Webdunia - Bharat's app for daily news and videos

Install App

ರೇಪ್ ಹೊಸತೇನಲ್ಲ, ಭೂಮಿ ಸೃಷ್ಟಿಯಾದಾಗಿನಿಂದ ರೇಪ್ ನಡೆಯುತ್ತಿವೆ: ಬಿಜೆಪಿ

Webdunia
ಶನಿವಾರ, 23 ಜುಲೈ 2016 (13:08 IST)
ಅತ್ಯಾಚಾರಗಳು ನಡೆಯುವುದು ಹೊಸತೇನಲ್ಲ. ಭೂಮಿ ಸೃಷ್ಟಿಯಾದಾಗಿನಿಂದ ಅತ್ಯಾಚಾರಗಳು ನಡೆಯುತ್ತಿವೆ ಎಂದು ಹರಿಯಾಣಾದ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ನಿರ್ಮಲ್ ಭೈರಾಗಿ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. 
 
ಕಳೆದ ಎರಡು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳಲ್ಲಿ ಹೆಚ್ಚಳವಾಗುತ್ತಿವೆ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಖಾರವಾಗಿ ಉತ್ತರಿಸಿದ ಅವರು, ರೇಪ್ ಎಸಗುವುದು ಇವತ್ತು ನಿನ್ನೆಯ ಕೃತ್ಯವಲ್ಲ. ಭೂಮಿ ರಚನೆಯಾದಾಗಿನಿಂದ ಅತ್ಯಾಚಾರಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.
 
ರಾಜ್ಯ ಸರಕಾರ ಇಂತಹ ಘಟನೆಗಳನ್ನು ತಡೆಯಲು ಗಂಭೀರವಾಗಿದ್ದು ಕಠಿಣ ಕ್ರಮಗಳನ್ನು ಜಾರಿಗೊಳಿಸಿದೆ. ರೋಹ್ಟಕ್ ರೇಪ್‌ನ ಬಹುತೇಕ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ.
 
ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದ ಬಿಜೆಪಿ ಮಹಿಳಾ ಘಟಕ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷದ ಕಾರ್ಯಕರ್ತರ ಅಭಿಪ್ರಾಯಗಳನ್ನು ಪಡೆದು ವರದಿ ಸಿದ್ದಪಡಿಸಲಾಗುವುದು ಎಂದು ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ನಿರ್ಮಲ್ ಭೈರಾಗಿ ಹೇಳಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕರ್ನಾಟಕವು ಅಪರಾಧಿಗಳ ರಾಜ್ಯವಾಗುತ್ತಿದೆ: ಶೋಭಾ ಕರಂದ್ಲಾಜೆ ಆಕ್ಷೇಪ

ಸಿದ್ದರಾಮಯ್ಯನನ್ನು ಕೊಂದ್ರೆ ಹಿಂದೂಗಳಿಗೆ ನೆಮ್ಮದಿ ಎಂದಿದ್ದ ವ್ಯಕ್ತಿ ಅರೆಸ್ಟ್

NEET ಪರೀಕ್ಷೆ ಹೇಗಿತ್ತು ಎಂದರೆ ವಿದ್ಯಾರ್ಥಿಗಳು ಶಾಕ್ ಆಗ್ತಿದ್ದಾರೆ: ಕಾರಣ ಇಲ್ಲಿದೆ

ಕಾನೂನು ಬಾಹಿರ ಟೆಂಡರ್ ಮೂಲಕ ಸರ್ಕಾರದಿಂದ ಭಾರೀ ಮೋಸ: ಛಲವಾದಿ ನಾರಾಯಣಸ್ವಾಮಿ

Arecanut price today: ಇಂದು ಅಡಿಕೆ, ಕಾಳುಮೆಣಸು ಬೆಲೆ ಎಷ್ಟಾಗಿದೆ ನೋಡಿ

ಮುಂದಿನ ಸುದ್ದಿ
Show comments