Select Your Language

Notifications

webdunia
webdunia
webdunia
webdunia

ಆರೆಸ್ಸೆಸ್ ದೇಶದ ನಂಬರ್ ಒನ್ ಭಯೋತ್ಪಾದಕ ಸಂಘಟನೆ: ಮಾಜಿ ಪೊಲೀಸ್ ಅಧಿಕಾರಿ

ಆರೆಸ್ಸೆಸ್ ದೇಶದ ನಂಬರ್ ಒನ್ ಭಯೋತ್ಪಾದಕ ಸಂಘಟನೆ: ಮಾಜಿ ಪೊಲೀಸ್ ಅಧಿಕಾರಿ
ಕೋಲ್ಕತಾ , ಶುಕ್ರವಾರ, 27 ನವೆಂಬರ್ 2015 (13:57 IST)
ದೇಶದಲ್ಲಿ ನಡೆದ 13 ಭಯೋತ್ಪಾದಕ ಪ್ರಕರಣಗಳಲ್ಲಿ ಆರೆಸ್ಸೆಸ್ ಕಾರ್ಯಕರ್ತರು ಆರೋಪಿಗಳಾಗಿದ್ದರಿಂದ,ಹಿಂದುತ್ವ ಸಂಘಟನೆಯಾದ ಆರೆಸ್ಸೆಸ್, ದೇಶದ ನಂಬರ್ ಒನ್ ಭಯೋತ್ಪಾದಕ ಸಂಘಟನೆಯಾಗಿದೆ ಎಂದು ಮಹಾರಾಷ್ಟ್ರದ ಮಾಜಿ ಪೊಲೀಸ್ ಮಹಾ ನಿರ್ದೇಶಕ ಎಸ್‌.ಎಂ.ಮುಶ್ರಿಫ್ ವರ್ಣಿಸಿದ್ದಾರೆ.
ಆರ್‌ಡಿಎಕ್ಸ್ ಬಳಸಿದಂತಹ ಪ್ರಕರಣವು ಸೇರಿದಂತೆ ಒಟ್ಟು 13 ಭಯೋತ್ಪಾದಕ ಪ್ರಕರಣಗಳಲ್ಲಿ ಆರೆಸ್ಸೆಸ್ ಕಾರ್ಯಕರ್ತರ ವಿರುದ್ಧ ಚಾರ್ಚ್‌ಶೀಟ್ ಸಲ್ಲಿಸಲಾಗಿದೆ. ಒಂದು ವೇಳೆ, ಬಜರಂಗದಳವನ್ನು ಆರೆಸ್ಸೆಸ್‌ನೊಳಗೆ ಸೇರಿಸಿದಲ್ಲಿ 17 ಪ್ರಕರಣಗಳಾಗುತ್ತವೆ ಎಂದು ತಿಳಿಸಿದ್ದಾರೆ. 
 
ಕಳೆದ 2007ರಲ್ಲಿ ಹೈದ್ರಾಬಾದ್‌ನ ಮಸೀದಿಯಲ್ಲಿನ ಬಾಂಬ್ ಸ್ಫೋಟ, 2007ರಲ್ಲಿ ಸಂಜೋತಾ ಎಕ್ಸ್‌ಪ್ರೆಸ್, 2006 ಮತ್ತು 2008ರಲ್ಲಿ ಮಾಲೇಗಾಂವ್ ಸ್ಫೋಟಗಳಲ್ಲಿ ಆರೆಸ್ಸೆಸ್ ಕಾರ್ಯಕರ್ತರು ಭಾಗಿಯಾಗಿರುವುದು ನೋಡಿದಲ್ಲಿ ಆರೆಸ್ಸೆಸ್ ದೇಶದ ನಂಬರ್ ಒನ್ ಭಯೋತ್ಪಾದಕ ಸಂಘಟನೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದ್ದಾರೆ.
 
ಕೇಂದ್ರದಲ್ಲಿ ಯಾವುದೇ ಸರಕಾರವಿದ್ದರೂ ಕೇಸರಿ ಭಯೋತ್ಪಾದನೆ ಸಂಘಟನೆ ತನ್ನ ರಹಸ್ಯ ಕಾರ್ಯಾಚರಣೆಯನ್ನು ಮುಂದುವರಿಸುತ್ತದೆ. ಇತರ ಸಮುದಾಯಗಳನ್ನು ತುಳಿಯುವುದು ತನ್ನ ಪ್ರಾಬಲ್ಯವನ್ನು ಸಾಧಿಸುವುದು ಆರೆಸ್ಸೆಸ್ ಮುಖ್ಯ ಗುರಿಯಾಗಿದೆ ಎಂದು ತಿಳಿಸಿದ್ದಾರೆ.
 
ಆದಾಗ್ಯೂ , ದೇಶದಲ್ಲಿ ಅಸಹಿಷ್ಣುತೆ ವಾತಾವರಣ ಹೆಚ್ಚುತ್ತಿದೆ ಎನ್ನುವುದನ್ನು ತಾವು ಒಪ್ಪುವುದಿಲ್ಲ ಎಂದು ಮಹಾರಾಷ್ಟ್ರದ ಮಾಜಿ ಪೊಲೀಸ್ ಮಹಾ ನಿರ್ದೇಶಕ ಎಸ್‌.ಎಂ.ಮುಶ್ರಿಫ್ ಹೇಳಿದ್ದಾರೆ.
 
 

Share this Story:

Follow Webdunia kannada