ಮಾಜಿ ಸಿಎಂ ಮಾಯಾವತಿಗಿಂತ ರಿಕ್ಷಾ ಚಾಲಕ ಉತ್ತಮ: ದಯಾಶಂಕರ್ ಸಿಂಗ್

Webdunia
ಶುಕ್ರವಾರ, 23 ಸೆಪ್ಟಂಬರ್ 2016 (11:59 IST)
ಬಹಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಜಿ ಮುಖ್ಯಮಂತ್ರಿ ಮಾಯಾವತಿ ರಿಕ್ಷಾ ಚಾಲಕರಿಗಿಂತ ಕೀಳಾಗಿದ್ದಾಳೆ ಎಂದು ಬಿಜೆಪಿ ಉಚ್ಚಾಟಿತ ನಾಯಕ ದಯಾಶಂಕರ್ ಸಿಂಗ್ ಟೀಕಿಸಿದ್ದಾರೆ.
 
ಮಾಜಿ ಮುಖ್ಯಮಂತ್ರಿ ಮಾಯಾವತಿ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿ ಬಿಜೆಪಿ ಪಕ್ಷದಿಂದ ಉಚ್ಚಾಟನೆಗೊಂಡಿದ್ದ ದಯಾಶಂಕರ್ ಸಿಂಗ್ ಇದೀಗ ಮತ್ತೊಮ್ಮೆ ಮಾಯಾವತಿ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ.  
 
ಉತ್ತರಪ್ರದೇಶದಲ್ಲಿ ಕೇವಲ ಸಮಾಜವಾದ ಪಕ್ಷದ ಮುಖಂಡರ ಮಾತುಗಳಿಗೆ ಬೆಲೆಯಿರುವುದರಿಂದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರಿಗೆ ರಾಖಿ ಕಟ್ಟಲು ನಾನು ಸಿದ್ದಳಾಗಿದ್ದೇನೆ ಎಂದು ದಯಾಶಂಕರ್ ಪತ್ನಿ ಸ್ವಾತಿ ಸಿಂಗ್ ತಿಳಿಸಿದ್ದಾರೆ.  
 
ರಿಕ್ಷಾ ಚಾಲಕ ಒಂದು ಬಾರಿ ಪ್ರಯಾಣಿಕನೊಂದಿಗೆ ಬಾಡಿಗೆ ಒಪ್ಪಂದವಾದ ನಂತರ ಮತ್ತೆ ಕೇಳುವುದಿಲ್ಲ. ಆದರೆ, ಮಾಯಾವತಿಗೆ ನಿರಂತರ ಹಣದ ದಾಹವಿರುತ್ತದೆ ಎಂದು ಲೇವಡಿ ಮಾಡಿದ್ದಾರೆ.
 
ಮಾಯಾವತಿ ಪಕ್ಷದ ಟಿಕೆಟ್‌ಗಳನ್ನು ಹಣಕ್ಕಾಗಿ ಮಾರಾಟ ಮಾಡುವಲ್ಲಿ ನಿರತರಾಗಿದ್ದಾರೆ. ಯಾರು ಹೆಚ್ಚು ಹಣ ಕೊಡುತ್ತಾರೋ ಅವರಿಗೆ ಟಿಕೆಟ್ ನೀಡಲಾಗುತ್ತಿದೆ. ಹಣಕ್ಕಾಗಿ ಏನು ಬೇಕಾದರು ಮಾಡಲು ಮಾಯಾವತಿ ಸಿದ್ದರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.
 
ಕಳೆದ ಜುಲೈ 29 ರಂದು ಮಾಯಾವತಿ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿದ್ದರಿಂದ ಜೈಲುವಾಸ ಅನುಭವಿಸಿದ ದಯಾಶಂಕರ್ ಸಿಂಗ್, ಬಿಜೆಪಿ ಪಕ್ಷದಿಂದಲೂ ಉಚ್ಚಾಟನೆಗೊಂಡಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ, ರಾಹುಲ್ ಗಾಂಧಿಗೆ ಬಿಗ್ ರಿಲೀಫ್

ನಾನೇ ಸಿಎಂ, 2028 ಕ್ಕೂ ನಾವೇ ಅಧಿಕಾರಕ್ಕೆ ಬರೋದು: ಸದನದಲ್ಲಿ ಸಿದ್ದರಾಮಯ್ಯ ಮಹತ್ವದ ಘೋಷಣೆ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

Arecanut price: ಅಡಿಕೆ, ಕೊಬ್ಬರಿ ಇಂದಿನ ಬೆಲೆ ಇಲ್ಲಿದೆ

ತಂದೆ ಪ್ರೀತಿಗೆ ಧನ್ಯವಾದಗಳು: ಪ್ರಧಾನಿ ಮೋದಿ ಹುಟ್ಟುಹಬ್ಬದ ಸಂದೇಶಕ್ಕೆ ಕುಮಾರಸ್ವಾಮಿ ಭಾವುಕ

ಮುಂದಿನ ಸುದ್ದಿ
Show comments