Webdunia - Bharat's app for daily news and videos

Install App

ಎಲ್ಲಿದ್ದಾರೆ ಸಚಿನ್? ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆ, ಸಂಸತ್ತಿನಲ್ಲಿ ಶೂನ್ಯ ದಾಖಲೆ

Webdunia
ಗುರುವಾರ, 7 ಆಗಸ್ಟ್ 2014 (12:51 IST)
ಕ್ರಿಕೆಟಿಗರಾಗಿ ಸಚಿನ್ ದೇಶದ ಜನರ ದೃಷ್ಟಿಯಲ್ಲಿ  ದೇವರ ಸ್ಥಾನವನ್ನು ಅಲಂಕರಿಸಿರಬಹುದು. ಆದರೆ ರಾಜ್ಯಸಭಾ ಸದಸ್ಯರಾಗಿರುವ ಅವರು ಒಮ್ಮೆ ಕೂಡ ಸಂಸತ್ ಅಧಿವೇಶನಕ್ಕೆ ಹಾಜರಾಗದೆ  ತೀವೃ ಟೀಕೆಗಳಿಗೆ ಒಳಗಾಗಿದ್ದಾರೆ

41 ವರ್ಷದ ಸಚಿನ್  ಜಗತ್ತಿನ ಸರ್ವಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರೆಂದು  ಗುರುತಿಸಲ್ಪಡುತ್ತಾರೆ. 2012ರಲ್ಲಿ ರಾಜ್ಯಸಭಾ ಸದಸ್ಯರಾಗಿ  ಪ್ರಮಾಣವಚನ ಸ್ವೀಕರಿಸಿದ್ದ ಅವರು ಆ ಸಮಯದಲ್ಲಿ  ಕ್ರೀಡೆಗೆ ಮುಕ್ತ ಬೆಂಬಲ ನೀಡುತ್ತೇನೆಂದು ವಾಗ್ದಾನ ಮಾಡಿದ್ದರು. 
 
ಕಳೆದ ನವೆಂಬರ್ 2013ರಲ್ಲಿ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದರಿಂದ, ಈ ಬಾರಿಯ ಅಧಿವೇಶನದಲ್ಲಿ ಅವರು ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ ಎಂದು ಪರಿಭಾವಿಸಲಾಗಿತ್ತು. ಆದರೆ ಆ ನಿರೀಕ್ಷೆ ಹುಸಿಯಾಯಿತು. ಹಾಗಾಗಿ ಅವರ ಹೆಸರನ್ನು ಉಲ್ಲೇಖಿಸಲು ಹೆದರಿದರೂ, ಕೆಲವು ಸಂಸದರು ಪರೋಕ್ಷವಾಗಿ ಅವರ ವಿರುದ್ಧ ಟೀಕಾ ಪ್ರಹಾರ ಮಾಡಿದರು. 
 
ಸಂಸದೀಯ ದಾಖಲೆಗಳ ಪ್ರಕಾರ ಮಾಜಿ ಬ್ಯಾಟ್ಸ್‌ಮನ್  ಈ ವರ್ಷ ಒಂದೇ ಒಂದು ಅಧಿವೇಶನಕ್ಕೂ ಹಾಜರಾಗಿಲ್ಲ. 2013ರಲ್ಲಿ ಕೇವಲ 3 ದಿನ ಹಾಜರಾಗಿದ್ದನ್ನು ಬಿಟ್ಟರೆ, ಇಲ್ಲಿಯವರೆಗೆ ಯಾವುದೇ ಚರ್ಚೆಗಳಲ್ಲಿ ಭಾಗವಹಿಸಿಲ್ಲ. 
 
ಭಾರತೀಯ ಸಂಸದರು, ಶಾಸಕರು ಗೈರು ಹಾಜರಿ ವಿಷಯದಲ್ಲಿ ಗುರುತಿಸಲ್ಪಡುವುದು ಸಾಮಾನ್ಯ. ಆದರೆ ಮೇಲ್ವಿಚಾರಣೆ ಗುಂಪು ಪಿಆರ್‌ಎಸ್  ಶಾಸನ ಸಂಶೋಧನೆ ಪ್ರಕಾರ, ತೆಂಡೂಲ್ಕರ್ ಎಲ್ಲರಿಗಿಂತ ಕೆಟ್ಟ ದಾಖಲೆಯನ್ನು ಹೊಂದಿದ್ದಾರೆ ಕಳೆದ ವರ್ಷ ಕೇವಲ ಮೂರು ಪ್ರತಿಶತ ಹಾಜರಾತಿಯನ್ನು ಹೊಂದಿದ್ದ  ಅವರು ಈ ಬಾರಿ ಸಂಸತ್ತಿನ ಕಡೆ ಮುಖವನ್ನು ಹಾಕಿಲ್ಲ. 
 
"ಸಂಸತ್ತಿನಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಮಾಜದಲ್ಲಿ ಏನಾದರೂ ಬದಲಾವಣೆ ಮಾಡಲಿ ಎಂಬ ಉದ್ದೇಶದಿಂದ ಇಂತಹ ಸಂಸದರಿಗೆ ಒತ್ತು ಕೊಟ್ಟು ಆಯ್ಕೆ ಮಾಡಿಕೊಳ್ಳಲಾಗುತ್ತದೆ.  ಆದರೆ ಅವರನ್ನು  ಸಂಸತ್ತಿನಲ್ಲಿ ನಾನು ಒಮ್ಮೆ ಕೂಡ ನೋಡಿಲ್ಲ"  ಎಂದು ಸಚಿನ್ ಹೆಸರನ್ನು ಉಲ್ಲೇಖಿಸದೇ ಹೇಳಿದರು ಸಮಾಜವಾದಿ  ಸಂಸದ ನರೇಶ್ ಅಗ್ರವಾಲ್. 
 
ಕ್ರಿಕೆಟ್ ಆಟದ ಎರಡೂ ಸ್ವರೂಪಗಳಲ್ಲಿ ಕೂಡ ಜಗತ್ತಿನಲ್ಲಿಯೇ ಅತಿ ರನ್ ಗಳಿಸಿರುವ ಸಚಿನ್, 200 ಟೆಸ್ಟ್‌ಗಳನ್ನಾಡಿ  15.921 ರನ್ ಗಳಿಸಿ ನಿವೃತ್ತರಾಗಿದ್ದರು. 
 
ಕಲೆ, ವಿಜ್ಞಾನ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಮೀಸಲಾಗಿಡಲಾಗುವ ರಾಜ್ಯಸಭೆಯ 12 ಸೀಟುಗಳಲ್ಲಿ ಒಂದನ್ನು ಸಚಿನ್ ಅವರಿಗೆ ನೀಡಲಾಗಿತ್ತು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments