Select Your Language

Notifications

webdunia
webdunia
webdunia
webdunia

ನರೇಂದ್ರ ಮೋದಿ ಆರ್ಥಿಕ ನೀತಿ ಸರಿಯಿಲ್ಲ, ಮೊದ್ಲು ಹಣದುಬ್ಬರ ನಿಯಂತ್ರಿಸಲಿ: ಆರೆಸ್ಸೆಸ್ ಕಿಡಿ

ನರೇಂದ್ರ ಮೋದಿ ಆರ್ಥಿಕ ನೀತಿ ಸರಿಯಿಲ್ಲ, ಮೊದ್ಲು ಹಣದುಬ್ಬರ ನಿಯಂತ್ರಿಸಲಿ: ಆರೆಸ್ಸೆಸ್ ಕಿಡಿ
ನವದೆಹಲಿ , ಬುಧವಾರ, 30 ಜುಲೈ 2014 (19:04 IST)
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆರ್ಥಿಕ ನೀತಿಗಳ ಬಗ್ಗೆ  ಬಿಜೆಪಿಯ ಸೈದ್ಧಾಂತಿಕ ಗುರು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಅಸಮಾಧಾನ ವ್ಯಕ್ತಪಡಿಸಿದೆ. 

ಹಣದುಬ್ಬರ ಗಗನಕ್ಕೇರುವುದರ ಬಗ್ಗೆ ವ್ಯಾಕುಲಗೊಂಡಿರುವ ಆರ್‌ಎಸ್ಎಸ್ ಇತ್ತೀಚಿಗೆ  ಬಿಜೆಪಿಯ ನೂತನ ಅಧ್ಯಕ್ಷ ಅಮಿತ್ ಶಾ ರವನ್ನು  ದೆಹಲಿ ಮತ್ತು ನಾಗ್ಪುರ್‌ಗಳಲ್ಲಿ ಎರಡು ಸಲ ಭೇಟಿ ಮಾಡಿತು. ಆ ಸಂದರ್ಭದಲ್ಲಿ ಹಣದುಬ್ಬರವನ್ನು  ಸಮರ್ಪಕವಾಗಿ ನಿರ್ವಹಿಸುವಲ್ಲಿ ಕೇಂದ್ರ ವಿಫಲವಾಗಿದ್ದು, ಇದು ಮುಂಬರುವ ವಿಧಾನಸಭಾ ಚುನಾವಣೆಯ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕವನ್ನು ಅದು ವ್ಯಕ್ತಪಡಿಸಿತು. 
 
ಉತ್ತರಾಖಂಡ್‌ನ ಉಪಚುನಾವಣೆಯಲ್ಲಿ ಕಾಂಗ್ರೆಸ್ಸಿನ ಭರ್ಜರಿ ಗೆಲುವು ಆರ್‌ಎಸ್ಎಸ್ ಚಿಂತೆಯನ್ನು ಹೆಚ್ಚಿಸಿದ್ದು, ಹಾಗಾಗಿ ಬೆಲೆ ಹತೋಟಿ ಕುರಿತು ಬಿಜೆಪಿ ಸರಕಾರ ಪುನಃ ಯೋಚಿಸಬೇಕು ಎಂದು ಆರೆಸ್ಸೆಸ್ ಒತ್ತಾಯಿಸಿದೆ. 

Share this Story:

Follow Webdunia kannada