Select Your Language

Notifications

webdunia
webdunia
webdunia
webdunia

ಹೆಡ್‌ಮಾಸ್ತರ್‌ನಿಂದ 3 ವರ್ಷಗಳಿಂದ ರೇಪ್: ಮಗುವಿಗೆ ಜನ್ಮ ನೀಡಿದ 15 ವರ್ಷದ ಬಾಲಕಿ

ಹೆಡ್‌ಮಾಸ್ತರ್‌ನಿಂದ 3 ವರ್ಷಗಳಿಂದ ರೇಪ್: ಮಗುವಿಗೆ ಜನ್ಮ ನೀಡಿದ 15 ವರ್ಷದ ಬಾಲಕಿ
ಕೊಂಡಾಗಾವ್ (ಚತ್ತೀಸ್‌ಗಢ್) , ಬುಧವಾರ, 20 ಮೇ 2015 (18:59 IST)
15 ವರ್ಷ ವಯಸ್ಸಿನ ಬಡಕಟ್ಟು ಸಮುದಾಯದ ಬಾಲಕಿಯ ಮೇಲೆ ಶಾಲಾ ಹೆಡ್‌ಮಾಸ್ತರ್‌ನೊಬ್ಬ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಅತ್ಯಾಚಾರಗೈದ ಹಿನ್ನೆಲೆಯಲ್ಲಿ ಬಾಲಕಿ ಇಂದು ಮಗುವಿಗೆ ಜನ್ಮ ನೀಡಿದ್ದಾಳೆ.  
 
ನಾನು ಏಳನೇ ತರಗತಿಯಲ್ಲಿ ಓದುತ್ತಿರುವಾಗ ಚಾಕೋಲೇಟ್, ಬಿಸ್ಕಿಟ್ ಮತ್ತು ಸಿಹಿ ತಿಂಡಿ ತಿನಿಸುಗಳ ಆಮಿಷವೊಡ್ಡಿ ಶಾಲೆಯ ಹೆಡ್‌ಮಾಸ್ತರ್‌ ಮಾಧವ್ ನಾಗ್ ಅತ್ಯಾಚಾರವೆಸಗಲು ಆರಂಭಿಸಿದ. 10ನೇ ತರಗತಿಗೆ ಬರುವವರೆಗೂ ನಿರಂತರ ಅತ್ಯಾಚಾರ ಮಾಡಿದ್ದಾನೆ ಎಂದು ಬಾಲಕಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.
 
ಬಾಲಕಿಯ ಕುಟುಂಬದವರು ಆರಂಭದಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಲು ಹಿಂದೇಟು ಹಾಕಿದರೂ ನಂತರ ಜನರ, ಪೊಲೀಸರ ಒತ್ತಾಯದ ಮೇರೆಗೆ ಆರೋಪಿ ಹೆಡ್‌ಮಾಸ್ತರ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಮೀನಾ ತಿಳಿಸಿದ್ದಾರೆ.
 

Share this Story:

Follow Webdunia kannada