Webdunia - Bharat's app for daily news and videos

Install App

ಸೀತೆಯನ್ನು ಹೊತ್ತೊಯ್ದ ರಾವಣ ಘಾಜಿಯಾಬಾದ್‌ ಮೂಲದ ದಲಿತ: ಸ್ವಾಮಿ

Webdunia
ಸೋಮವಾರ, 29 ಡಿಸೆಂಬರ್ 2014 (15:45 IST)
ಹಿಂದೂಗಳ ಪವಿತ್ರ ಗೃಂಥ ರಾಮಾಯಣದಲ್ಲಿ ಬರುವ ಪ್ರಮುಖ ಪಾತ್ರ, ಲಂಕಾಧಿಪತಿ ರಾವಣ ವಿಶ್ರಾವಸ್ಸು ಎಂಬ ಯತಿಗಳ ಪುತ್ರ. ಹಾಗಾಗಿ ಬ್ರಾಹ್ಮಣ ಎಂಬ ನಂಬಿಕೆ ಹಿಂದೂಗಳದ್ದು. ಪುರಾಣಗಳು ಸಹ ಹಾಗೇ ಹೇಳುತ್ತವೆ. ಆದರೆ, ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಪ್ರಕಾರ ರಾವಣ ಬ್ರಾಹ್ಮಣನಲ್ಲ. ಅತನೊಬ್ಬ ದಲಿತ.
ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಲಾದ "ನಾನು ಮತ್ತು ನನ್ನ ಭಾರತ" ಉಪನ್ಯಾಸ ಕಾರ್ಯಕ್ರಮದಲ್ಲಿ  ಮಾತನಾಡುತ್ತಿದ್ದ, ಸುಬ್ರಮಣಿಯನ್, ಪ್ರಾಥಮಿಕ ಶಾಲಾ ಮಕ್ಕಳ ಇತಿಹಾಸ ಪುಸ್ತಕಗಳಲ್ಲಿನ ಬಹಳಷ್ಟು ವಿಷಯಗಳು ಅರ್ಥವಿಲ್ಲದ್ದು, ನಿರಾಧಾರವಾದ್ದು. ಮಕ್ಕಳಿಗೆ ಬೋಧಿಸಲ್ಪಡುವ ಪುಸ್ತಕಗಳಲ್ಲಿ ಅಗತ್ಯ ಬದಲಾವಣೆಯನ್ನು ತರಬೇಕಿದೆ ಎಂದು ಕೇಂದ್ರ ಸರಕಾರವನ್ನು ಒತ್ತಾಯಿಸಿದರು.
 
ತಮ್ಮ ಐತಿಹಾಸಿಕ ಆವಿಷ್ಕಾರವನ್ನು ಸಭೆಯ ಮುಂದಿಟ್ಟ ಸ್ವಾಮಿ ನೆರೆದವರು ಆಶ್ಚರ್ಯ ಚಕಿತರಾಗುವಂತೆ ಮಾಡಿದರು. ರಾವಣ ಮತ್ತು ಮಂಡೋದರಿ ಇಬ್ಬರೂ ಉತ್ತರಪ್ರದೇಶ ಮೂಲದವರು. ರಾವಣನು ಘಾಜಿಯಾಬಾದ್ ಬಳಿಯ ಬಸರಾಖ ಎಂಬ ಊರಿನವನಾದರೆ, ಮಂಡೋದರಿಯು ಮೀರತ್ ಜಿಲ್ಲೆಯಲ್ಲಿ ಜನಿಸಿದ್ದಳು. ಇಬ್ಬರೂ ಕೂಡ ದಲಿತರೇ. ಪರಶಿವನಿಂದ ವರ ಪಡೆದ ರಾವಣ ಲಂಕಾವನ್ನಾಳುತ್ತಿದ್ದ ಕುಬೇರನನ್ನು ಪದಚ್ಯುತಗೊಳಿಸಿ ಅಲ್ಲಿಯ ಪಟ್ಟವನ್ನೇರುತ್ತಾನೆ ಎಂದು ಸುಬ್ರಮಣಿಯನ್ ಸ್ವಾಮಿ ವಾದಿಸಿದ್ದಾರೆ. 
 
ಶಾಲೆಗಳಲ್ಲಿ ಬೋಧಿಸಲಾಗುವ ಇತಿಹಾಸ ಬ್ರಿಟಿಷ್ ಕಾಲದಲ್ಲಿ ಬರೆಯಲ್ಪಟ್ಟಿದ್ದು. ಇದರಲ್ಲಿ ದೇಶದ ನಿವಾಸಿಗಳನ್ನು ಆರ್ಯರು ಮತ್ತು ದ್ರಾವಿಡರು ಎಂದು ಒಡೆದು ತೋರಿಸಿ ಭಾರತೀಯರ ಮಾನಸಿಕತೆಯನ್ನೇ ಒಡೆಯಲಾಗಿದೆ. ಜಾತಿ ಆಧಾರದ ಮೇಲೆ ನಮ್ಮನ್ನು ಪ್ರತ್ಯೇಕಿಸಿ ತೋರಿಸಲಾಗಿದೆ. ಭಾರತದ ಶ್ರೇಷ್ಠ ವ್ಯಕ್ತಿತ್ವಗಳ ವ್ಯಕ್ತಿಗಳ ಬಗ್ಗೆ ಪಾಠವನ್ನು ಸೇರಿಸುವ ಬದಲು ಬಾಬರ್, ಶೇರ್ ಶಾ ಶೂರಿಯವರಂತಹ  ದಾಳಿಕೋರರ ಬಗ್ಗೆ ಬೋಧಿಸಲಾಗುತ್ತದೆ. ಇಂಗ್ಲೀಷ್‌ ಏಕಸ್ವಾಮ್ಯವನ್ನು ಕಾಯ್ದುಕೊಳ್ಳಲು ಸಂಸ್ಕೃತ, ಸ್ಥಳೀಯ ಮತ್ತು ಜಾನಪದ ಭಾಷೆಗಳನ್ನು ಮೂಲೆಗುಂಪು ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸ್ವಾಮಿ, ಬಿಜೆಪಿ ದೇಶಿಯ ಮತ್ತು ಮೌಲ್ಯಾಧಾರಿತ ಶೈಕ್ಷಣಿಕ ವ್ಯವಸ್ಥೆಯನ್ನು ಪ್ರಚುರ ಪಡಿಸಲಿದೆ ಎಂದು ಹೇಳಿದ್ದಾರೆ.
 
ಈ ಮಣ್ಣಿನಲ್ಲಿ ಹುಟ್ಟಿದ ಎಲ್ಲರು ಹಿಂದೂಗಳು ಮತ್ತು ಇದನ್ನು ಸಾಬೀತು ಪಡಿಸಲು ಡಿಎನ್‌ಎ ಪರೀಕ್ಷೆ ಮಾಡಬೇಕಿಲ್ಲ ಎಂದ ಅವರು, ದೇಶದ ಮುಸ್ಲಿಮರು ಸಹ ಈ ವಾಸ್ತವವನ್ನು ತಿಳಿದಿದ್ದಾರೆ. ಆದರೆ ಅವರ ಧರ್ಮಗುರುಗಳು ಮಾತ್ರ ಇದನ್ನು ಒಪ್ಪಿಕೊಳ್ಳಲು ತಯಾರಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments