Select Your Language

Notifications

webdunia
webdunia
webdunia
webdunia

ರಾಮ ಇಮಾಮ್‍ರಂತೆ, ಅಯೋಧ್ಯೆ ನಮ್ಮ ತೀರ್ಥಸ್ಥಳ: ಮುಸ್ಲಿಮ್ ಮಹಿಳೆಯರು

ರಾಮ ಇಮಾಮ್‍ರಂತೆ, ಅಯೋಧ್ಯೆ ನಮ್ಮ ತೀರ್ಥಸ್ಥಳ: ಮುಸ್ಲಿಮ್ ಮಹಿಳೆಯರು
ವಾರಣಾಸಿ , ಸೋಮವಾರ, 30 ಮಾರ್ಚ್ 2015 (18:38 IST)
ಭಗವಾನ್ ರಾಮ ತಮ್ಮ ಇಮಾಮ್‌‍ರಂತೆ ಮತ್ತು ಅಯೋಧ್ಯೆ ನಮ್ಮ ತೀರ್ಥಯಾತ್ರಾ ಸ್ಥಳ ಎಂದಿರುವ ವಾರಣಾಸಿಯ ಹಲವು ಮುಸ್ಲಿಂ ಮಹಿಳೆಯರು ಶನಿವಾರ ಅದ್ದೂರಿಯಾಗಿ ರಾಮನವಮಿ ಹಬ್ಬವನ್ನು ಆಚರಿಸಿದರು.

ರಾಮನವಮಿ ಆಚರಣೆ ಸಂದರ್ಭದಲ್ಲಿ ರಾಮನ ಗುಣಗಾನ ಮಾಡುತ್ತಿದ್ದ ಮುಸ್ಲಿಮ್ ಸ್ತ್ರೀಯರು ಇಮಾಮ್-ಎ-ಹಿಂದ್ ಶ್ರೀ ರಾಮ್ ನೆಲಸಿದ್ದ ಅಯೋಧ್ಯೆ ನಮ್ಮ ಪುಣ್ಯಕ್ಷೇತ್ರವಾಗಿದೆ ಎಂದು ಹೇಳಿದ್ದಾರೆ. 
 
ವಿಶಾಲ್ ಭಾರತ್ ಸಂಸ್ಥಾನದ (VBS) ಸದಸ್ಯರಾಗಿರುವ ಈ ಮಹಿಳೆಯರು, ಕೋಮುಸೌಹಾರ್ದದ ಬಲವಾದ ಸಂದೇಶವನ್ನು ಸಾರಲು ಅನೇಕ ವರ್ಷಗಳಿಂದ ರಾಮನವಮಿಯನ್ನು ಆಚರಿಸುತ್ತಿದ್ದಾರೆ. 
 
ರಾಷ್ಟ್ರೀಯ ಪತ್ರಿಕೆಯೊಂದರಲ್ಲಿ ಬಂದ ವರದಿಯ ಪ್ರಕಾರ, ಹುಕುಲ್‌ಗಂಜ್ ಕ್ಷೇತ್ರದ ವರುಣಾನಗರಮ್‌ನಲ್ಲಿ ಶ್ರೀರಾಮನಿಗೆ ಆರತಿ ಎತ್ತಿದ ಸ್ತ್ರೀಯರು ಕೌಶಲ್ಯಪುತ್ರನನ್ನು ಹೊಗಳಿ ಭಜನೆಗಳನ್ನು ಹಾಡಿದರು. ಅಲ್ಲದೇ ರಾಮ ನಾಮವನ್ನು ಬರೆದು ಉರ್ದು ರಾಮ ನಾಮ ಬ್ಯಾಂಕ್‌ನಲ್ಲಿ ಹಾಕಿದರು. 
 
ಶ್ರೀ ರಾಮ್ ಆರತಿ' ಮತ್ತು 'ಶ್ರೀ ರಾಮ್ ಪ್ರಾರ್ಥನಾ' ಯನ್ನು ಸಿದ್ಧಪಡಿಸಿದ್ದ ನಜ್ನೀನ್ ಅನ್ಸಾರಿ, "ಭಗವಾನ್ ರಾಮ್ ನಮಗೆಲ್ಲರಿಗೂ ಪೂರ್ವಜನಾಗಿದ್ದಾನೆ. ಜಾತಿ, ಮತ ಮತ್ತು ನಂಬಿಕೆಯ ಅಡೆತಡೆಗಳನ್ನು ಮೀರಿ  ಪ್ರತಿಯೊಬ್ಬರೂ ಈ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು", ಎಂದರು. 
 
ಮುಸ್ಲಿಂ, ಆಗಿದ್ದರೂ ಹಿಂದೂ ದೇವತೆಗಳನ್ನು ಹೊಗಳಿ ಹಾಡಲು ಯಾವುದೇ ಅಳುಕು ತೋರದ ನಜ್ನೀನ್, ಎಲ್ಲಾ ಸಮಸ್ಯೆಗಳಿಂದ ಹೊರಬರಲು ರಾಮನಾಮವೊಂದೇ ಸಾಕು ಎಂದು ನಂಬುತ್ತಾರೆ. ಆದ್ದರಿಂದ ಈ ಮಹಿಳೆಯಯರು ವಿಬಿಎಸ್‌ಲ್ಲಿ ಉರ್ದು 'ರಾಮ್ ನಾಮ್' ಬ್ಯಾಂಕ್‌ನ್ನು ಪ್ರಾರಂಭಿಸಿದ್ದಾರೆ.
 
ಯಾರು ಬೇಕಾದರೂ ಕೂಡ ಈ ಬ್ಯಾಂಕಿನಲ್ಲಿ ಕಾಗದದಲ್ಲಿ ಬರೆದ ರಾಮ್ ನಾಮ್‌ವನ್ನು ಠೇವಣಿ ಮಾಡಬಹುದು," ಎಂದು ವಿಬಿಎಸ್ ಸಂಸ್ಥಾಪಕ ರಾಜೀವ್ ಶ್ರೀವಾಸ್ತವ ತಿಳಿಸಿದ್ದಾರೆ. 
 
ರಾಮ ನಮ್ಮ ಪೂರ್ವಜ ಮತ್ತು, ಇಡೀ ವಿಶ್ವಕ್ಕೆ ಆದರ್ಶ. ನಾವು ಆತನ ಮಕ್ಕಳು ಎಂಬುದು ನಮಗೆ ಅಭಿಮಾನದ ಸಂಗತಿ.  ರಾಮನಾಮವೇ ದ್ವೇಷವನ್ನು ಅಳಿಸಿ ಹಾಕಬಲ್ಲದು ಎಂದು ಹನುಮಾನ್ ಚಾಲೀಸಾವನ್ನು ಸಹ ಹಿಂದಿಯಲ್ಲಿ ಅನುವಾದ ಮಾಡಿರುವ ನಜ್ನೀನ್ ಭಕ್ತಿಯಿಂದ ಹೇಳುತ್ತಾರೆ. 

Share this Story:

Follow Webdunia kannada