ನಡೆಸುವುದರಲ್ಲಿಯೇ ಹೈರಾಣವಾಗುವ ನಾವು ದೇಶವನ್ನಾಳಲು ಹೇಗೆ ಸಾಧ್ಯ? ಆದರೆ ಮೋದಿ ಅದನ್ನು ಸಮರ್ಥವಾಗಿ ಮಾಡುತ್ತಿದ್ದಾರೆ" ಎಂದು ಬಾಲಿವುಡ್ ನಟ ಹೇಳಿದ್ದಾರೆ. 
 
ಕಳೆದ ಮೇ ತಿಂಗಳಲ್ಲಿ ನಡೆದ ಮೋದಿಯವರ ಪ್ರಮಾಣ ವಚನ ಸಮಾರಂಭಕ್ಕೆ ಆಹ್ವಾನಿತರಾಗಿದ್ದ ಆಪ್ತರಲ್ಲಿ ಒಬ್ಬರಾಗಿದ್ದ ಸಲ್ಮಾನ್ "ಸರ್ವಾನುಮತದಿಂದ ನಾವವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಿದ್ದೇವೆ. ಆದ್ದರಿಂದ ನಾವರಿಗೆ ಕೊಡಬೇಕಾದ ಗೌರವವನ್ನು ಕೊಡಬೇಕು".
 
"ಪಾಕಿಸ್ತಾನದ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಹಾಯ ಹಸ್ತ ನೀಡುವ ಅವರ ನಿರ್ಧಾರ ಕೇಳಿ ತುಂಬ ಸಂತೋಷವಾಗುತ್ತದೆ ಎಂದು  ಹೇಳಿದ್ದಾರೆ.
 
ಮೋದಿಯವರ ಡ್ರಮ್  ನುಡಿಸುವ ಕೌಶಲ್ಯಕ್ಕೆ ಪ್ರಭಾವಿತರಾಗಿರುವ ಖಾನ್ " ಅವರು ಡ್ರಮ್ ನುಡಿಸುವುದನ್ನು ನಾನು ನೋಡಿದ್ದೇನೆ. ಅವರದನ್ನು ತುಂಬಾ ಚೆನ್ನಾಗಿ ನುಡಿಸುತ್ತಾರೆ. ಮತ್ತದು ಕೇಳಲು ಹಿತಕಾರಿಯಾಗಿದೆ" ಎಂದು ಸಲ್ಮಾನ್  ಹೊಗಳಿದ್ದಾರೆ.

Share this Story:

Follow Webdunia kannada