Webdunia - Bharat's app for daily news and videos

Install App

ಕಾಶ್ಮೀರ ಹಿಂಸಾಚಾರವನ್ನು ತೀವ್ರಗೊಳಿಸಲು ಕೋಟಿಗಟ್ಟಲೆ ಸುರಿಯುತ್ತಿರುವ ಪಾಕಿಸ್ತಾನ

Webdunia
ಬುಧವಾರ, 17 ಆಗಸ್ಟ್ 2016 (16:08 IST)
ಕಣಿವೆ ನಾಡು ಕಾಶ್ಮೀರದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರೆದಿದೆ. ಬೆಂಕಿಗೆ ತುಪ್ಪ ಸುರಿಯುತ್ತಿರುವ ಪಾಕಿಸ್ತಾನ ಹಿಂಸಾತ್ಮಕ ಧರಣಿಯನ್ನು ಪ್ರಚೋದಿಸಲು ಕೋಟಿಗಟ್ಟಲೆ ಹಣವನ್ನು ಸುರಿಯುತ್ತಿದೆ ಎಂಬ ಸತ್ಯ ಬಯಲಾಗಿದೆ. 

ಒಂದು ಅಂದಾಜಿನ ಪ್ರಕಾರ ಧರಣಿಯನ್ನು ನಿಲ್ಲಿಸದಿರಲು ಇಲ್ಲಿಯವರೆಗೆ ಪಾಕಿಸ್ತಾನ 24 ಕೋಟಿ ರೂಪಾಯಿಯನ್ನು ಸುರಿದಿದೆ. 
 
ಅದರಲ್ಲಿ ಹೆಚ್ಚಿನ ಹಣವನ್ನು ನೀಡಿರುವುದು ಪ್ರತ್ಯೇಕತಾವಾದಿ ನಾಯಕ ಆಸಿಯಾ ಅಂದ್ರಾಬಿಯ ದುಖ್ತನಾನ್-ಇ-ಮಿಲ್ಲತ್ ಮತ್ತು ಜಮ್ಮತ್-ಉ- ಇಸ್ಲಾಮಿ ಎಂದು ಸರ್ಕಾರಿ ಅಧಿಕಾರಿಗಳು ಖಚಿತ ಪಡಿಸಿದ್ದಾರೆ. 
 
ಪ್ರತಿಭಟನೆ ಸದ್ಯದಲ್ಲಿಯೇ ಕೊನೆಗೊಳ್ಳಲಿದೆ ಎಂದು ಭಾವಿಸಲಾಗಿತ್ತು. ಕಳವಳಕಾರಿ ಸಂಗತಿ ಎಂದರೆ ಭದ್ರತಾ ಸಿಬ್ಬಂದಿ ವಿರುದ್ಧ  ಪ್ರತಿಭಟನೆಯನ್ನು ಮುಂದುವರೆಸಲು ಕಾಶ್ಮೀರಿ ಯುವಕರಿಗೆ ಹಣ ಪಾವತಿಸುವುದನ್ನು ಮುಂದುವರೆಸಲಾಗಿದೆ ಎಂದು ಅಧಿಕಾರಿಗಳು ಆತಂಕವನ್ನು ವ್ಯಕ್ತ ಪಡಿಸಿದ್ದಾರೆ. 
 
ಕಾಶ್ಮೀರದಲ್ಲಿ ಹಿಂಸಾಚಾರವನ್ನು ನಡೆಸುವಂತೆ ಉಗ್ರ ಸಂಘಟನೆಗಳಾದ ಲಷ್ಕರ್-ಇ-ತೈಬಾ ಮತ್ತು ಜಮ್ಮತ್- ಉದ್-ದವಾವನ್ನು  ಪಾಕಿಸ್ತಾನವೇ ಉತ್ತೇಜಿಸುತ್ತಿದೆ ಎಂದು ಭಾರತ ಸದಾ ಆರೋಪಿಸುತ್ತ ಬಂದಿದೆ. 
 
ಇತ್ತೀಚಿಗೆ ಬಂಧಿಸಲ್ಪಟ್ಟ ಎಲ್‌ಇಟಿ ಉಗ್ರ ಬಹಾದ್ದೂರ್ ಅಲಿ ಕೂಡ ತಾನು ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆಯಿಂದ ತರಬೇತಿ ಪಡೆದಿದ್ದು ಗುಂಪಿನ ನಡುವೆ ಬೆರತು ಭದ್ರತಾ ಸಿಬ್ಬಂದಿ ಮೇಲೆ ದಾಳಿ ನಡೆಸಲು ನನ್ನನ್ನು ಕಳುಹಿಸಲಾಗಿತ್ತು ಎಂದು ತಪ್ಪೊಪ್ಪಿಕೊಂಡಿದ್ದಾನೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭಾರತವನ್ನು ಧ್ವೇಷಿಸುತ್ತೇನೆ, ಕೊಳಕು ಹಿಂದೂಗಳು ಹಿಂದೆ ಬಿದ್ದಿದ್ದಾರೆ ಎಂದ ಮಂಗಳೂರು ವೈದ್ಯೆ ಫಾತಿಮಾ: ವಿವಾದ

Pakistan Army: ಭಾರತದ ದಾಳಿಗೆ ಹೆದರಿ ತನ್ನ ಕುಟುಂಬವನ್ನು ಲಂಡನ್ ಗೆ ರವಾನಿಸಿದ ಪಾಕಿಸ್ತಾನ ಸೇನಾ ಮುಖ್ಯಸ್ಥ ಮುನೀರ್

Indian Army: ಭಾರತೀಯ ಸೇನೆಯ ಬತ್ತಳಿಕೆಯಲ್ಲಿರುವ ಬ್ರಹ್ಮೋಸ್ ಕ್ಷಿಪಣಿ ವಿಶೇಷತೆ ಏನು ನೋಡಿ

Karnataka Weather: ಬೆಂಗಳೂರಿನಲ್ಲಿ ಇನ್ನೆಷ್ಟು ದಿನ ಬಿಸಿಲಿನ ತಾಪವಿರಲಿದೆ

ಅಧಿಕಾರಿಗಳು ನಿಮ್ಮ ಮನೆಯ ಜೀತದಾಳುಗಳಲ್ಲ: ಸಿದ್ದರಾಮಯ್ಯಗೆ ಆರ್‌ ಅಶೋಕ್ ಪ್ರಶ್ನೆ

ಮುಂದಿನ ಸುದ್ದಿ
Show comments