Webdunia - Bharat's app for daily news and videos

Install App

ಏಕತಾ ದಿನ : ಆಧುನಿಕ ಭಾರತದ ನಿಜವಾದ ವಾಸ್ತುಶಿಲ್ಪಿ ಸರ್ದಾರ್ ವಲ್ಲಭಬಾಯಿ ಪಟೇಲ್

Webdunia
ಶುಕ್ರವಾರ, 31 ಅಕ್ಟೋಬರ್ 2014 (11:49 IST)
ಉಕ್ಕಿನ ಮನುಷ್ಯ, ದೇಶದ ಪ್ರಥಮ ಗೃಹಮಂತ್ರಿ ಸರ್ದಾರ್ ವಲ್ಲಭಬಾಯಿ ಪಟೇಲರ 139ನೇ ಜನ್ಮ ದಿನಾಚರಣೆಯ ನಿಮಿತ್ತ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ 'ಏಕತಾ ಓಟ'ಕ್ಕೆ ಚಾಲನೆ ನೀಡಿದರು.

ರಾಜಧಾನಿಯ ಇಂಡಿಯಾಗೇಟ್‌‌ನಿಂದ ಪ್ರಾರಂಭವಾದ ಓಟದಲ್ಲಿ  ಪ್ರಧಾನಿ ಮೋದಿ, ರಾಷ್ಟ್ರಪತಿ ಪ್ರಣವ್ ಮುಖರ್ಜಿ ಕೂಡ ಭಾಗವಹಿಸಿದ್ದು ವಿಶೇಷವಾಗಿತ್ತು. ರಕ್ಷಣಾ ಮತ್ತು ಹಣಕಾಸು ಸಚಿವ ಅರುಣ್ ಜೇಟ್ಲಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು, ದೆಹಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ , ಕ್ರಿಕೆಟರ್ ಗೌತಮ್ ಗಂಭೀರ್, ಬಿಜೆಪಿ ಕಾರ್ಯಕರ್ತರು ಸೇರಿದಂತೆ ಸಾವಿರಾರು ಸಾರ್ವಜನಿಕರು ಓಟದಲ್ಲಿ ಪಾಲ್ಗೊಂಡಿದ್ದರು.
 
ಇಂಡಿಯಾಗೇಟ್‌ನಿಂದ ವಿಜಯ್ ಚೌಕ್ ವರೆಗಿನ ಸುಮಾರು 1.4 ಕಿ.ಮೀ ದೂರದವರೆಗೆ ಓಟ ನಡೆಯಿತು.
 
ಓಟವನ್ನು ಪ್ರಾರಂಭಿಸುವ ಮೊದಲು ಪಟೇಲರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ಮಾತನಾಡಿದ  ಪ್ರಧಾನಿ ನರೇಂದ್ರ ಮೋದಿ, "ಸರ್ದಾರ್ ವಲ್ಲಭಬಾಯಿ ಪಟೇಲ್ ಆಧುನಿಕ ಭಾರತದ ನಿಜವಾದ ವಾಸ್ತುಶಿಲ್ಪಿ. ಅವರ ಜೀವನ ನಮಗೆ ಆದರ್ಶವಾಗಿದೆ. ಅವರ ಧೈರ್ಯ ಮತ್ತು ದೇಶ ಪ್ರೇಮ ಸರ್ವಕಾಲಕ್ಕೂ ಮಾದರಿಯಾಗಿದೆ.  ದೇಶಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿದ ಅವರ ಹೆಸರು ಭಾರತದ ಇತಿಹಾಸದಲ್ಲಿ ಎಂದೆಂದೂ ಅಮರ. ಇಂದು ಅವರ ಜನ್ಮದಿನ. ತಮ್ಮ ಜೀವನವನ್ನು ದೇಶಕ್ಕೆ ಸರ್ಮಿಪಿಸಿದ, ಪಟೇಲರ ಕೊಡುಗೆಯನ್ನು ದೇಶ ಎಂದಿಗೂ ಮರೆಯುವುದಿಲ್ಲ. ಪಟೇಲ್ ಏಕತೆಗಾಗಿ ಶ್ರಮಿಸಿದ್ದರು. ದೇಶವನ್ನು ಒಗ್ಗೂಡಿಸುವಲ್ಲಿ  ಅವರ ಸೇವೆಯನ್ನು ಸ್ಮರಿಸಿಕೊಂಡು,ಅವರ ಜನ್ಮದಿನವಾದ ಅಕ್ಟೋಬರ್ 31ನ್ನು 'ಏಕತೆಯ ದಿನ'ವನ್ನಾಗಿ ಆಚರಿಸಲಾಗುತ್ತದೆ" ಎಂದು ಘೋಷಿಸಿದರು.
 
"ಭಾರತದ ಇತಿಹಾಸವನ್ನು ಅಳಿಸಲು ಸಾಧ್ಯವಿಲ್ಲ. ಇತಿಹಾಸ ಮರೆತ ದೇಶ, ಇತಿಹಾಸವನ್ನು ಸೃಷ್ಟಿಸಲಾರದು. ನಮ್ಮ ಸಿದ್ಧಾಂತಗಳಿಗೆ ತಕ್ಕಂತೆ ನಾವು ಇತಿಹಾಸವನ್ನು ಬದಲಿಸಲಾಗದು.  ಭಾರತದ ಇತಿಹಾಸದಲ್ಲಿ ಪಟೇಲರ ಹೆಸರನ್ನು ಅಳಿಸಲಾಗದು.  ಅವರೆಂದಿಗೂ  ಅಜರಾಮರ. ಗಾಂಧಿ ಮತ್ತು ಪಟೇಲರ ಜೋಡಿ ಅದ್ಬುತವಾಗಿತ್ತು. ಪಟೇಲರಿಲ್ಲದೆ ಗಾಂಧಿ  ಅಪೂರ್ಣ" ಎಂದು ಮೋದಿ ಅಭಿಪ್ರಾಯ ಪಟ್ಟರು.
 
ಏಕತೆಯ ಓಟವನ್ನು ದೇಶಾದ್ಯಂತ ನಡೆಸಲಾಗುತ್ತಿದ್ದು, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಹೈದರಾಬಾದಿನಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಬೆಂಗಳೂರಿನಲ್ಲಿ ರೇಲ್ವೇ ಸಚಿವರಾದ ಸದಾನಂದ ಗೌಡ  ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments