Select Your Language

Notifications

webdunia
webdunia
webdunia
webdunia

ಬಾಬ್ರಿ ಮಸೀದಿ ಜಾಗದಲ್ಲೇ ರಾಮ ಮಂದಿರ ನಿರ್ಮಾಣವಾಗಲಿ: ಯುಪಿ ರಾಜ್ಯಪಾಲ

ಬಾಬ್ರಿ ಮಸೀದಿ ಜಾಗದಲ್ಲೇ ರಾಮ ಮಂದಿರ ನಿರ್ಮಾಣವಾಗಲಿ: ಯುಪಿ ರಾಜ್ಯಪಾಲ
ಲಖನೌ , ಮಂಗಳವಾರ, 31 ಮಾರ್ಚ್ 2015 (15:28 IST)
ದೇಶದ ಜನರು ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಇರುವ ಸ್ಥಳದಲ್ಲೇ ರಾಮಮಂದಿರ ನಿರ್ಮಾಣವಾಗಬೇಕೆಂದು ಬಯಸುತ್ತಿದ್ದಾರೆ.  ಆ ಬಯಕೆ ಆದಷ್ಟು ಬೇಗ ಈಡೇರಬೇಕು ಎಂದು ಉತ್ತರ ಪ್ರದೇಶದ ರಾಜ್ಯಪಾಲ ರಾಮ್ ನಾಯಕ್ ಆಗ್ರಹಿಸಿದ್ದಾರೆ. 

ಅಯೋಧ್ಯೆಯಲ್ಲಿ ಅವಧ್ ವಿಶ್ವವಿದ್ಯಾಲಯದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಅವರು ಆದಷ್ಟು  ಬೇಗ ರಾಮಮಂದಿರ ನಿರ್ಮಾಣವಾಗಬೇಕು ಎಂಬುದು ಭಾರತೀಯರ ಮಹದಾಸೆಯಾಗಿದ್ದು ಅದನ್ನು ಪೂರೈಸಲೇಬೇಕು ಎಂದು ಒತ್ತಾಯಿಸಿದ್ದಾರೆ. 
 
ಮುಂದಿನ ಐದು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಮ ಜನ್ಮ ಭೂಮಿ-ರಾಮ ಮಂದಿರ ಗೋಜಲಿಗೆ ಕೊನೆ ಹಾಡುತ್ತಾರೆ ಎಂದು ಕಳೆದ ತಿಂಗಳು ನಾಯಕ್ ಹೇಳಿದ್ದರು. 
 
ಬಾಬ್ರಿಮಸೀದಿ ವ್ಯಾಜ್ಯದ ಕಕ್ಷಿಗಾರ ಮೊಹಮ್ಮದ್ ಹಶೀಂ ಅನ್ಸಾರಿ, ಮತ್ತೆ ಈ ಪ್ರಕರಣವನ್ನು ಮುಂದುವರೆಸಲು ಬಯಸುವುದಿಲ್ಲ. ಬಾಲ ರಾಮ ಮುಕ್ತನಾಗುವುದನ್ನು ನೋಡಲು ಬಯಸುತ್ತೇನೆ ಎಂದು ಹೇಳಿದ ಕೆಲ ದಿನಗಳಲ್ಲಿಯೇ ನಾಯಕ್ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ. 
 
ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಅನ್ಸಾರಿ, ರಾಜಕೀಯ ಲಾಭಕ್ಕೋಸ್ಕರ ಹೆಣಗುವ ಜನರು ದೊಡ್ಡ ದೊಡ್ಡ ಬಂಗಲೆಗಳಲ್ಲಿ  ವಾಸಿಸುತ್ತಿದ್ದಾರೆ. ಆದರೆ ರಾಮಲೀಲಾ ಮಾತ್ರ ಟೆಂಟ್‌ಲ್ಲಿದ್ದಾನೆ ಎಂದು ಖೇದ ವ್ಯಕ್ತ ಪಡಿಸಿದ್ದರು. ಉತ್ತರ ಪ್ರದೇಶದ ಸಚಿವ ಆಜಂ ಖಾನ್ ರಾಮ ಜನ್ಮಭೂಮಿ ವಿವಾದ ಸತ್ತ ವಿಷಯ ಸತ್ತ ಸಮಸ್ಯೆ ಎಂದಿದ್ದಕ್ಕೆ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದ ಅವರು, ಬಾಬ್ರಿ ವಿಷಯದಲ್ಲಿ ಖಾನ್ ರಾಜಕೀಯ ಆಟವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. 
 
ರಾಮ ಜನ್ಮಭೂಮಿ ವಿಷಯಕ್ಕೆ ಸಂಬಂಧಿಸಿದಂತೆ ಅನ್ಸಾರಿ ಮೋದಿಯವರನ್ನು ಸಹ ಭೇಟಿಯಾಗ ಬಯಸಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. 

Share this Story:

Follow Webdunia kannada