Select Your Language

Notifications

webdunia
webdunia
webdunia
webdunia

ಕೇರಳದಲ್ಲಿ ಆರೆಸ್ಸೆಸ್‌ ಕಾರ್ಯಕರ್ತನ ಹತ್ಯೆ: ನಾಳೆ ಬಂದ್‌ಗೆ ಕರೆ

ಕೇರಳದಲ್ಲಿ ಆರೆಸ್ಸೆಸ್‌ ಕಾರ್ಯಕರ್ತನ ಹತ್ಯೆ: ನಾಳೆ ಬಂದ್‌ಗೆ ಕರೆ
ಕಣ್ಣುರ್ , ಮಂಗಳವಾರ, 2 ಸೆಪ್ಟಂಬರ್ 2014 (13:24 IST)
ಕೇರಳದ ಕಣ್ಣುರಿನಲ್ಲಿ ಸಿಪಿಎಂ ಕಾರ್ಯಕರ್ತರು ಎಂದು ಶಂಕಿಸಲಾದ ಆರೋಪಿಗಳು ಆರೆಸ್ಸೆಸ್ ಕಾರ್ಯಕರ್ತನನ್ನು ಇರಿದು ಹತ್ಯೆ ಮಾಡಿದ ದಾರುಣ ಘಟನೆ ವರದಿಯಾಗಿದೆ. 
 
ಆರೆಸ್ಸೆಸ್ ಜಿಲ್ಲಾ ಮಟ್ಟದ ಪದಾಧಿಕಾರಿಯಾಗಿದ್ದ ಇ-ಮನೋಜ್ ಎಂಬಾತನನ್ನು ಗುಂಪೊಂದು ರಸ್ತೆಯಲ್ಲಿ ಒತ್ತಾಯಪೂರ್ವಕವಾಗಿ ತಡೆದು ಆತನ ಮೇಲೆ ಕಚ್ಚಾ ಬಾಂಬ್ ಎಸಗಿ ಹತ್ಯೆ ಮಾಡಿದ ನಂತರ ಪರಾರಿಯಾಗಿದೆ. 
 
ಆರೆಸ್ಸೆಸ್ ಕಾರ್ಯಕರ್ತನ ಹತ್ಯೆಯನ್ನು ವಿರೋಧಿಸಿ ಸ್ವಯಂ ಸೇವಕರು ನಾಳೆ ಕೇರಳ ಬಂದ್‌ಗೆ ಕರೆ ನೀಡಿದ್ದಾರೆ.
 
ಕೇರಳ ರಾಜ್ಯಕ್ಕೆ ಭೇಟಿ ನೀಡಲಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಸುಮಾರು 250 ಆರೆಸ್ಸೆಸ್ ಕಾರ್ಯಕರ್ತರನ್ನು ಸಿಪಿಎಂ ಪಕ್ಷದ ಕಾರ್ಯಕರ್ತರು ಹತ್ಯೆ ಮಾಡಿದ್ದಾರೆ. ಇಂತಹ ದೌರ್ಜನ್ಯದ ವಿರುದ್ಧ ನ್ಯಾಯಾಲಯ ಮತ್ತು ಜನತೆಯತ್ತ ತೆಗೆದುಕೊಂಡು ಹೋಗಲಾಗುವುದು ಎಂದು ಹೇಳಿದ್ದಾರೆ. 
 
ಕೇರಳದ ಕಣ್ಣುರು ಜಿಲ್ಲೆ ಆರೆಸ್ಸೆಸ್ ಮತ್ತು ಸಿಪಿಎಂ ಕಾರ್ಯಕರ್ತರ ನಡುವಣ ಭಾರಿ ಪ್ರಮಾಣದ ಹಿಂಸಾಚಾರಕ್ಕೆ ಖ್ಯಾತಿಯನ್ನು ಪಡೆದಿದೆ. ಆದರೆ, ಕಳೆದ ಕೆಲ ವರ್ಷಗಳಿಂದ ಹಿಂಸಾಚಾರ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
 
 

Share this Story:

Follow Webdunia kannada