ಸುನೀಲ್ ಜೋಷಿ ಹತ್ಯೆ ಪ್ರಕರಣ: ಸಾದ್ವಿ ಪ್ರಗ್ಯಾ ಸೇರಿದಂತೆ 7 ಆರೋಪಿಗಳ ಖುಲಾಸೆ

Webdunia
ಬುಧವಾರ, 1 ಫೆಬ್ರವರಿ 2017 (20:17 IST)
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕ ಸುನೀಲ್ ಜೋಷಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಗಳ ಕೊರತೆ ಹಿನ್ನೆಲೆಯಲ್ಲಿ ಆರೋಪಿ ಸಾದ್ವಿ ಪ್ರಗ್ಯಾ ಸಿಂಗ್ ಠಾಕೂರ್ ಸೇರಿದಂತೆ ಏಳು ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
 
ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಮೂರ್ತಿ ರಾಜೀವ್. ಎಂ.ಆಪ್ಟೆ, ಸಾಕ್ಷ್ಯಗಳ ಕೊರತೆಯಿಂದಾಗಿ ಆರೋಪಿಗಳಾದ ಪ್ರಗ್ಯಾ, ಹರ್ಷ ಸೋಳಂಕಿ, ವಸುದೇವ ಪರಾಮರ್, ರಾಮಚರಣ್ ಪಟೇಲ್, ಆನಂದ್ ರಾಜ್ ಕಟಾರಿಯಾ, ಲೋಕೇಶ್ ಶರ್ಮಾ, ರಾಜೇಂದ್ರ ಚೌಧರಿ ಮತ್ತು ಜಿತೇಂದ್ರ ಶರ್ಮಾರನ್ನು ಆರೋಪದಿಂದ ಮುಕ್ತಗೊಳಿಸಲಾಗಿದೆ. 
 
ಪ್ರಗ್ಯಾ ಆತ್ಮಿಯರಾಗಿದ್ದ ಆರೆಸ್ಸೆಸ್ ಪ್ರಚಾರಕ ಸುನೀಲ್ ಜೋಷಿ 2007ರ ಡಿಸೆಂಬರ್ 29 ರಂದು ಗುಂಡಿಗೆ ಬಲಿಯಾಗಿದ್ದರು.
 
ಪ್ರಸ್ತುತ ಸಾಧ್ವಿ ಪ್ರಗ್ಯಾ ಭೋಪಾಲ್‌ ಸೆಂಟ್ರಲ್ ಜೈಲಿನಲ್ಲಿದ್ದು, ಪಂಡಿತ್ ಖುಷಿಲಾಲ್ ಆಯುರ್ವೇದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಿಸ್ಟರ್ ಕ್ಲೀನ್, ಸ್ಮಶಾನ ಭೂಮಿ, ಕೆರೆ ಅಂಗಳವನ್ನು ತಮ್ಮ ಹೆಸರಿಗೆ ಮಾಡಿಕೊಂಡದ್ದು ಹೇಗೆ

ಆರೋಗ್ಯದಲ್ಲಿ ಏರುಪೇರು, ವಿಶ್ರಾಂತಿಯಲ್ಲಿರುವ ಸಿದ್ದರಾಮಯ್ಯರನ್ನು ಭೇಟಿಯಾದ ಪುತ್ರ ಯತೀಂದ್ರ

ಎಐ ದುರ್ಬಳಕೆ ಬಗ್ಗೆ ಶ್ರೀಲೀಲಾ ಗರಂ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡ ನಟಿ

ಗೋವಾ ನೈಟ್‌ಕ್ಲಬ್ ದುರಂತ, ಪರಾರಿಯಾಗಿದ್ದ ಮಾಲಕ ಸಹೋದರರ ವಿಚಾರಣೆ

ಖಾಕಿ ಮೇಲೆ ಕೈ ಹಾಕಿದ ಮೂವರು ಮೂವರಿಗೆ 7 ವರ್ಷ ಜೈಲೇ ಗತಿ

ಮುಂದಿನ ಸುದ್ದಿ
Show comments