Webdunia - Bharat's app for daily news and videos

Install App

ಶೀಘ್ರದಲ್ಲೇ ಆರ್‌ಟಿಓ ರದ್ದು : ಕೇಂದ್ರ ಸಚಿವ ನಿತಿನ್‌ ಗಡ್ಕರಿ

Webdunia
ಬುಧವಾರ, 20 ಆಗಸ್ಟ್ 2014 (09:33 IST)
ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಓ)ಗಳನ್ನು ವಿಸರ್ಜಿಸಿ, ಇನ್ನು ಕೆಲವೇ ತಿಂಗಳಲ್ಲಿ  ದಕ್ಷ ಪರ್ಯಾಯ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದೆಂದು  ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. 

ಕಾರ್ಯನಿರತ ಪತ್ರಕರ್ತರ ಯೂನಿಯನ್ ಪುಣೆ (PUWJ) ,  ಜೆಎಸ್ ಕರಂಡಿಕರ್  ಸ್ಮರಣಾರ್ಥ ಆಯೋಜಿಸಿದ್ದ ಸಮಾರಂಭವೊಂದರಲ್ಲಿ ಮಾತನಾಡುತ್ತಿದ್ದ ಅವರು ''ದೇಶದಲ್ಲಿ ಕೆಲವು ಹಳತಾದ ಕಾನೂನುಗಳು ಮತ್ತು ವ್ಯವಸ್ಥೆಗಳು ಜಾರಿಯಲ್ಲಿದ್ದು, ಅವುಗಳನ್ನು ವಿಸರ್ಜಿಸಬೇಕಾದ ಅಗ್ಯವಿದೆ. ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಓ)ನಂತ ಕೆಲವು ವ್ಯವಸ್ಥೆಗಳನ್ನು ಶೀರ್ಘದಲ್ಲೇ ರದ್ದುಗೊಳಿಸಲಾಗುವುದು. ಆರ್‌ಟಿಓ ಅಗತ್ಯ ಕಾಣುತ್ತಿಲ್ಲ.  ಹಾಗಾಗಿ ಈ ವ್ಯವಸ್ಥೆಗೆ ಪರ್ಯಾಯವಾಗಿರುವ ಕಾನೂನನ್ನು ಜಾರಿದೆ ತರಲಾಗುವುದು'' .
 
ಆರ್‌ಟಿಓ ಅಧಿಕಾರಿಗಳಿಂದ ನಾಗರಿಕರ ಮೇಲಾಗುತ್ತಿರುವ ಶೋಷಣೆ ಕುರಿತು ಪ್ರಸ್ತಾಪಿಸಿದ ಅವರು  '' ಅಲ್ಲಿ ನಡೆಯುವುದು ಕುರುಡು ಕಾಂಚಾಣದ ನರ್ತನವೊಂದೇ (ತಿಥೆ ಲಕ್ಷ್ಮಿದರ್ಶನಾಚ ಖೇಲ್ ಚಲ್ತೋ). ಇದರಿಂದ ನಾಗರಿಕರು ಭಾರಿ ಕಿರುಕುಳ ಅನುಭವಿಸುತ್ತಿದ್ದಾರೆ. * 
ಸಾರಿಗೆ ಶೋಷಕರನ್ನು ದಸ್ತಗಿರಿ ಮಾಡಲು ನೆರವಾಗುವ  ಹೊಸ  ವ್ಯವಸ್ಥೆಯನ್ನು  ಅಳವಡಿಸಲಾಗುವುದು.  ಚಾಲನಾ ಪರವಾನಗಿ ನೀಡುವ ವ್ಯವಸ್ಥೆಯೂ ಪಾರದರ್ಶಕವಾಗಲಿದೆ. ನಿಜ ಹೇಳಬೇಕೆಂದರೆ  ಆರ್‌ಟಿಓದ ಅಗತ್ಯವೇ ಇರದು'' .
 
''ಕಾಯಿದೆ ಸಂಪೂರ್ಣವಾಗಿ ಹಳತಾಗಿದ್ದು, ಈಗಿನ ಪರಿಸ್ಥಿತಿಗೆ ಹೊಂದುವಂತೆ ಇಲ್ಲ. ಹಾಗಾಗಿ ಕಾನೂನಿಗೆ ತಿದ್ದುಪಡಿ ತರಬೇಕಿದೆ. ಅಮೆರಿಕ, ಕೆನಡಾ, ಸಿಂಗಾಪುರ, ಜಪಾನ್ , ಜರ್ಮನಿ ಹಾಗೂ ಬ್ರಿಟನ್ ಮುಂತಾದ ಅಭಿವೃದ್ಧಿ ರಾಷ್ಟ್ರಗಳಲ್ಲಿ ಜಾರಿಯಿರುವ ಸಂಚಾರ ವ್ಯವಸ್ಥೆಯ ಮಾದರಿಯ ಸಹಾಯ ಪಡೆದುಕೊಂಡು ವಿಧೇಯಕದ ಕರಡು ಸಿದ್ಧಪಡಿಸಲಾಗಿದೆ,''ಎಂದು ಅವರು ಹೇಳಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments