Webdunia - Bharat's app for daily news and videos

Install App

ದೇವ 'ದಾನವ' ರಾಮ್‌ಪಾಲ್‌ ವಿರುದ್ಧ ರಾಜದ್ರೋಹ ಆರೋಪ

Webdunia
ಗುರುವಾರ, 20 ನವೆಂಬರ್ 2014 (14:53 IST)
ಕೊಲೆ ಪ್ರಕರಣ ಆರೋಪಿಯಾಗಿರುವ ದೇವಮಾನವ ರಾಂಪಾಲ್ ಜಾಮೀನನ್ನು ಪಂಜಾಬ್- ಹರಿಯಾಣ ಹೈಕೋರ್ಟ್ ಗುರುವಾರ ರದ್ದುಗೊಳಿಸಿದೆ.
 
2006ರಲ್ಲಿ ರಾಂಪಾಲ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿತ್ತು. 2007ರಲ್ಲಿ ರಾಂಪಾಲ್ ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದರು.
 
ಹರ್ಯಾಣದ ಹಿಸಾರ್ ಅಕ್ಷರಶಃ ರಣರಂಗವಾಗಲು ಕಾರಣವಾಗಿದ್ದ ದೇವ ಮಾನವ ರಾಂಪಾಲ್‌ನನ್ನು ನಿನ್ನೆ ಪೊಲೀಸರು ಬಂಧಿಸಿದ್ದರು. ಇಂದು 2007ರಲ್ಲಿ ರಾಂಪಾಲ್ ಪಡೆದಿದ್ದ ಜಾಮೀನನ್ನು ಹೈಕೋರ್ಟ್ ರದ್ದುಗೊಳಿಸಿದೆ.
 
ಬಂಧನದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಬೆಂಬಲಿಗರನ್ನೇ ಗುರಾಣಿಯಾಗಿಟ್ಟುಕೊಂಡಿದ್ದ ರಾಂಪಾಲ್, 18 ತಿಂಗಳ ಹಸುಗೂಸು ಸೇರಿದಂತೆ 6 ಅಮಾಯಕರ ಸಾವಿಗೆಕಾರಣನಾಗಿದ್ದ.
 
ಪೋಲೀಸರು ಆಶ್ರಮ ಪ್ರವೇಶಿಸುವುದನ್ನು ತಡೆಯುವ ಸಲುವಾಗಿ ಎಲ್ಲ ರೀತಿಯ ರಣತಂತ್ರ ರೂಪಿಸಿದ್ದ ಆತ, ಆಶ್ರಮದಲ್ಲೇ ಅವಿತುಕೊಂಡು ಹಿಂಸೆಗೆ ಪ್ರಚೋದನೆ ನೀಡುತ್ತಿದ್ದ. ಕೊನೆಗೂ ಸತತ 2 ದಿನಗಳ ಕಾರ್ಯಾಚರಣೆ ಬಳಿಕ ರಾಂಪಾಲ್‌ನನ್ನು ಆಶ್ರಮದಲ್ಲಿಯೇ ಸೆರೆ ಹಿಡಿದು ಪೊಲೀಸರು ಚಂಡೀಗಡಕ್ಕೆ ಕರೆದೊಯ್ದಿದ್ದಾರೆ.
 
ರಾಜದ್ರೋಹ ಆರೋಪ: ಈ ದೇವ 'ದಾನವ'ನ ವಿರುದ್ಧ ಬುಧವಾರ ರಾಜದ್ರೋಹ ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ಹೊರಿಸಲಾಗಿತ್ತು. ಮಂಗಳವಾರ ಆರಂಭವಾದ ಕಾರ್ಯಾಚರಣೆ ಬುಧವಾರವೂ ಮುಂದುವರಿದಿತ್ತು. ಆಶ್ರಮದಲ್ಲಿದ್ದ 15 ಸಾವಿರ ಮಂದಿಯಲ್ಲಿ 14 ಸಾವಿರ ಮಂದಿ ಮಂಗಳವಾರ ರಾತ್ರಿ ಸುರಕ್ಷಿತವಾಗಿ ಹೊರಬಂದಿದ್ದರು. ರಾಂಪಾಲ್‌ನನ್ನು ಬಂಧಿಸದೇ ಪೊಲೀಸರು ಅಲ್ಲಿಂದ ಕದಲುವುದಿಲ್ಲ ಎಂದು ಹರ್ಯಾಣ ಸಿಎಂ ಮನೋಹರ್‌ಲಾಲ್ ಖಟ್ಟರ್ ತಿಳಿಸಿದ್ದರು.
 
15,000 ಆಶ್ರಮದ ಒಳಗಿದ್ದ ರಾಂಪಾಲ್ ಬೆಂಬಲಿಗರು
14,000 ಈ ಪೈಕಿ ಸ್ಥಳಾಂತರಗೊಂಡವರ ಸಂಖ್ಯೆ
1,000 ಇನ್ನೂ ಆಶ್ರಮದಲ್ಲಿ ಇರುವವರು
6 ಮಂದಿ ಮೃತರ ಸಂಖ್ಯೆ(18 ತಿಂಗಳ ಹಸಗೂಸು ಸೇರಿ)
ದಾಖಲಾದ ಪ್ರಕರಣಗಳು-ಸೆಕ್ಷನ್ 121(ಸರ್ಕಾರದ ವಿರುದ್ಧ ಯುದ್ಧ ಸಾರುವ ಯತ್ನ, ಯುದ್ಧಕ್ಕೆ ಪ್ರಚೋದನೆ), 121ಎ(ಸರ್ಕಾರದ ವಿರುದ್ಧ ಅಪರಾಧ ಮಾಡಲು ಸಂಚು), 122 (ಶಸ್ತ್ರಾಸ್ತ್ರಗಳ ಸಂಗ್ರಹ). ಜತೆಗೆ ಹತ್ಯೆ ಯತ್ನ, ಹಲ್ಲೆ ಪ್ರಕರಣವೂ ದಾಖಲಾಗಿದೆ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments