Select Your Language

Notifications

webdunia
webdunia
webdunia
webdunia

ನಿರ್ದಯವಾಗಿ ಥಳಿಸಿದ್ದಕ್ಕೆ ಡಿಐಜಿಗೆ 2 ವರ್ಷ ಜೈಲು ಶಿಕ್ಷೆ

ನಿರ್ದಯವಾಗಿ ಥಳಿಸಿದ್ದಕ್ಕೆ ಡಿಐಜಿಗೆ 2 ವರ್ಷ ಜೈಲು ಶಿಕ್ಷೆ
ಜೈಪುರ್ , ಬುಧವಾರ, 10 ಫೆಬ್ರವರಿ 2016 (12:47 IST)
ರಾಜಸ್ಥಾನದಲ್ಲಿ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಆಗಿ ಕಾರ್ಯನಿರ್ವಹಿಸುತ್ತಿರುವ ನಾರಾಯಣ್ ಖಿಂಚಿ ಎನ್ನುವವರಿಗೆ ಎರಡು ವರ್ಷ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. 
 
ಕಳೆದ 16 ವರ್ಷದ ಹಿಂದೆ ತಮ್ಮ ಪೊಲೀಸ್ ಠಾಣೆಯಲ್ಲಿ ಮೂರು ಜನರಿಗೆ ಹಲ್ಲೆ ನಡೆಸಿದ ಅಪರಾಧ ಸಾಬೀತಾಗಿರುವುದರಿಂದ ನ್ಯಾಯಾಲಯ ಈ ತೀರ್ಪು ನೀಡಿದೆ.  ಅವರು ರಾಜ್ಯಮಂಡನಲ್ಲಿ ಹೆಚ್ಚುವರಿ ಪೊಲೀಸ್ ಸೂಪರಿಂಟೆಂಡೆಂಟ್ ಆಗಿದ್ದಾಗ ಈ ಘಟನೆ ನಡೆದಿತ್ತು. 

ತೀರ್ಪಿನ ವಿರುದ್ಧ ಅವರು ಜಿಲ್ಲಾ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿರುವ ನ್ಯಾಯಾಲಯ ತನ್ನ ತೀರ್ಪನ್ನು ಒಂದು ತಿಂಗಳ ಮಟ್ಟಿಗೆ ಅಮಾನತ್ತಿನಲ್ಲಿಟ್ಟಿದೆ. 
 
ವರದಿಗಳ ಪ್ರಕಾರ 2000ನೇ ಇಸವಿಯಲ್ಲಿ ರಾಜ್ಯಮಂಡ್‌ನಲ್ಲಿ ನಡೆದ ನೃತ್ಯ ಕಾರ್ಯಕ್ರಮವೊಂದರಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದ ಆರೋಪದ ಮೇಲೆ  ರಮೇಶ್ ಚಂದ್ರ ತಂಕ್, ರಮೇಶ್ ಚಂದ್ರ ಚಲ್ಪೋಟ್, ಭಗವತಿ ಲಾಲ್ ಎಂಬುವವರು ಬಂಧನಕ್ಕೊಳಪಟ್ಟಿದ್ದರು. ಅವರನ್ನು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆ ತಂದಾಗ ನಾರಾಯಣ್ ಖಿಂಚಿ ನಿರ್ದಯವಾಗಿ ಥಳಿಸಿದ್ದರು. 
 
ಜಾಮೀನಿನ ಮೇಲೆ ಹೊರ ಬಂದ ಬಳಿಕ ಮೂವರು ಆರೋಪಿಗಳು ನಾರಾಯಣ ಖಿಂಚಿಯವರ ವಿರುದ್ಧ ದೂರು ದಾಖಲಿಸಿದ್ದರು.
 

Share this Story:

Follow Webdunia kannada