Select Your Language

Notifications

webdunia
webdunia
webdunia
webdunia

ಭಾರತ, ರಷ್ಯಾ, ಚೀನಾ ಜಂಟಿ ಕಕ್ಷೀಯ ಕೇಂದ್ರ?

ಭಾರತ, ರಷ್ಯಾ, ಚೀನಾ ಜಂಟಿ ಕಕ್ಷೀಯ ಕೇಂದ್ರ?
ಮಾಸ್ಕೋ , ಬುಧವಾರ, 28 ಜನವರಿ 2015 (13:10 IST)
ಎಲ್ಲವೂ ಅಂದುಕೊಂಡಂತೆ ನಡೆದರೆ ಮಾನವ ನಿಯಂತ್ರಿತ ಬಾಹ್ಯಾಕಾಶ ಕೇಂದ್ರ ಮುಂದಿನ ಕೆಲವೇ ವರ್ಷಗಳಲ್ಲ ನಿರ್ಮಾಣವಾಗಲಿದೆ. ಈ ಕುರಿತು ರಷ್ಯಾ ಭಾರತ ಮತ್ತು ಚೀನಾ ರಾಷ್ಟ್ರಗಳ ನಡುವೆ ಮಾತುಕತೆ ನಡೆಸಿ ಸಹಭಾಗಿತ್ವ ಪಡೆಯುವ ಸಾಧ್ಯತೆಯಿದೆ. ತಾಂತ್ರಿಕ ಸಹಯೋಗದ ಪ್ರಸ್ತಾವನೆಯನ್ನು ಭಾರತ ಮತ್ತು ಚೀನಾ ಮುಂದೆ ಇಟ್ಟು ಯೋಜನೆ ರೂಪಿಸಲಿದೆ ಎನ್ನಲಾಗುತ್ತಿದೆ.
ಈ ಜಂಟಿ ಮಾನವ ನಿರ್ಮಿತ ಬಾಹ್ಯಾಕಾಶ ಕೇಂದ್ರ ನಿರ್ಮಾಣದ ಬಗ್ಗೆ ಜುಲೈನಲ್ಲಿ ರಷ್ಯಾದ ಉಘಾದಲ್ಲಿ ನಡೆಯಲಿರುವ ಬ್ರಿಕ್ಸ್ ಸಮಾವೇಶದಲ್ಲಿ ರಷ್ಯಾ ಈ ಕುರಿತು ಪ್ರಸ್ತಾಪ ಮಾಡಲಿದೆ ಎಂದು ರಷ್ಯಾ ಸೇನಾ ಮತ್ತು ಕೈಗಾರಿಕಾ ಆಯೋಗ ತಿಳಿಸಿದೆ. ಬ್ರಿಕ್ಸ್ ರಾಷ್ಟ್ರಗಳಾದ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ಈ ಕುರಿತು ಸಹಕಾರ ನೀಡಲು ಈಗಾಗಲೆ ಉತ್ಸುಕವಾಗಿದೆ. ಆದರೆ ಭಾರತ ಮತ್ತು ಚೀನಾ ಈಗಾಗಲೇ ಮಾನವ ಸಹಿತ ಬಾಹ್ಯಾಕಾಶ ಯೋಜನೆಯಲ್ಲಿ ನಿರತವಾಗಿದೆ. ಈ ಹಿನ್ನೆಲೆಯಲ್ಲಿಯೇ ರಷ್ಯಾ ಭಾರತ-ಚೀನಾ ದೇಶಗಳ ಬೆಂಬಲ ಕೇಳಲಿದೆ ಎನ್ನಲಾಗಿದೆ.
 
ಜಂಟಿ ಬಾಹ್ಯಾಕಾಶ ಕೇಂದ್ರ ನಿಮಾಣದ ಯೋಜನೆ ರೂಪುರೇಷೆ ಸಿದ್ಧಪಡಿಸಲಾಗುತ್ತಿದ್ದು, ಸಮಾವೇಶದ ಕಾರ್ಯಸೂಚಿಯಲ್ಲಿ ಸಹ ಇದನ್ನು ಸೇರಿಸಿಕೊಲ್ಲಲು ರಷ್ಯಾ ನಿರ್ಧರಿಸಿದೆ ಎನ್ನಲಾಗುತ್ತಿದೆ.

Share this Story:

Follow Webdunia kannada