Select Your Language

Notifications

webdunia
webdunia
webdunia
webdunia

ವಿಧವೆಯರಿಂದ ಪ್ರಧಾನಿ ಮೋದಿಗೆ ವಿಶೇಷ ರಾಖಿ

ವಿಧವೆಯರಿಂದ ಪ್ರಧಾನಿ ಮೋದಿಗೆ ವಿಶೇಷ ರಾಖಿ
ಲಖನೌ , ಶುಕ್ರವಾರ, 28 ಆಗಸ್ಟ್ 2015 (13:44 IST)
ಆಗಸ್ಟ್ 29, ಶನಿವಾರ ದೇಶದಾದ್ಯಂತ ಭಾತೃತ್ವದ ಬಂಧನವನ್ನು ಸಾರುವ ರಕ್ಷಾಬಂಧನವನ್ನು ಆಚರಿಸಲಾಗುತ್ತಿದ್ದು, ಕಳೆದ ವರ್ಷದಂತೆ ಈ ಬಾರಿಯು ಕೂಡ ವೃಂದಾವನ ಮತ್ತು ವಾರಣಾಸಿಯ ವೃದ್ಧ ವಿಧವೆಯರು ಪ್ರಧಾನಿ ಮೋದಿಯವರಿಗಾಗಿ 1,000 ವಿಶೇಷ ರಾಖಿಯನ್ನು ಸಿದ್ಧ ಪಡಿಸಿದ್ದಾರೆ. 
 

 
ವೃಂದಾವನದ ಮೀರಾಸಹಭಾಗಿನಿ ಆಶ್ರಮದಲ್ಲಿ ವಾಸಿಸುವ ಮಹಿಳೆಯರು ಮೋದಿಯವರ ಚಿತ್ರವಿರುವ ವಿಶೇಷ ರಾಖಿಯನ್ನು ಸಿದ್ಧಪಡಿಸಿದ್ದು, ರಕ್ಷಾಬಂಧನದ ದಿನ ಮೋದಿಯವರ ನಿವಾಸಕ್ಕೆ ಕಳುಹಿಸಲಿದ್ದಾರೆ.
 
ಹೆಚ್ಚಿನ ವಿಧವೆಯರು 80ರ ವಯಸ್ಸಿನ ಆಸುಪಾಸಿನಲ್ಲಿದ್ದು, ತಾವು ಆಶ್ರಯ ಪಡೆದುಕೊಂಡಿರುವ 5 ಸರ್ಕಾರಿ ಆಶ್ರಮಗಳಲ್ಲಿ ಬಣ್ಣಬಣ್ಣದ ರಾಖಿಯನ್ನು ಸಿದ್ಧಪಡಿಸುವಲ್ಲಿ ವ್ಯಸ್ತರಾಗಿದ್ದು, ಕಳೆದ 15 ದಿನಗಳಿಂದ ಅವರೆಲ್ಲ ಈ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. 
 
"ನಮ್ಮ ನೆಚ್ಚಿನ ಪ್ರಧಾನಿಗೆ 1,000 ರಾಖಿ ಕಳುಹಿಸುವುದು ನಮ್ಮ ಗುರಿ", ಎಂದು ಕಳೆದ ಬಾರಿ ಉಳಿದ ನಾಲ್ವರೊಂದಿಗೆ ಮೋದಿಯವರ ನಿವಾಸಕ್ಕೆ ತೆರಳಿ ರಾಖಿಯನ್ನು ಕಟ್ಟಿದ್ದ 90ರ ಅಜ್ಜಿ ಹೇಳುತ್ತಾರೆ ಮಂದಹಾಸದೊಂದಿಗೆ.
 
ವಾರಣಾಸಿ ಮತ್ತು ವೃಂದಾವನದಲ್ಲಿ ಸಾವಿರಾರು ಸಂಖ್ಯೆಯ ವಿಧವೆಯರು ಮೋಕ್ಷವನ್ನು ಪಡೆಯುವ ಗುರಿಯೊಂದಿಗೆ ಸರಳ ಜೀವನವನ್ನು ನಡೆಸುತ್ತಾರೆ. 

Share this Story:

Follow Webdunia kannada