Webdunia - Bharat's app for daily news and videos

Install App

ಪಾಕ್ ಸೇರಿದಂತೆ 140 ರಾಷ್ಟ್ರಗಳಿಗೆ ಇಫ್ತಾರ್ ಕೂಟಕ್ಕೆ ಆಹ್ವಾನಿಸಿದ ಆರ್‌ಎಸ್ಎಸ್

Webdunia
ಮಂಗಳವಾರ, 21 ಜೂನ್ 2016 (16:13 IST)
ಆರ್‌ಎಸ್ಎಸ್ ಅಂಗಸಂಸ್ಥೆ ಮುಸ್ಲಿಂ ರಾಷ್ಟ್ರೀಯ ಮಂಚ್ ರಮ್ಜಾನ್ ಪ್ರಯುಕ್ತ ಜುಲೈ 2 ರಂದು ಸಂಸದೀಯ ಭವನದಲ್ಲಿ ಇಪ್ತಾರ್ ಕೂಟವನ್ನು ಆಯೋಜಿಸಿದ್ದು 140 ರಾಷ್ಟ್ರಗಳ ರಾಯಭಾರಿಗಳನ್ನು ಆಹ್ವಾನಿಸಿದೆ.

ರಾಷ್ಟ್ರೀಯ ಸುದ್ದಿ ಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ ಸುದ್ದಿಯ ಪ್ರಕಾರ, ಆರ್‌ಎಸ್ಎಸ್, ಸಂಘ ಪ್ರಚಾರಕ ಇಂದ್ರೇಶ್ ಕುಮಾರ್ ಮತ್ತು ಮುಸ್ಲಿಂ ರಾಷ್ಟ್ರೀಯ ಮಂಚ್ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ವಿಶೇಷವೆಂದರೆ ಪಾಕಿಸ್ತಾನಕ್ಕೂ ಕೂಡ ಆಮಂತ್ರಣವನ್ನು ನೀಡಲಾಗಿದೆ.  
 
ಈ ಕುರಿತು ಪ್ರತಿಕ್ರಿಯಿಸಿರುವ ಕುಮಾರ್, ಮುಸ್ಲಿಂ ರಾಷ್ಟ್ರೀಯ ಮಂಚ್ ಈ ಮೆಗಾ ಅಂತರಾಷ್ಟ್ರೀಯ ಇಫ್ತಾರ್ ಕೂಟವನ್ನು ಆಯೋಜಿಸಿದೆ. ವಿಶ್ವದೆಲ್ಲೆಡೆಯಿಂದ ಮುಸ್ಲಿಂ ಪಂಡಿತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮುಸ್ಲಿಂ ರಾಷ್ಟ್ರವಷ್ಟೇ ಅಲ್ಲದೇ ಮುಸ್ಲಿಮೇತರ ರಾಷ್ಟ್ರದ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.  ಕಾರ್ಯಕ್ರಮದ ಉದ್ದೇಶ ಭಾರತೀಯತೆ ಮತ್ತು ಭಾರತೀಯ ಸಂಸ್ಕೃತಿ ಎಂಬುದು ಒಂದು ಕೊಡೆ, ಅದರಡಿಯಲ್ಲಿ ಎಲ್ಲ ರಾಷ್ಟ್ರೀಯತೆಯವರು ಮತ್ತು ಧರ್ಮದವರು ಸಮಾನ ಹಕ್ಕುಗಳನ್ನು ಮತ್ತು ಘನತೆಯನ್ನು  ಹೊಂದಿದ್ದಾರೆ. ಜತೆಗೆ ಭಾರತ 'ವಿಶ್ವಶಾಂತಿಯ ಪ್ರತೀಕ; ಎಂದು ತೋರಿಸುವುದು ಎಂದು ಹೇಳಿದ್ದಾರೆ. 
 
ಭಾರತ ಮುಸ್ಲಿಂ ಜಗತ್ತಿಗೆ ಭರವಸೆಯ ಮತ್ತು ಶಾಂತಿಯ ಆಶಾಕಿರಣ ಎಂದಿದ್ದಾರೆ. 
 
ಇದು ಮುಸ್ಲಿಮರು ಮುಸ್ಲಿಂ ಸಮುದಾಯಕ್ಕಾಗಿ ಆಯೋಜಿಸಿರುವ ಕಾರ್ಯಕ್ರಮ. ಸಂಘ ಇಫ್ತಾರ್‌ನ್ನು ಆಯೋಜಿಸುತ್ತಿಲ್ಲ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹನಿಮೂನ್ ಹಂತಕಿ ಸೋನಂ ರಘುವಂಶಿಯ ಮತ್ತೊಂದು ಸೀಕ್ರೆಟ್ ಬಯಲು

ನಾನೇನು ಮಾಡ್ತೀನಿ ಎಂದು ಯಾರಿಗೂ ಗೊತ್ತಿಲ್ಲ: ಇರಾನ್ ಗೆ ಡೊನಾಲ್ಡ್ ಟ್ರಂಪ್ ವಾರ್ನ್

ನಾನೇನು ಆಟ ಆಟಕ್ಕೆ ಹೋಗಿದ್ನಾ: ಅಮೆರಿಕಾಗೆ ನೋ ಎಂದ ಕೇಂದ್ರದ ವಿರುದ್ಧ ಪ್ರಿಯಾಂಕ್ ಖರ್ಗೆ ಆಕ್ರೋಶ

Viral video: ಮಾಂಗಲ್ಯ ಸರ ತೆಗೆಯಲು ಬಂದ ವೃದ್ಧ ದಂಪತಿ: ನೆಟ್ಟಿಗರ ಮನಗೆದ್ದ ಅಂಗಡಿ ಮಾಲಿಕ

ಕೆಲಸದ ಅವಧಿ ಹೆಚ್ಚಳ: 10 ಗಂಟೆ ಕೆಲಸ ಮಾಡಿ ಅಂದ್ರೆ ಫ್ಯಾಮಿಲಿ ಏನು ಮಾಡ್ಬೇಕು

ಮುಂದಿನ ಸುದ್ದಿ
Show comments