Select Your Language

Notifications

webdunia
webdunia
webdunia
webdunia

'ಧರ್ಮ ರಾಜಕೀಯ' ದಿಂದ ಮುಸ್ಲಿಂ ಜನಸಂಖ್ಯೆಯಲ್ಲಿ ಏರಿಕೆ: ಶಿವಸೇನೆ

'ಧರ್ಮ ರಾಜಕೀಯ' ದಿಂದ ಮುಸ್ಲಿಂ ಜನಸಂಖ್ಯೆಯಲ್ಲಿ ಏರಿಕೆ: ಶಿವಸೇನೆ
ಮುಂಬೈ , ಶುಕ್ರವಾರ, 28 ಆಗಸ್ಟ್ 2015 (15:52 IST)
ಸದ್ಯದಲ್ಲೇ ಬಿಡುಗಡೆಯಾಗಿರುವ ಜನಗಣತಿಯ ವಿವರಗಳ ಪ್ರಕಾರ ಆತಂಕಪಡುವಷ್ಟು ಮುಸ್ಲಿಂ ಜನಸಂಖ್ಯೆ ಹೆಚ್ಚಿದ್ದು,ಇದು ಧರ್ಮ ರಾಜಕೀಯದ ಪರಿಣಾಮ ಎಂದು ಶಿವಸೇನೆ ಹೇಳಿದೆ.

'ಭಾರತ ಈಗಲೂ ಜಾತ್ಯಾತೀಯತೆಯ ವಿಷವನ್ನು ಹುದುಗಿಸಿಕೊಂಡಿರುವ ಹಿಂದೂ ರಾಷ್ಟ್ರ. ಜನಗಣತಿಯಿಂದ ಬಹಿರಂಗವಾದ ಈ ವಿವರಗಳನ್ನು ಕಂಡು ಸಕ್ರಿಯ ಹಿಂದುತ್ವ ಶಕ್ತಿಗಳು ವ್ಯಗ್ರರಾಗುವ ಅಗತ್ಯವಿಲ್ಲ. ಈ ಅಂಕಿಅಂಶ ನಮ್ಮನ್ನು ಆತಂಕಕ್ಕೆ ತಳ್ಳುವಂತಿದ್ದರೂ ನಾವಿದನ್ನು ಸಕಾರಾತ್ಮಕ ರೀತಿಯಲ್ಲಿ ತೆಗೆದುಕೊಳ್ಳಲು ಸಿದ್ಧರಿದ್ದೇವೆ',  ಎಂದು ಕೇಂದ್ರ ಮತ್ತು ಮಹಾರಾಷ್ಟ್ರದಲ್ಲಿ ಎನ್‌ಡಿಎ ಸರ್ಕಾರದ ಭಾಗವಾಗಿರುವ ಶಿವಸೇನೆ ತಿಳಿಸಿದೆ.
 
'ಮುಸ್ಲಿಂರ ಜನಸಂಖ್ಯೆ ಏಕೆ ಏರಿಕೆಯಾಗುತ್ತಿದೆ? ಎಂದು ಯೋಚಿಸಿದರೆ ಅದರ ಹಿಂದೆ ಧರ್ಮ ರಾಜಕೀಯ ಇದೆ ಎಂಬುದು ವೇದ್ಯವಾಗುತ್ತದೆ. ಕೆಲವೊಂದು ಶಕ್ತಿಗಳು ದೇಶವನ್ನು ಇಸ್ಲಾಂಮೀಕರಣ ಮಾಡುವುದರತ್ತ ಚಿಂತನೆ ನಡೆಸಿದ್ದು, ಮೊಘಲ್ ಆಡಳಿತವನ್ನು  ಮರಳಿ ತರುವುದು ಅವರ ಉದ್ದೇಶ. ಮುಂದಿನ 50 ವರ್ಷಗಳಲ್ಲಿ,  ಜಾತ್ಯಾತೀತತೆ ಬೋಗಿಯನ್ನೇರಿ ಮೊಘಲರ ಆಳ್ವಿಕೆ ದೇಶಕ್ಕೆ ಹಿಂದಿರುಗಿದರೆ ಅದರಿಂದ ನಮಗೆ ಆಶ್ಚರ್ಯವಾಗುವುದಿಲ್ಲ', ಎಂದು ಸೇನೆ ಅಭಿಪ್ರಾಯಪಟ್ಟಿದೆ. 
 
'96 ಕೋಟಿ ಹಿಂದೂಗಳು ಒಟ್ಟಾಗಿ, ಈ ಪ್ರತಿಕೂಲ ಶಕ್ತಿಯ ವಿರುದ್ಧ ಹೋರಾಡಬೇಕಿದೆ. ಮದರಸಾ ಮತ್ತು ಮಸೀದಿಗಳಲ್ಲಿ  ನಡೆಯುತ್ತಿರುವ ಕೆಲ ಚಟುವಟಿಕೆಗಳನ್ನು ತಡೆ ಹಿಡಿಯಬೇಕಿದೆ', ಎಂದು ಶಿವಸೇನೆ ಆಗ್ರಹಿಸಿದೆ. 

Share this Story:

Follow Webdunia kannada