ನವದೆಹಲಿ : ಸರ್ಕಾರಿ ಹುದ್ದೆಗಳ ಬಡ್ತಿ ವೇಳೆ ಪರಿಶಿಷ್ಟಜಾತಿ, ಪಂಗಡದ ನೌಕರರಿಗೆ ಮೀಸಲಾತಿಯನ್ನು ರದ್ದುಗೊಳಿಸಿದರೆ,
ನೌಕರರು ದಂಗೆ ಏಳುವ ಹಾಗೂ ಹಲವು ವ್ಯಾಜ್ಯಗಳು ಆರಂಭವಾಗುವ ಸಾಧ್ಯತೆ ಇದೆ ಎಂದು ನೀಡಲಾಗುತ್ತಿರುವ ಕೇಂದ್ರ ಸರ್ಕಾರ ಕಳವಳ ವ್ಯಕ್ತಪಡಿಸಿದೆ.
ಎಸ್ಸಿ/ ಎಸ್ಟಿಸಮುದಾಯದ ನೌಕರರಿಗೆ ಉದ್ಯೋಗದಲ್ಲಿ ಬಡ್ತಿ ನೀಡುವುದನ್ನು ರದ್ದು ಮಾಡಿ 2017ರಲ್ಲಿ ದೆಹಲಿ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ವೇಳೆ ಕೇಂದ್ರ ಸರ್ಕಾರ ಈ ಅಫಿಡವಿಟ್ ಸಲ್ಲಿಸಿದೆ.
ಎಸ್ಸಿ/ಎಸ್ಟಿಸಮುದಾಯ ಸರ್ಕಾರಿ ಉದ್ಯೋಗದಲ್ಲಿ ಸೂಕ್ತ ಪ್ರಾತಿನಿಧ್ಯ ಹೊಂದಿಲ್ಲ ಎನ್ನುವ ಯಾವುದೇ ದಾಖಲೆ ಇಲ್ಲದೇ ಈ ರೀತಿ ಮೀಸಲು ನೀಡಬಾರದು ಎಂದು ದೆಹಲಿ ಹೈಕೋರ್ಟ್ ಸ್ಪಷ್ಟಪಡಿಸಿತ್ತು.
ಈ ಬಗ್ಗೆ ಅಫಿಡವಿಟ್ ಸಲ್ಲಿಸಿರುವ ಕೇಂದ್ರ ಸರ್ಕಾರ, ಬಡ್ತಿಯಲ್ಲಿ ಮೀಸಲು ರದ್ದುಗೊಳಿಸಿದರೆ ಎಸ್ಸಿ/ಎಸ್ಟಿನೌಕರರಿಗೆ ನೀಡಲಾಗಿರುವ ಸವಲತ್ತುಗಳನ್ನು ಹಿಂದಕ್ಕೆ ಪಡೆಯಬೇಕಾಗುತ್ತದೆ.
ಇದರಿಂದಾಗಿ ಅವರ ವೇತನ, ಪಿಂಚಣಿಯಲ್ಲಿ ಪರಿಷ್ಕರಣೆ ಮಾಡಬೇಕಾಗುತ್ತದೆ. ಈ ನಡುವೆ, ಹಲವು ನೌಕರರು ನಿವೃತ್ತರಾಗಿದ್ದಾರೆ. ಅವರಿಗೆ ಪಾವತಿಸಿರುವ ಹೆಚ್ಚುವರಿ ವೇತನ/ಪಿಂಚಣಿಯನ್ನು ವಸೂಲು ಮಾಡಬೇಕಾಗುತ್ತದೆ. ತನ್ಮೂಲಕ ಹಲವು ವ್ಯಾಜ್ಯಗಳು ಸೃಷ್ಟಿಯಾಗಿ, ನೌಕರರ ದಂಗೆಗೆ ಕಾರಣವಾಗುವ ಸಾಧ್ಯತೆ .