Webdunia - Bharat's app for daily news and videos

Install App

ಸಾವು ಗೆದ್ದು ಬಂದ ಯುವತಿಗೆ ದೊರೆಯಿತು ಮತ್ತೊಂದು ಅವಕಾಶ

Webdunia
ಭಾನುವಾರ, 7 ಆಗಸ್ಟ್ 2016 (17:52 IST)
ಸಿರಿಯಾದ ನಿರಾಶ್ರಿತೆ ಯುಸ್ರಾ ಮಾರ್ಡಿನಿ ಕಳೆದ ವರ್ಷ ಯುರೋಪ್‌ಗೆ ತೆರಳುವಾಗ ದೋಣಿ ಮುಳುಗಿದ್ದರಿಂದ ಸಮುದ್ರದಲ್ಲಿ ಈಜಿ ಜೀವದ ಅಪಾಯದಿಂದ ಪಾರಾಗಿದ್ದಳು. ಅಂತರಾಷ್ಟ್ರೀಯ ರಿಯೋ ಒಲಿಂಪಿಕ್ಸ್ ಸಮಿತಿ ನಿರಾಶ್ರಿತ ಕ್ರೀಡಾ ಪಟುಗಳನ್ನು ಗುರುತಿಸಿತ್ತು. ಈ ಕಾರಣಕ್ಕಾಗಿ ಮಾರ್ಡಿನಿ ಶನಿವಾರ ನಡೆದ ಸ್ಪರ್ಧೆಯಲ್ಲಿ ಮಾರ್ಡಿನಿ ಬಟರ್ ಫ್ಲೈ ಹೀಟ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದರು ಗೆಲ್ಲಲು ಸಾಧ್ಯವಾಗಿರಲಿಲ್ಲ. 

 
ನಿರಾಶ್ರಿತರ ಜತೆ ಸಮುದ್ರಕ್ಕೆ ಹಾರಿ ದೋಣಿಯನ್ನು ನೀರಿನಲ್ಲಿ ಮೂರು ಗಂಟೆಗಳ ಕಾಲ ಎಳೆದು 19 ಜನರ ಪ್ರಾಣ ಉಳಿಸಿದ್ದರು.
ಟರ್ಕಿಯಿಂದ ಮೆಡಿಟರೇನಿಯನ್ ದಾಟುವಾಗ ನೂರಾರು ನಿರಾಶ್ರಿತರು ಪ್ರಾಣ ಕಳೆದುಕೊಂಡಿದ್ದರು. 
 
ಸಿರಿಯಾದಿಂದ ಎಲ್ಲಿಯೂ ನೆಲೆಯಿಲ್ಲದ ಈ ಯುವತಿ, ಸಾಗರ  ದಾಟುವಾಗಲೇ ಈಕೆಯನ್ನು ಮುಗಿಸಲು ಸಾವು ಸಂಚು ರೂಪಿಸಿತ್ತು. ಆದ್ರೆ ಮಾರ್ಡನಿ ಮಾತ್ರ ತನ್ನ ಜೀವ ಉಳಿಸಿಕೊಂಡಿದ್ದಳು. ಒಲಿಂಪಿಕ್ಸ್‌ನಲ್ಲಿ ಭಾಗಿಯಾಗಿರುವ ಮಾರ್ಡಿನಿ ಒಂದರಲ್ಲಿ ತನ್ನ ಸಾಮರ್ಥ್ಯ ತೋರಲು ವಿಫಲರಾದರೂ, ಮತ್ತೊಂದು ಬಾರಿ ಅವಕಾಶ ಈಕೆಗಿದೆ.
 
ಮಾರ್ಗಮಧ್ಯೆ ದೋಣಿ ಮುಳುಗಿದರೆ ಎಲ್ಲರಿಗೂ ನೆರವು ನೀಡುವುದು ಅಸಾಧ್ಯವಾದ್ದರಿಂದ ನಾವು ಪ್ರಾಣ ಉಳಿಸಿಕೊಳ್ಳೋಣ ಎಂದು ಸಾರಾ ಸೋದರಿಗೆ ಮಾರ್ಡನಿ ತಿಳಿಸಿದ್ದಳು. ಆದರೆ ಎಂಜಿನ್ ನಿಂತು ದೋಣಿ ಮುಳುಗತೊಡಗಿದಾಗ ಉಳಿದವರು ಮುಳುಗದಂತೆ ಕಾಪಾಡಲು ಅವರಿಬ್ಬರ ಹೃದಯ ತುಡಿಯಿತು. ತಾವು ನೀರಿಗಿಳಿದು ದೋಣಿಯನ್ನು ಎಳೆದುಕೊಂಡು ಹೋಗಿ 19 ಜನರನ್ನು ಜೀವಸಹಿತ ಪಾರುಮಾಡಿದ್ದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 
 
 

 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಮಿತ್ ಶಾ ತಲೆ ಕತ್ತರಿಸಿ ಟೇಬಲ್ ಮೇಲಿಡಬೇಕು: ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿವಾದ

ದಾನ ಧರ್ಮ ಮಾಡುವ ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಚೆಂದ: ಡಿಕೆ ಶಿವಕುಮಾರ್

ನಾಡ ಹಬ್ಬಕ್ಕೆ ಬಾನು ಮುಷ್ತಾಕ್ ಚಾಲನೆ ವಿವಾದಕ್ಕೆ ಐದು ಪ್ರಶ್ನೆ ಹಾಕಿದ ಆರ್ ಅಶೋಕ್

ಧರ್ಮಸ್ಥಳ ಪ್ರಕರಣದಿಂದ ಮಹಿಳೆಯರೇ ಹೆಚ್ಚು ಕಣ್ಣೀರಿಟ್ಟಿದ್ದಾರೆ: ಡಾ ಡಿ ವೀರೇಂದ್ರ ಹೆಗ್ಗಡೆ

ಕಾಂಗ್ರೆಸ್ ಗೆ ಆಜಾನ್ ಕೂಗುವ ಮೈಕ್ ಮುಟ್ಟುವ ತಾಕತ್ತಿಲ್ಲ: ಬಿಜೆಪಿ ಟೀಕೆ

ಮುಂದಿನ ಸುದ್ದಿ
Show comments