Select Your Language

Notifications

webdunia
webdunia
webdunia
webdunia

ಹೋಮ್ ವರ್ಕ್ ಮಾಡದ್ದಕ್ಕೆ ಶಿಕ್ಷೆ ನೀಡಿದ ಶಿಕ್ಷಕ: ಸಾವಿಗೆ ಶರಣಾದ ವಿದ್ಯಾರ್ಥಿ

ಹೋಮ್ ವರ್ಕ್ ಮಾಡದ್ದಕ್ಕೆ ಶಿಕ್ಷೆ ನೀಡಿದ ಶಿಕ್ಷಕ: ಸಾವಿಗೆ ಶರಣಾದ ವಿದ್ಯಾರ್ಥಿ
ಜೈಪುರ್ , ಮಂಗಳವಾರ, 25 ನವೆಂಬರ್ 2014 (17:42 IST)
ಹೋಮ್‌ವರ್ಕ್ ಮಾಡದ ಕಾರಣಕ್ಕೆಅಧ್ಯಾಪಕ ನೀಡಿದ ಏಟು, ಅಪಮಾನ, ಶೋಷಣೆಯಿಂದ ನೊಂದ ಬಾಲನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ರಾಜಸ್ಥಾನದಲ್ಲಿ ನಡೆದಿದೆ. 

10ನೇ ತರಗತಿ ವಿದ್ಯಾರ್ಥಿ ದಿಲ್ಕುಶ್ ಸಹಾರಿಯಾ ಎಂಬಾತನೇ ಮೃತ ವಿದ್ಯಾರ್ಥಿಯಾಗಿದ್ದು,  ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತನಿಗೆ ಹಿಂಸೆ ನೀಡಿದ ಶಿಕ್ಷಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 
 
ಆತ್ಮಹತ್ಯೆಗೂ ಮುನ್ನ ಬಾಲಕ ಸಹಾರಿಯಾ, ಡೆತ್ ನೋಟ್ ಬರೆದಿಟ್ಟಿದ್ದಾನೆ. ಶಿಕ್ಷಕ ನೀಡಿದ ಕಿರುಕುಳ, ಥಳಿತ ನನಗೆ ಈ ಗಂಭೀರ ನಿರ್ಧಾರ ತಾಳಲು ಕಾರಣವಾಯಿತು ಎಂದು ಆತ ಉಲ್ಲೇಖಿಸಿದ್ದಾನೆ.
 
ಒಮ್ಮೆ ನಾನು ಹೋಮ್ ವರ್ಕ್ ಮಾಡಿರಲಿಲ್ಲ, ಅದಕ್ಕೆ ಸಿಟ್ಟಿಗೆದ್ದ ಟೀಚರ್ ನೀನ್ಯಾಕೆ ಸಾಯಬಾರದು, ಆ ಮೂಲಕ ನನ್ನ ತಲೆಯ ಮೇಲಿನ ಹೊರೆಯಾದರೂ ಕಡಿಮೆಯಾಗುತ್ತದೆ ಎಂದು ಹೇಳಿದ್ದರು. ನಾನು ಹೋಮ್ ವರ್ಕ್ ಮಾಡಿಕೊಂಡು ಹೋಗದೇ ಇದ್ದಾಗಲೆಲ್ಲ ನಮ್ಮ ಅಧ್ಯಾಪಕರಾದ ಮುಕುತ್ ಜೀ ಥಳಿಸುತ್ತಿದ್ದರು ಮತ್ತು ಎಲ್ಲರ ಮುಂದೆ ಅಪಮಾನ ಮಾಡುತ್ತಿದ್ದರು. ಪೊಲೀಸ್ ಅಂಕಲ್ ದಯವಿಟ್ಟು ಅವರನ್ನು ಶಿಕ್ಷಿಸಿ. ಅವರನ್ನು ಕ್ಷಮಿಸದಿರಿ. ನಾನು ನಿಮ್ಮ ಬಳಿ ಬಯಸುತ್ತಿರುವುದು ಇದಷ್ಟೇ  ಎಂದು ಸಹಾರಿಯಾ ಬರೆದಿದ್ದಾನೆ.
 
ಆರೋಪಿ ಶಿಕ್ಷಕ ಮುಕುತ್ ಬಿಹಾರಿ ಸೇನ್ ಅವರನ್ನು ನಾವು ಬಂಧಿಸಿದ್ದೇವೆ ಮತ್ತು ಆತನ ಮೇಲೆ  ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 
ಒಂದು ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ ಇಂತಹ ಎರಡು ಪ್ರಕರಣಗಳು ವರದಿಯಾಗಿವೆ. ಈ ತಿಂಗಳ ಆರಂಭದಲ್ಲಿ 12 ವರ್ಷದ ಬಾಲಕನೊಬ್ಬ ಹೋಮ್ ವರ್ಕ್ ಮಾಡದಿದ್ದುದಕ್ಕೆ ಶಿಕ್ಷಕರು ಥಳಿಸಿದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದ. 
 
ಈ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಸ್ವಯಂಸೇವಾ ಸಂಸ್ಥೆಗಳು ಶಾಲೆಗಳಲ್ಲಿ ದೈಹಿಕ ಶಿಕ್ಷೆ  ನೀಡುವುದರ ವಿರುದ್ಧ ದನಿ ಎತ್ತಿವೆ.

Share this Story:

Follow Webdunia kannada