Select Your Language

Notifications

webdunia
webdunia
webdunia
webdunia

ನಟನೆಗಿಳಿಯುತ್ತಿದ್ದಾರೆ ಸಚಿನ್ ತೆಂಡೂಲ್ಕರ್?

ನಟನೆಗಿಳಿಯುತ್ತಿದ್ದಾರೆ ಸಚಿನ್ ತೆಂಡೂಲ್ಕರ್?
ಮುಂಬೈ , ಶುಕ್ರವಾರ, 9 ಜನವರಿ 2015 (10:29 IST)
ಎರಡು ದಶಕಗಳ ಕಾಲ ಕ್ರಿಕೆಟ್‌ನಲ್ಲಿ ಬ್ಯಾಟ್ ಬೀಸಿದ್ದ ಸಚಿನ್ ಈಗ ಸಿನಿಮಾರಂಗದಲ್ಲಿ ತಮ್ಮ ಛಾಪನ್ನು ಮೂಡಿಸಲು ಮುಂದಾಗಿದ್ದಾರೆ. ಭಾರತೀಯ ಕ್ರಿಕೆಟ್ ಜಗತ್ತಿನ ದಂತಕಥೆ,
ಕ್ರಿಕೆಟ್ ದೇವರು ಭಾರತರತ್ನ ಸಚಿನ್ ತೆಂಡೂಲ್ಕರ್ ನಟನೆಗಿಳಿಯುತ್ತಿದ್ದಾರೆ. ತಮ್ಮದೇ ತಮ್ಮದೇ ಕಥೆಗೆ ತಾವೇ ಕಥಾನಾಯಕನಾಗಿ ಅವರು ಬಣ್ಣ  ಹಚ್ಚುತ್ತಿದ್ದಾರೆ.
 
 
ಲಂಡನ್ ಮೂಲದ ಬರಹಗಾರ-ಫಿಲ್ಮ್​ ಮೇಕರ್ ಜೇಮ್ಸ್ ಎರ್ಸ್ಕೈನ್ ಈ ಚಿತ್ರದ ನಿರ್ದೇಶನ ಮಾಡಲಿದ್ದು, ಇನ್ನೂ ಹೆಸರಿಡದ ಈ ಚಿತ್ರವನ್ನು 
ಮುಂಬೈ ಮೂಲದ ‘200 ನಾಟ್ ಔಟ್’ ನಿರ್ಮಾಣ ಸಂಸ್ಥೆ ಮುಂದಾಗಿದೆ. 90 ರಿಂದ 120 ನಿಮಿಷಗಳ ಚಿತ್ರ ಇದಾಗಲಿದೆ.
 
50 ಪ್ರತಿಶತ ಚಿತ್ರೀಕರಣ ಪೂರ್ಣವಾಗಿದ್ದು 2,000 ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಹೆಚ್ಚಿನ ಪಾಲು ಸಚಿನ್ ಜೀವನ ಸಾಧನೆಗಳ ಚಿತ್ರಣವಿರಲಿದೆ, ಆದರೆ ಇದು ಸಾಕ್ಷ್ಯಚಿತ್ರವೂ ಅಲ್ಲ, ಸಚಿನ್ ಅವರ ಜೀವನ ಚರಿತ್ರೆಯೂ ಅಲ್ಲ ಎನ್ನುತ್ತದೆ ನಿರ್ಮಾಣ ಸಂಸ್ಥೆ. 
 
ಸಚಿನ್ ಹೊಸ ಇನ್ನಿಂಗ್ಸ್ ದಾಖಲೆಯನ್ನು ಸೃಷ್ಟಿಸಲಿದೆ ಎಂದು ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. 

Share this Story:

Follow Webdunia kannada