Select Your Language

Notifications

webdunia
webdunia
webdunia
webdunia

ಕೊನೆಗೂ ಬಯಲಾಯ್ತು ಏರ್ ಕಮಾಂಡರ್ ಹತ್ಯೆ ರಹಸ್ಯ

ಕೊನೆಗೂ ಬಯಲಾಯ್ತು ಏರ್ ಕಮಾಂಡರ್ ಹತ್ಯೆ ರಹಸ್ಯ
ಬೆಂಗಳೂರು , ಗುರುವಾರ, 23 ಫೆಬ್ರವರಿ 2017 (13:30 IST)
ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ನಿವೃತ್ತ ಏರ್ ಕಮಾಂಡರ್ ಪರ್ವೇಜ್ ಕೋಕರ್ ಹತ್ಯೆ ಪ್ರಕರಣವನ್ನು ಭೇದಿಸುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 12 ಆರೋಪಿಗಳನ್ನು ಬಂಧಿಸಲಾಗಿದ್ದು ಅವರಲ್ಲಿ ಐವರು ಕೊಲೆ ಕೃತ್ಯದಲ್ಲಿ ಪಾಲ್ಗೊಂಡಿದ್ದರು ಎನ್ನಲಾಗುತ್ತಿದೆ. 
 
ಈ ಕುರಿತು ಕೇಂದ್ರ ವಲಯದ ಐಜಿಪಿ ಸೀಮಂತ ಕುಮಾರ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
 
23.11.2011 ರ ಮಧ್ಯರಾತ್ರಿ ಹೆಬ್ಬುಗೋಡಿಯಲ್ಲಿರುವ ಸ್ಮೈಲಿ ಗ್ರೀನ್ ಪ್ಲಾಂಟೇಷನ್‌ನಲ್ಲಿ ಕಮಾಂಡರ್ ಪರ್ವೇಜ್ ಹತ್ಯೆಯಾಗಿತ್ತು. ಅವರನ್ನು ಉಸಿರುಗಟ್ಟಿಸಿ ಕೊಲೆಗೈಯ್ಯಲಾಗಿತ್ತು. ಸ್ಥಳದಲ್ಲಿ ಪರಿಶೀಲನೆ ನಡೆಸಿದ ಪೊಲೀಸರಿಗೆ ಇದು ಕಳ್ಳರ ಕೃತ್ಯ ಎಂಬುದು ಖಚಿತವಾಗಿತ್ತು. ದೇಶಾದ್ಯಂತ ಸುದ್ದಿಯಾಗಿದ್ದ ಈ ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರಿಗೆ ಆರೋಪಿಗಳ ಪತ್ತೆ ಸವಾಲಾಗಿ ಪರಿಣಮಿಸಿತ್ತು. ಮತ್ತೀಗ ಘಟನೆ ನಡೆದ ಬರೊಬ್ಬರಿ 5 ವರ್ಷಗಳ ಬಳಿಕ ಪೊಲೀಸರು ತಮ್ಮ ಕಾರ್ಯದಲ್ಲಿ ಯಶ ಕಂಡಿದ್ದಾರೆ.
 
ಮುಖ್ಯ ಆರೋಪಿಗಳನ್ನು ಶ್ರೀನಿವಾಸ , ಗಿರೀಶ್, ಸುಬ್ರಮಣಿ, ನಾಗರಾಜು, ಸತ್ಯನಾರಾಯಣ ಎಂದು ಗುರುತಿಸಲಾಗಿದ್ದು ಇವರೆಲ್ಲ ಕೊಲೆ ಕೃತ್ಯದಲ್ಲಿ ಪಾಲ್ಗೊಂಡವರಾಗಿದ್ದಾರೆ. ಅವರ ಗ್ಯಾಂಗ್‌ನ ಇತರ 7 ಮಂದಿಯನ್ನು ಸಹ ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಬಂಧನದಿಂದ ಪೊಲೀಸರು ಇತರ 20 ಪ್ರಕರಣಗಳನ್ನು ಸಹ ಭೇದಿಸಿದಂತಾಗಿದೆ. 
 
ಬಂಧಿತರಿಂದ 1.25ಕೋಟಿ ಮೌಲ್ಯದ ವಜ್ರ ಮತ್ತು ಚಿನ್ನಾಭರಣ, ರಿವಾಲ್ವರ್, ಗುಂಡು,  60ಕೋಟಿ ಮೌಲ್ಯದ ಭೂಮಿ ಹಕ್ಕುಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ,

Share this Story:

Follow Webdunia kannada

ಮುಂದಿನ ಸುದ್ದಿ

ದೆಹಲಿ ಆಡಳಿತದ ಮುಖ್ಯಸ್ಥರು ಯಾರು ..? ಸುಪ್ರೀಂ ಮೆಟ್ಟಿಲೇರಿದ ಕೇಜ್ರಿವಾಲ್