ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಸೇರಿದಂತೆ ವಿವಾದಾತ್ಮಕ ಭೂ ವಹಿವಾಟುಗಳ ತನಿಖೆ ನಡೆಸುತ್ತಿರುವ ನ್ಯಾ. ಧಿಂಗ್ರಾ ವರದಿಯ ಅಂಶಗಳನ್ನು ಬಹಿರಂಗ ಮಾಡಲು ನಿರಾಕರಿಸಿದ್ದಾರೆ.
ಆದಾಗ್ಯೂ ಅವ್ಯವಹಾರಗಳು ನಡೆದಿರುವ ಬಗ್ಗೆ ಅವರು ಇಂಗಿತ ನೀಡಿದ್ದು, ಅವ್ಯವಹಾರ ಇಲ್ಲದಿದ್ದರೆ, ನಾನು 182 ಪುಟದ ವರದಿ ಸಲ್ಲಿಸುತ್ತಿರಲಿಲ್ಲ ಎಂದಿದ್ದಾರೆ.ನನ್ನ ವರದಿಯಲ್ಲಿ ಎರಡು ಭಾಗಗಳಿದ್ದು, ಒಂದು ಭಾಗ ಶೋಧನೆಗಳಾಗಿದ್ದು ಇನ್ನೊಂದು ಸಾಕ್ಷ್ಯಾಧಾರಗಳಾಗಿವೆ ಎಂದು ಹೇಳಿದರು.
ಅದೇ ಸಂದರ್ಭದಲ್ಲಿ, ಸರ್ಕಾರ ವರದಿಯನ್ನು ಬಹಿರಂಗ ಮಾಡಲು ನಿರ್ಧರಿಸುವ ತನಕ ವರದಿಯ ಅಂಶಗಳ ಬಗ್ಗೆ ನಾನು ಮಾತನಾಡಲು ಸಾಧ್ಯವಿಲ್ಲ. ಅಕ್ರಮಗಳನ್ನು ಯಾವ ರೀತಿಯಲ್ಲಿ ಎಸಗಲಾಗಿದೆ ಮತ್ತು ಅದರ ಹಿಂದಿರುವ ಜನರನ್ನು ತಾವು ಬೆಳಕಿಗೆ ತಂದಿರುವುದಾಗಿ ಪ್ರತಿಪಾದಿಸಿದರು.
ಬಿಜೆಪಿ ಸರ್ಕಾರ ಕಳೆದ ವರ್ಷ ಸ್ಥಾಪಿಸಿದ ಏಕ ವ್ಯಕ್ತಿ ಆಯೋಗಕ್ಕೆ ವಾದ್ರಾ ಮತ್ತು ಅವರ ಸಂಸ್ಥೆಗಳ ಭೂ ವ್ಯವಹಾರಗಳು ಸೇರಿದಂತೆ ಹರ್ಯಾಣದಲ್ಲಿ ಭೂ ವ್ಯವಹಾರಗಳ ತನಿಖೆ ನಡೆಸುವಂತೆ ಸೂಚಿಸಲಾಗಿತ್ತು. ಗುರಗಾಂವ್ ಸೆಕ್ಟರ್ 83 ಮತ್ತಿತರ ಮುಖ್ಯ ಪ್ರದೇಶಗಳಲ್ಲಿ ವಾಣಿಜ್ಯ ಆಸ್ತಿಗಳ ಅಭಿವೃದ್ಧಿಗೆ ವಾದ್ರಾ ಕಂಪನಿ ಮತ್ತಿತರ ಸಂಸ್ಥೆಗಳಿಗೆ ಪರವಾನಗಿಗಳನ್ನು ನೀಡಿರುವ ಕುರಿತು ತನಿಖೆ ನಡೆಸಲು ಆಯೋಗಕ್ಕೆ ಸೂಚಿಸಲಾಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ