Select Your Language

Notifications

webdunia
webdunia
webdunia
webdunia

100 ಕೋಟಿ ದುಡಿಯುವ ಗಂಡನನ್ನು ಬಯಸಿದವಳಿಗೆ ಮುಕೇಶ್ ಅಂಬಾನಿ ಉತ್ತರ

100 ಕೋಟಿ ದುಡಿಯುವ ಗಂಡನನ್ನು ಬಯಸಿದವಳಿಗೆ ಮುಕೇಶ್ ಅಂಬಾನಿ ಉತ್ತರ
ನವದೆಹಲಿ , ಗುರುವಾರ, 7 ಏಪ್ರಿಲ್ 2016 (18:52 IST)
ಭಾರತೀಯ ಯುವತಿಯೋರ್ವಳು ವಾರ್ಷಿಕ 100 ಕೋಟಿ ದುಡಿಯುವ ಗಂಡನನ್ನು ಬಯಸಿ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಹಾಕಿದ್ದಳು. ಅದಕ್ಕೆ ಆಕೆಯ ಸ್ನೇಹಿತರಿಂದ ಸಾಕಷ್ಟು ಲೈಕ್, ಕಮೆಂಟ್‌ಗಳು ಬಂದವು. ಆದರೆ ಈ ಪೋಸ್ಟ್ ಕಥೆ ಲೈಕ್-ಡಿಸ್ಲೈಕ್, ಕಮೆಂಟ್‌ಗಳಿಗೆ ಮುಗಿಯಲಿಲ್ಲ. ಜಗತ್ತಿನ ಅತಿ ಶ್ರೀಮಂತರಲ್ಲಿ ಒಬ್ಬರಾದ, ರಿಲಯನ್ಸ್ ಕಂಪನಿ ಮಾಲೀಕರಾದ ಮುಕೇಶ್ ಅಂಬಾನಿಯೇ ಆಕೆಗೆ ಉತ್ತರ ಬರೆದಿದ್ದಾರೆ. ಇಲ್ಲಿದೆ ಆಸಕ್ತಿದಾಯಕ ಪೋಸ್ಟ್ ಮತ್ತು ಅದಕ್ಕೆ ಬಂದ ಬುದ್ಧಿವಂತಿಕೆಯ ಉತ್ತರ.

 
ಯುವತಿಯ ಖಾತೆ: 
 
ಶೀರ್ಷಿಕೆ: ನಾನು ಶ್ರೀಮಂತ ಯುವಕನನ್ನು ಮದುವೆಯಾಗಲು ಏನು ಮಾಡಬೇಕು? 
 
*ನಾನು ಈ ಮುಂದೆ ಹೇಳಿರುವುದೆಲ್ಲ ಪ್ರಾಮಾಣಿಕ ಮಾತುಗಳಾಗಿವೆ. 
 
*ನಾನು 25ರ ಹರೆಯದವಳು. ತುಂಬ ಸುಂದರಳಾಗಿದ್ದು, ಉತ್ತಮ ಸ್ಟೈಲ್ ಮತ್ತು ಟೇಸ್ಟ್ ಇರುವವಳು. ನಾನು ವಾರ್ಷಿಕ 100ಕೋಟಿ  ಅಥವಾ ಅದಕ್ಕಿಂತ ಹೆಚ್ಚು ದುಡಿಯುವವನನ್ನು ವಿವಾಹವಾಗ ಬಯಸಿದ್ದೇನೆ. 
 
*ನನಗೆ ಅತಿ ಲಾಲಸೆ ಎಂದು ನೀವು ಅಂದುಕೊಳ್ಳಬಹುದು. ಆದರೆ ಪ್ರಸ್ತುತ ವಾರ್ಷಿಕ 2 ಕೋಟಿ ದುಡಿಯುವವರನ್ನು ಮಧ್ಯಮ ವರ್ಗದವರೆನ್ನಲಾಗುತ್ತಿದೆ. 
 
*ನನ್ನ ಅವಶ್ಯಕತೆ ಬಹಳ ದೊಡ್ಡದೇನಲ್ಲ. ಈ ವೇದಿಕೆಯಲ್ಲಿ ( ಸಾಮಾಜಿಕ ಜಾಲತಾಣ) ವಾರ್ಷಿಕ 100 ಕೋಟಿ ದುಡಿಯುವವರು ಯಾರಾದರೂ ಇದ್ದೀರಾ? ನೀವೆಲ್ಲ ವಿವಾಹಿತರೆ? 
 
*ನಾನು ಕೇಳಬಯಸುವುದು:  ನಿಮ್ಮಂತಹ ಶ್ರೀಮಂತ ಯುವಕರನ್ನು ಮದುವೆಯಾಗಲು ನಾನು ಏನು ಮಾಡಬೇಕು? 
 
*ನಾನು ಈವರೆಗೆ ಡೇಟಿಂಗ್ ಮಾಡಿದವರಲ್ಲಿ ಅತಿ ಶ್ರೀಮಂತರೆಂದರೆ 50 ಕೋಟಿ ವಾರ್ಷಿಕ ಆದಾಯ ಇರುವವರಾಗಿದ್ದಾರೆ. 
 
*ಆದರೆ ಅತಿ ದುಬಾರಿ ವಸತಿ ಪ್ರದೇಶ ಎನಿಸುವ ನ್ಯೂಯಾರ್ಕ್ ಸಿಟಿ ಗಾರ್ಡನ್ ಪಶ್ಚಿಮದಲ್ಲಿ ವಾಸಿಸಬೇಕೆಂದರೆ ವಾರ್ಷಿಕ 50 ಕೋಟಿ ಆದಾಯವೂ ಸಾಲದು . 
 
ನಾನು ಕೆಲವು ಪ್ರಶ್ನೆಗಳನ್ನು ನಮ್ರತೆಯಿಂದ ಕೇಳ ಬಯಸುತ್ತೇನೆ: 
 
1. ಶ್ರೀಮಂತ ಅವಿವಾಹಿತರು ಹೆಚ್ಚೆಚ್ಚು ಸಂಖ್ಯೆಯಲ್ಲಿ ಎಲ್ಲಿ ಸಿಗುತ್ತಾರೆ? 
 
2. ಯಾವ ಏಜ್ ಗ್ರುಪ್‌ನವರನ್ನು ನಾನು ಗುರಿಯಾಗಿಸಬೇಕು? 
 
3. ಹೆಚ್ಚಿನ ಶ್ರೀಮಂತರ ಪತ್ನಿಯರು ಯಾಕೆ ತಕ್ಕಮಟ್ಟಿನ ಸೌಂದರ್ಯವತಿಯರಾಗಿರುತ್ತಾರೆ? ನೋಡಲು ಸುಂದರರಾಗಿಲ್ಲದ, ಆದರೆ ಶ್ರೀಮಂತರನ್ನು ಮದುವೆಯಾಗಲು ಶಕ್ತರಾಗಿರುವ ಕೆಲವು ಹುಡುಗಿಯರನ್ನು ನಾನು ಭೇಟಿಯಾಗಿದ್ದೇನೆ.
 
4. ನಿಮ್ಮ ಪತ್ನಿ ಇಂತವರೇ ಆಗಿರಬೇಕೆಂದು, ಯಾರು ನಿಮ್ಮ ಗರ್ಲ್ ಫ್ರೆಂಡ್ ಆಗಿರಬೇಕೆಂದು ಹೇಗೆ ನಿರ್ಧರಿಸುತ್ತೀರಾ? ( ಮದುವೆಯಾಗುವುದೇ ನನ್ನ ಈಗಿನ ಗುರಿ)
 
ಹೀಗೆ ಯುವತಿ ಮಾಡಿರುವ ಪೋಸ್ಟ್‌ಗೆ ಮುಕೇಶ್ ಅಂಬಾನಿ ಅವರು ನೀಡಿರುವ ಉತ್ತರ ಹೀಗಿದೆ: 
 
ಡಿಯರ್ ಪೂಜಾ,
 
ನಾನು ನಿನ್ನ ಪತ್ರವನ್ನು ಅತ್ಯಂತ ಆಸಕ್ತಿಯಿಂದ ಓದಿದ್ದೇನೆ. ನಿನ್ನಂತೆ ಪ್ರಶ್ನೆ  ಅನೇಕ ಯುವತಿಯರಿಗೆ ಇದ್ದಿರಬಹುದೆಂದುಕೋ. ವೃತ್ತಿಪರ ಹೂಡಿಕೆದಾರನಾಗಿ ನಿಮ್ಮ ಪರಿಸ್ಥಿತಿಯನ್ನು ವಿಶ್ಲೇಷಣೆ ಮಾಡಲು ನನಗೆ ಅವಕಾಶ ಕೊಡಿ. 
 
ನನ್ನ ವಾರ್ಷಿಕ ಆದಾಯ 100ಕೋಟಿಗಿಂತ ಹೆಚ್ಚಿದ್ದು, ಇದು ನಿಮ್ಮ ಅಗತ್ಯಗಳನ್ನು ಪೂರೈಸುತ್ತದೆ. ಹೀಗಾಗಿ ನಾನು ಸಮಯ ವ್ಯರ್ಥ ಮಾಡುತ್ತಿಲ್ಲವೆಂದು ಯಾರೂ ಭಾವಿಸುತ್ತಿಲ್ಲ ಎಂದುಕೊಳ್ಳುತ್ತೇನೆ. 
 
ಉದ್ಯಮಿಯ ಸ್ಥಾನದಲ್ಲಿ ನಿಂತು ನೋಡುವುದಾದರೆ ನಿಮ್ಮನ್ನು ಮದುವೆಯಾಗುವುದು ಅತಿ ಕೆಟ್ಟ ನಿರ್ಧಾರ. ಉತ್ತರ ತುಂಬ ಸರಳವಾಗಿದೆ. ವಿವರಗಳನ್ನು ಪಕ್ಕಕ್ಕಿಡಿ. ನೀವು ಪ್ರಯತ್ನಿಸುತ್ತಿರುವುದು ಹಣ ಮತ್ತು ಸೌಂದರ್ಯದ ವಿನಿಮಯ. ಎ ಎಂಬ ವ್ಯಕ್ತಿ ಸೌಂದರ್ಯ ನೀಡುತ್ತಾನೆ. ಬಿ ಎಂಬ ವ್ಯಕ್ತಿ ಅದಕ್ಕೆ ಹಣ ಸಂದಾಯ ಮಾಡುತ್ತಾನೆ. ವ್ಯಾಪಾರದಲ್ಲಿ ಎಲ್ಲವನ್ನು ತಾಳೆ ಹಾಕಿಯೇ ನೋಡಲಾಗುತ್ತದೆ.
 
ಆದಾಗ್ಯೂ ಇಲ್ಲಿ  ಬಹುದೊಡ್ಡ ಸಮಸ್ಯೆ ಇದೆ. ನಿಮ್ಮ ಸೌಂದರ್ಯ ಕಳಾಹೀನವಾಗಬಹುದು. ಆದರೆ ನನ್ನ ಹಣ ಒಳ್ಳೆಯ ಉದ್ದೇಶವಿಲ್ಲದೆ ಖರ್ಚಾಗದು. ಸತ್ಯವೇನೆಂದರೆ ನನ್ನ ಆದಾಯ ವರ್ಷದಿಂದ ವರ್ಷಕ್ಕೆ ಹೆಚ್ಚಬಹುದು. ಆದರೆ ನೀವು ವರ್ಷದಿಂದ ವರ್ಷಕ್ಕೆ ಸುಂದರಳಾಗಲು ಸಾಧ್ಯವಿಲ್ಲ. 
 
ಆರ್ಥಶಾಸ್ತ್ರದ ದೃಷ್ಟಿಕೋನದಿಂದ ನೋಡುವುದಾದರೆ, ನಾನು ಮೌಲ್ಯವಿರುವ ಆಸ್ತಿ, ನೀವು ಮೌಲ್ಯಕುಸಿತವಾಗುವಂತಹ ಆಸ್ತಿ. ಇದು ಸಹಜವಾದ ಅಪಮೌಲ್ಯವಲ್ಲ. ಅದೊಂದೆ ನಿಮ್ಮ ಆಸ್ತಿಯಾಗಿದ್ದರೆ 10 ವರ್ಷದ ಬಳಿಕ ನಿಮ್ಮ ಮೌಲ್ಯ ಅತ್ಯಂತ ಕೆಟ್ಟದಾಗಿರುತ್ತದೆ. ನಾವು ವಾಲ್ ಸ್ಟ್ರೀಟ್‌ನಲ್ಲಿ ಬಳಸುವಂತೆ ಪ್ರತಿ ವ್ಯಾಪಾರ ಒಂದು ಸ್ಥಾನಮಾನವನ್ನು ಹೊಂದಿರುತ್ತದೆ. ಡೇಟಿಂಗ್ ಕೂಡ್ ಒಂದು ವ್ಯಾಪಾರಿ ವ್ಯವಸ್ಥೆಯಂತೆ.
 
ವ್ಯಾಪಾರಿ ಮೌಲ್ಯ ಕಡಿಮೆಯಾದರೆ ನಾವು ಅದನ್ನು ಮಾರಿ ಬಿಡುತ್ತೇವೆ. ಅದನ್ನು ಹೆಚ್ಚು ಸಮಯ ಇಟ್ಟುಕೊಂಡಿರಲಾಗದು. ನೀವು ಬಯಸುತ್ತಿರುವ ಮದುವೆಯ ಕಥೆಯಲ್ಲೂ ಹಾಗೆಯೆ. ಇದನ್ನು ಹೇಳಲು ಕಠಿಣ ಎನಿಸುತ್ತದೆ, ಅಪಮೌಲ್ಯ ಹೊಂದಿದ ಮೇಲೆ ಆ ವಸ್ತುವನ್ನು ಮಾರುವುದು ಅಥವಾ ಗುತ್ತಿಗೆ ನೀಡುವುದು ಬುದ್ಧಿವಂತಿಕೆ ಎನಿಸುತ್ತದೆ. 
 
100ಕೋಟಿ ವಾರ್ಷಿಕ  ಆದಾಯ ಪಡೆಯುವವನು ಮೂರ್ಖನಲ್ಲ. ನಾವು ನಿಮ್ಮ ಜತೆ ಡೇಟಿಂಗ್ ಮಾಡಬಹುದು, ಮದುವೆಯಾಗಲು ಸಾಧ್ಯವಿಲ್ಲ. ಶ್ರೀಮಂತ ಯುವಕನನ್ನು ಮದುವೆಯಾಗಬೇಕೆಂಬ ಮಹಾತ್ವಾಕಾಂಕ್ಷೆಯನ್ನು ಬಿಟ್ಟು ಬಿಡಿ ಎಂಬುದು ನನ್ನ ಸಲಹೆ. ನೀವೇ 100ಕೋಟಿ ಆದಾಯ ಗಳಿಸುವಂತಹ ಉದ್ಯಮಿಯಾಗಿ. ಶ್ರೀಮಂತ ಮೂರ್ಖನನ್ನು ಹುಡುಕುವುದಕ್ಕಿಂತ ಇದು ಉತ್ತಮ ಆಯ್ಕೆ. 
 
ಈ ಉತ್ತರ ನಿಮಗೆ ಸಹಕಾರಿಯಾಗಿದೆ ಎಂದು ಭಾವಿಸಿರುತ್ತೇನೆ,
ಮುಕೇಶ್ ಅಂಬಾನಿ

Share this Story:

Follow Webdunia kannada