Select Your Language

Notifications

webdunia
webdunia
webdunia
webdunia

ಶನಿ ಶಿಂಗ್ಣಾಪುರ್ ದೇವಾಲಯ ಪ್ರವೇಶಕ್ಕೆ ಮಹಿಳೆಯರಿಗೆ ನಿಷೇಧ: ಆರೆಸ್ಸೆಸ್ ಸಮರ್ಥನೆ

ಶನಿ ಶಿಂಗ್ಣಾಪುರ್ ದೇವಾಲಯ ಪ್ರವೇಶಕ್ಕೆ ಮಹಿಳೆಯರಿಗೆ ನಿಷೇಧ: ಆರೆಸ್ಸೆಸ್ ಸಮರ್ಥನೆ
ಶನಿ ಶಿಂಘ್ಣಾಪುರ್ , ಮಂಗಳವಾರ, 2 ಫೆಬ್ರವರಿ 2016 (16:17 IST)
ಶನಿ ಶಿಂಘ್ಣಾಪುರ್ ದೇವಾಲಯದೊಳಗೆ ಮಹಿಳೆಯರ ಪ್ರವೇಶ ನಿಷೇಧವನ್ನು ಸಮರ್ಥಿಸಿಕೊಂಡ ಆರೆಸ್ಸೆಸ್ ಮುಖವಾಣಿ ಆರ್ಗನೇಜರ್ ಪತ್ರಿಕೆ,ವಿವಾದವನ್ನು ಮಾತುಕತೆಯ ಮೂಲಕ ಇತ್ಯರ್ಥಗೊಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದೆ.
 
ಶನಿ ಶಿಂಘ್ಣಾಪುರ್ ಗರ್ಭಗುಡಿಯಲ್ಲಿ ಶತ ಶತಮಾನಗಳಿಂದ ಮಹಿಳೆಯರ ಪ್ರವೇಶಕ್ಕೆ ಸಂಪ್ರದಾಯದಲ್ಲಿ ನಿಷೇಧವಿದೆ. ಒಂದು ವೇಳೆ ಮಹಿಳೆಯರನ್ನು ಗರ್ಭಗುಡಿ ಪ್ರವೇಶ ಕುರಿತಂತೆ ಚರ್ಚೆ ನಡೆಸಿ ಉತ್ತಮ ನಿರ್ಧಾರಕ್ಕೆ ಬರುವುದು ಸೂಕ್ತ ಎಂದು ತಿಳಿಸಿದೆ. 
 
ಸ್ವಾತಂತ್ರ್ಯಪೂರ್ವದಲ್ಲಿ ಬಾಲ ಗಂಗಾಧರ್ ತಿಲಕ್, ನಿರಂತರ ಮಾತುಕತೆಯ ಮೂಲಕ ಸುಧಾರಣೆ ತರಬಹುದು. ಪ್ರತಿಯೊಂದು ಹಂತದಲ್ಲೂ ಸಮಾಜ ಬದಲಾವಣೆಯತ್ತ ಸಾಗುತ್ತದೆ ಎಂದು ಹೇಳಿಕೆ ನೀಡಿರುವುದಾಗಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ತಮ್ಮ ವಿಜಯದಶಮಿ ಭಾಷಣದಲ್ಲಿ ಉಲ್ಲೇಖಿಸಿದ್ದರು.
  
ವಿಚಾರವಾದಿಗಳು ಜನತೆಯ ಭಾವನೆಗಳಿಗೆ ಧಕ್ಕೆ ತಂದು ಒತ್ತಾಯಪೂರ್ವಕವಾಗಿ ದೇವರನ್ನು ಪೂಜಿಸಲು ಬಯಸುತ್ತಾರೆಯೇ ಎನ್ನುವುದನ್ನು ವಿವರಿಸಬೇಕು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದು ಕೇವಲ ಹಟವನ್ನು ಸಾಧಿಸುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಕಿಡಿಕಾರಿದೆ.
 
ಮಹಾರಾಷ್ಟ್ರದಲ್ಲಿರುವ ಶನಿ ಶಿಂಗ್ಣಾಪುರ್‌ದಲ್ಲಿ ಕಳೆದ 400 ವರ್ಷಗಳಿಂದ ಮಹಿಳೆಯರು ಗರ್ಭಗುಡಿಯನ್ನು ಪ್ರವೇಶಿಸುವುದಕ್ಕೆ ನಿಷೇಧವಿದೆ. ಆದಾಗ್ಯೂ  
 
ಮಹಿಳಾ ಕಾರ್ಯಕರ್ತೆ ತೃಪ್ತಿ ದೇಸಾಯಿ ನೇತೃಕತ್ವದ ಭೂಮಾತಾ ಬ್ರಿಗೇಡ್ ಮಹಿಳೆಯರ ಗುಂಪು ಒತ್ತಾಯಪೂರ್ವಕವಾಗಿ ಗರ್ಭಗುಡಿಯನ್ನು ಪ್ರವೇಶಿಸಲು ಸಾಂಪ್ರದಾಯಗಳನ್ನು ಮುರಿಯಲು ಪ್ರಯತ್ನಿಸಿದೆ ಎಂದು ಆರೆಸ್ಸೆಸ್ ಮುಖವಾಣಿ ಆರ್ಗನೇಜರ್ ಟೀಕಿಸಿದೆ.  

Share this Story:

Follow Webdunia kannada