Select Your Language

Notifications

webdunia
webdunia
webdunia
webdunia

ಕಾಮುಕನಿಗೆ ಜೀವಾವಧಿ ಶಿಕ್ಷೆ

ಕಾಮುಕನಿಗೆ ಜೀವಾವಧಿ ಶಿಕ್ಷೆ
ರಾಯಚೂರು , ಶುಕ್ರವಾರ, 28 ಅಕ್ಟೋಬರ್ 2016 (10:44 IST)
ರಾಯಚೂರು: ಎರಡು ವರ್ಷದ ಹಿಂದೆ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಯೋರ್ವನಿಗೆ ಇಲ್ಲಿಯ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಆದೇಶಿಸಿದೆ.

ರಾಜೇಂದ್ರಸಿಂಗ್ ಎಂಬಾತನೇ ಅತ್ಯಾಚಾರ ಎಸಗಿದ ಆರೋಪಿಯಾಗಿ ಈಗ ಜೀವಾವಧಿ ಶಿಕ್ಷೆಗೆ ಒಳಗಾದವನಾಗಿದ್ದಾನೆ. 2014 ರಲ್ಲಿ ಅಪ್ರಾಪ್ತ ಬಾಲಕಿ ರಾಧಿಕಾ(ಹೆಸರು ಬದಲಿಸಲಾಗಿದೆ)ಳನ್ನು ಅಪಹರಿಸಿ, ಅತ್ಯಾಚಾರವೆಸಗಿ ಕೊಲೆಗೈಯ್ಯಲಾಗಿತ್ತು. ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿ, ಆರೀಪಿಯನ್ನು ಬಂಧಿಸಿ ನ್ಯಾಯಾಲಯದ ವಶಕ್ಕೆ ಒಪ್ಪಿಸಲಾಗಿತ್ತು.
 
ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ ನಂತರ, ಎರಡು ವರ್ಷಗಳ ಕಾಲ ವಾದ ವಿವಾದ ನಡೆದಿತ್ತು. ಆದರೆ ಈಗ ಪ್ರಕರಣಕ್ಕೆ ಸಂಬಂಧಿಸಿ ರಾಯಚೂರು ೧ನೇ ಜಿಲ್ಲಾ ಸತ್ರಾ ನ್ಯಾಯಾಧೀಶ ಎಂ. ಮಹಾದೇವಯ್ಯ, ಪೋಸ್ಕೊ ಕಾಯ್ದೆಯ ೩೬೬ ಮತ್ತು ೩೭೬ ಕಲಂ ಅಡಿಯಲ್ಲಿ ಆರೋಪಿಗೆ ೨೫ ಸಾವಿರ ದಂಡದೊಂದಿಗೆ ಜೀವಾವದಿ ಶಿಕ್ಷೆ ವಿಧಿಸಿದ್ದಾರೆ. ಅಲ್ಲದೆ, ರಾಧಿಕಾಳ ಕುಟುಂಬಕ್ಕೆ ಒಂದು ಲಕ್ಷ ರೂ. ಪರಿಹಾರ ನೀಡುವಂತೆಯೂ ಆದೇಶಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಇದು ವೈನ್ ಕಾರಂಜಿ, ಸಂಪೂರ್ಣ ಉಚಿತ!