Webdunia - Bharat's app for daily news and videos

Install App

ಗುರಿ ತಪ್ಪಿದ ಗೋಡ್ಸೆ ನೆಹರು ಬದಲು ಗಾಂಧೀಜಿಗೆ ಗುಂಡಿಟ್ಟ: ಆರ್‌ಎಸ್ಎಸ್ ಮುಖವಾಣಿ

Webdunia
ಶನಿವಾರ, 25 ಅಕ್ಟೋಬರ್ 2014 (10:16 IST)
ಕೇರಳ ಆರ್‌ಎಸ್ಎಸ್ ಘಟಕದ ಮುಖವಾಣಿ ‘ಕೇಸರಿ’ಯಲ್ಲಿ ಪ್ರಕಟವಾದ ಲೇಖನವೊಂದು ಗಂಭೀರ ವಿವಾದವೊಂದನ್ನು ಸೃಷ್ಟಿಸಿದ್ದು, ಕೇರಳದಾದ್ಯಂತ ಕಾಂಗ್ರೆಸ್ ಪಕ್ಷದವರು ಕೆರಳಿ ನಿಂತಿದ್ದಾರೆ. 

ಚಾಲಕುಡಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿದ್ದ ಬಿ. ಗೋಪಾಲಕೃಷ್ಣನ್ ಬರೆದಿರುವ  ಈ ಲೇಖನ ಸಂಘದ ಮುಖವಾಣಿ ‘ಕೇಸರಿ’ಯಲ್ಲಿ ಅಕ್ಟೋಬರ್ 17 ರಂದು  ಪ್ರಕಟವಾಗಿದೆ. "ವಾಸ್ತವವಾಗಿ ನಾಥೂರಾಮ್ ಗೋಡ್ಸೆ, ಜವಾಹರಲಾಲ್ ನೆಹರೂರವರನ್ನು ಕೊಲ್ಲಬೇಕಿತ್ತು. ಗುರಿ ತಪ್ಪಿದ ಗೋಡ್ಸೆ ಗಾಂಧೀಜಿಯವರ ಹತ್ಯೆ ಮಾಡಿದ. ಗೋಡ್ಸೆ ಆಯ್ಕೆಯಲ್ಲಿ ತಪ್ಪಾಗಿದೆ" ಎಂದು ಬಿಜೆಪಿ ನಾಯಕ ಬರೆದಿದ್ದಾರೆ.
 
"ನೆಹರು ಪರಮ ಸ್ವಾರ್ಥಿ. ಅವರದು ಸ್ವಾರ್ಥ ರಾಜಕೀಯ. ದೇಶ ವಿಭಜನೆ ಹಾಗೂ ಗಾಂಧಿ ಹತ್ಯೆಗಳಂತಹ ರಾಷ್ಟ್ರೀಯ ದುರಂತಗಳಿಗೆ ನೆಹರೂರವರರೇ ಕಾರಣ. ಅವರಿಂದಲೇ ದೇಶ ವಿಭಜಿಸಲ್ಪಟ್ಟಿತು" ಎಂದು ಲೇಖನದಲ್ಲಿ ಕಟುವಾಗಿ ಆರೋಪಿಸಲಾಗಿದೆ. 
 
"ದೇಶ ವಿಭಜನೆಯ ಐತಿಹಾಸಿಕ ಹಿನ್ನೆಲೆಯ ಪ್ರಕಾರ ಗೋಡ್ಸೆ ಕೃತ್ಯದ ಮೌಲ್ಯಮಾಪನ ನಡೆಸಿದರೆ, ಗೋಡ್ಸೆ ತಪ್ಪು ವ್ಯಕ್ತಿಗೆ ಗುರಿಯಿಟ್ಟಿದ್ದನೆಂದು ಇತಿಹಾಸದ ವಿದ್ಯಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಬಹುದು. ಒಂದು ವೇಳೆ ಹಾಗಾದರೆ ಅವರನ್ನು ದೂರುವಂತಿಲ್ಲ. ದೇಶ ವಿಭಜನೆಗೆ ನೆಹರೂರವರೇ ಸಂಪೂರ್ಣ ಹೊಣೆಗಾರರಾಗಿದ್ದರು" ಎಂದು ಲೇಖನ ಹೇಳಿದೆ.
 
"ಗಾಂಧೀಜಿಯವರಿಗೆ ಗೌರವದಿಂದ ತಲೆಬಾಗಿ ಕ್ಷಮಿಸಿ ಎಂದು ಕೇಳಿದ ನಂತರ ಗೋಡ್ಸೆ ಅವರ ಎದೆಗೆ ಗುಂಡು ಹಾರಿಸಿದ. ಆತ ನೆಹರೂರವರಂತೆ ಗಾಂಧೀಜಿಯವರ ಬೆನ್ನಿಗೆ ಇರಿಯಲಿಲ್ಲ. ನೆಹರುಗಿಂತ ಗೋಡ್ಸೆ ಉತ್ತಮ ವ್ಯಕ್ತಿ. ಆತ ಬಾಪೂಜಿ ಹತ್ಯೆ ಮಾಡುವ ಮೊದಲೇ ನೆಹರುರವರು ಮಾನಸಿಕವಾಗಿ ರಾಷ್ಟ್ರಪಿತನನ್ನು ಕೊಂದಿದ್ದರು" ಎಂದಿರುವ ಬಿಜೆಪಿ ನಾಯಕ ಗೋಪಾಲಕೃಷ್ಣನ್ ಗೋಡ್ಸೆಯನ್ನು ಸಮರ್ಥಿಸಿಕೊಂಡಿದ್ದಾರೆ. 
 
ಈ ಲೇಖನ ಕೇರಳದಲ್ಲಿ ಕೋಲಾಹಲವನ್ನು ಸೃಷ್ಟಿಸಿದ್ದು,  ಕಾಂಗ್ರೆಸ್ ನಾಯಕರು ಇದನ್ನು ಬಲವಾಗಿ ಖಂಡಿಸಿದ್ದಾರೆ. ಪತ್ರಿಕೆ ಮತ್ತು ಬಿಜೆಪಿ ನಾಯಕ ಗೋಪಾಲಕೃಷ್ಣನ್ ವಿರುದ್ಧ ತನಿಖೆ ನಡೆಸಲು ಕೇರಳ ಸರ್ಕಾರ ಆದೇಶ ನೀಡಿದೆ. 
 
ಸಂಘದ ಮುಖ್ಯ ಕಾರ್ಯಾಲಯ ಅಥವಾ ಸರಸಂಚಾಲಕರಾದ ಮೋಹನ್ ಭಾಗವತ್ ಅವರು ಈ ಕುರಿತು ಇನ್ನೂ ಪ್ರತಿಕ್ರಿಯೆ ನೀಡಿಲ್ಲ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments