Select Your Language

Notifications

webdunia
webdunia
webdunia
webdunia

ದೇಶದಲ್ಲಿ ಆರೆಸ್ಸೆಸ್ ಮಾಡಿಸಿದ ಕೋಮುಗಲಭೆಗಳಿಗೆ ಲೆಕ್ಕವಿಲ್ಲ: ಕೇರಳ ಸಿಎಂ

ದೇಶದಲ್ಲಿ ಆರೆಸ್ಸೆಸ್ ಮಾಡಿಸಿದ ಕೋಮುಗಲಭೆಗಳಿಗೆ ಲೆಕ್ಕವಿಲ್ಲ: ಕೇರಳ ಸಿಎಂ
ಮಂಗಳೂರು , ಶನಿವಾರ, 25 ಫೆಬ್ರವರಿ 2017 (16:58 IST)
ದೇಶದ ಸ್ವಾತಂತ್ರ್ಯ ಸಂದರ್ಭದಲ್ಲಿ ಆರೆಸ್ಸೆಸ್ ದೇಶಕ್ಕೆ ಮೋಸ ಮಾಡಿತ್ತು ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ವಾಗ್ದಾಳಿ ನಡೆಸಿದ್ದಾರೆ.
 
ಕರಾವಳಿ ಸೌಹಾರ್ಧ ಸಮಾವೇಶದಲ್ಲಿ ಭಾಷಣ ಮಾಡಿದ ಸಿಎಂ ಪಿಣರಾಯಿ ವಿಜಯನ್, ಸ್ವಾತಂತ್ರ್ಯ ಹೋರಾಟದ ವೇಳೆ ಆರೆಸ್ಸೆಸ್ ನಡೆ ಸರಿ ಇರಲಿಲ್ಲ. ಇಡೀ ದೇಶದ ಜನತೆ ಒಂದಾಗಬೇಕು ಎಂದು ಬಯಸುವುದಿಲ್ಲ. ಭಿನ್ನತೆ ಇರಬೇಕು ಎಂದು ಬಯಸುವುದಾಗಿ ಆಕ್ರೋಶ ವ್ಯಕ್ತಪಡಿಸಿದರು. 
 
ನಮ್ಮ ಸಂಸ್ಕ್ರತಿಯನ್ನು ಆರೆಸ್ಸೆಸ್ ವಿರೋಧಿಸುತ್ತದೆ. ಗಾಂಧಿ ಹತ್ಯೆಯನ್ನು ಗೋಢ್ಸೆಯನ್ನು ಆಯುಧವಾಗಿ ಬಳಸಿಕೊಂಡಿತ್ತು. ಗಾಂಧಿ ಹತ್ಯೆಯ ನಂತರ ಆರೆಸ್ಸೆಸ್ ಸಿಹಿ ಹಂಚಿ ಸಂಭ್ರಮಿಸಿತ್ತು. ಇದೇ ಧೋರಣೆಯನ್ನು ಇನ್ನೂ ಮುಂದುವರಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ದೇಶದಲ್ಲಿ ಆರೆಸ್ಸೆಸ್ ಮಾಡಿಸಿದ ಕೋಮುಗಲಭೆಗಳಿಗೆ ಲೆಕ್ಕವಿಲ್ಲ. ಹಲವು ಕೋಮುಗಲಭೆಗಳನ್ನು ನಡೆಸಿದ ಖ್ಯಾತಿ ಆರೆಸ್ಸೆಸ್‌ಗಿದೆ. ಧರ್ಮನಿರಪೇಕ್ಷಿತ ರಾಷ್ಟ್ರವನ್ನು ಆರೆಸ್ಸೆಸ್ ಎಂದು ಒಪ್ಪುವುದಿಲ್ಲ. ಹಿಟ್ಲರ್ ಸಂಸ್ಕ್ರತಿಯನ್ನು ಪ್ರತಿಪಾದಿಸುತ್ತದೆ ಎಂದು ಕಿಡಿಕಾರಿದ್ದಾರೆ. 
ಆರೆಸ್ಸೆಸ್ ರಾಜಕೀಯದ ತತ್ವಶಾಸ್ತ್ರವನ್ನು ಆರೆಸ್ಸೆಸ್ ಅಳವಡಿಸಿಕೊಂಡಿಲ್ಲ ಎಂದು ಆರೆಸ್ಸೆಸ್ ವಿರುದ್ಧ ಕೇರಳ ಸಿಎಂ ಪಿಣರಾಯಿ ವಿಜಯನ್ ಲೇವಡಿ ಮಾಡಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಡೈರಿ ವಿವಾದ: 2ನೇ ದಿನವೂ ಮೌನವ್ರತ ಮುಂದುವರಿಸಿದ ಸಿಎಂ ಸಿದ್ದರಾಮಯ್ಯ