Select Your Language

Notifications

webdunia
webdunia
webdunia
webdunia

ಸಿಖ್ ಯುವತಿಗೆ 7 ಲಕ್ಷ, ಬ್ರಾಹ್ಮಣ ಯುವತಿಗೆ 5 ಲಕ್ಷ: ಲವ್ ಜಿಹಾದ್ ವಾಟ್ಸಪ್ ಸಂದೇಶ

ಸಿಖ್ ಯುವತಿಗೆ 7 ಲಕ್ಷ, ಬ್ರಾಹ್ಮಣ ಯುವತಿಗೆ 5 ಲಕ್ಷ: ಲವ್ ಜಿಹಾದ್ ವಾಟ್ಸಪ್ ಸಂದೇಶ
ಅಹಮದಾಬಾದ್ , ಬುಧವಾರ, 10 ಫೆಬ್ರವರಿ 2016 (14:17 IST)
ಗುಜರಾತ್‌ನಲ್ಲಿ ಲವ್ ಜಿಹಾದ್ ವಿವಾದ ಭುಗಿಲೆದ್ದಿದೆ. ಹಿಂದೂ ಹುಡುಗಿಯರನ್ನು ಪ್ರೀತಿಸಿ ಮದುವೆಯಾಗುವಂತೆ ಸಾಮಾಜಿಕ ಜಾಲತಾಣ ವಾಟ್ಸಪ್‌ ಮೂಲಕ ಮುಸ್ಲಿಮ್ ಯುವಕರಿಗೆ ಭಾರಿ ಮೊತ್ತದ ಹಣದ ಆಮಿಷ ಒಡ್ಡಲಾಗಿದ್ದು ರಾಜ್ಯದಲ್ಲಿ ವಿವಾದ ಸೃಷ್ಟಿಯಾಗಿದೆ.

'ಮುಸ್ಲಿಂ ಯೂತ್ ಫೋರಮ್ ವಿದ್ಯಾರ್ಥಿಗಳು ಈ ಸಂದೇಶವನ್ನು ವಾಟ್ಸಪ್‌ನಲ್ಲಿ ಹರಿಯಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದ್ದು ಮುಸ್ಲಿಮ್ ಯುವಕರನ್ನು ಬೇರೆ ಸಮುದಾಯದ ಯುವತಿಯರನ್ನು ಪ್ರೀತಿಯ ಬಲೆಯಲ್ಲಿ ಕೆಡವಿ ವಿವಾಹವಾಗುವಂತೆ ಸಂದೇಶದಲ್ಲಿ ಉತ್ತೇಜಿಸಲಾಗಿದೆ. 
 
ಸಂದೇಶ ಹೀಗಿದೆ: ಮುಸ್ಲಿಮ್ ಯುವಕ ಹಿಂದೂ ಬ್ರಾಹ್ಮಣ ಯುವತಿಯನ್ನು ಮದುವೆಯಾದರೆ ಆತನಿಗೆ 5 ಲಕ್ಷ, ಸಿಖ್ ಯುವತಿ - 7 ಲಕ್ಷ , ಕ್ಷತ್ರಿಯ ಸಮಾಜದ ಹುಡುಗಿ- 4.5 ಲಕ್ಷ, ಗುಜರಾತಿ ಬ್ರಾಹ್ಮಣ ಹುಡುಗಿ-6 ಲಕ್ಷ, ಪಂಜಾಬಿ ಹಿಂದೂ 6 ಲಕ್ಷ, ಕ್ರಿಶ್ಚಿಯನ್ ರೋಮನ್ ಕ್ಯಾಥೋಲಿಕ್ 4 ಲಕ್ಷ, ಕ್ರಿಶ್ಚಿಯನ್ ಪ್ರಾಟೆಸ್ಟಂಟ್- 3 ಲಕ್ಷ, ಜೈನ್-3 ಲಕ್ಷ, ಗುಜರಾತಿ ಕಚ್ ಯುವತಿಯನ್ನು ಪುಸಲಾಯಿಸಿ ವಿವಾಹವಾದರೆ 3 ಲಕ್ಷ ಮೊತ್ತವನ್ನು ಬಹುಮಾನವಾಗಿ ನೀಡಲಾಗುವುದು.
 
ಹಿಂದೂ ಯುವತಿಯರನ್ನು ಮದುವೆಯಾಗುವ ಯುವಕರು ತಮ್ಮ ಬಹುಮಾನದ ಮೊತ್ತವನ್ನು ಪಡೆದುಕೊಳ್ಳಲು ಈ ವಿಳಾಸಕ್ಕೆ ಸಂಪರ್ಕಿಸಿ ಎಂದು ನಾಲ್ಕು ವಿಳಾಸಗಳನ್ನು ಸಹ ಸಂದೇಶದಲ್ಲಿ ನೀಡಲಾಗಿದೆ. ಜತೆಗೆ 11 ಫೋನ್ ನಂಬರ್‌ಗಳನ್ನು ಸಹ ಸಂದೇಶದಲ್ಲಿ ನಮೂದಿಸಲಾಗಿದೆ.
 
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ವಡೋದರಾ ಪೊಲೀಸರು ಈ ರೀತಿಯ ಸಂದೇಶಗಳನ್ನು ನಿರ್ಲಕ್ಷಿಸಿ. ನಿಮ್ಮ ಮೊಬೈಲ್‌ಗೆ ಇಂತರ ಸಂದೇಶಗಳು ಬಂದರೆ ಮಾಹಿತಿ ನೀಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
 

Share this Story:

Follow Webdunia kannada