Webdunia - Bharat's app for daily news and videos

Install App

ಬಿಎಂಸಿ ಚುನಾವಣೆ: ಉದ್ಭವ್ ಠಾಕ್ರೆಯನ್ನು ಭೇಟಿಯಾದ ರಾಜ್‌ ಠಾಕ್ರೆ

Webdunia
ಶುಕ್ರವಾರ, 29 ಜುಲೈ 2016 (15:13 IST)
ಮುಂದಿನ ವರ್ಷದ ಆರಂಭದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಎದುರಾಗಲಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ, ಸಹೋದರ, ಶಿವಸೇನೆ ಮುಖ್ಯಸ್ಥ ಉದ್ಭವ್ ಠಾಕ್ರೆಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
 
ದಾದರ್‌ನಲ್ಲಿ ವಾಸಿಸುವ ರಾಜ್ ಠಾಕ್ರೆ, ಇಂದು ಸಬ್‌ಅರ್ಬನ್ ಬಾಂದ್ರಾದಲ್ಲಿರುವ ಉದ್ಭವ್ ಠಾಕ್ರೆ ನಿವಾಸವಾದ ಮಾತೋಶ್ರೀಗೆ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ. ಚರ್ಚೆಯ ಸಂದರ್ಭದಲ್ಲಿ ಬೇರೆ ಯಾರೂ ಉಪಸ್ಥಿತರಿರಲಿಲ್ಲ ಎಂದು ಮೂಲಗಳು ತಿಳಿಸಿವೆ. 
 
ಉಭಯ ಸಹೋದರರಿಗೆ ಬಿಎಂಸಿ ಚುನಾವಣೆಗಳು ಮಹತ್ವದ್ದಾಗಿದ್ದರಿಂದ ಭೇಟಿಯ ಬಗ್ಗೆ ರಾಜಕೀಯ ವಲಯದಲ್ಲಿ ಕೋಲಾಹಲವೆಬ್ಬಿಸಿವೆ.
 
ಬಿಎಂಸಿ ಕಾರ್ಪೋರೇಶನ್‌ನಲ್ಲಿ ಬಿಜೆಪಿಯೊಂದಿಗೆ ಮೈತ್ರಿಕೂಟ ಹೊಂದಿರುವ ಶಿವಸೇನೆ, ಮುಂಬರುವ ಚುನಾವಣೆಯಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
 
ಕಳೆದ 2004ರಿಂದ ಶಿವಸೇನೆ ಹೊಣೆಯನ್ನು ಹೊತ್ತಿರುವ ಉದ್ಭವ್ ಠಾಕ್ರೆ, ಸಹೋದರ ರಾಜ್ ಠಾಕ್ರೆಯೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಾರೋ ಎನ್ನುವ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ಆರಂಭವಾಗಿದೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಈಗೀನ ಮಕ್ಕಳಿಗೆ ಬುದ್ದಿ ಹೇಳುವುದು ಕಷ್ಟ, ಮೊಬೈಲ್ ಗೀಳು ಬಿಡು ಎಂದಿದ್ದಕ್ಕೆ ಯುವತಿ ಹೀಗೇ ಮಾಡೋದಾ

ಪಾಕ್‌ಗೆ ನುಗ್ಗಿ ಹೊಡೆಯಿರಿ: ಅಮಿತ್ ಶಾ ಬಳಿ ಇದನ್ನೇ ಹೇಳಿದ್ದೇನೆ ಎಂದ ಸಚಿವ ಸಂತೋಷ್‌ ಲಾಡ್‌

ಇಂದಿರಾಗೆ ಕಪ್ಪು ಬಾವುಟ ಪ್ರದರ್ಶಿಸಿದ್ದ ಸಿದ್ದರಾಮಯ್ಯರನ್ನು ಉಚ್ಛಾಟಿಸುವ ಧಮ್‌ ಇದ್ಯಾ: ಡಿಕೆಶಿಗೆ ಅಶೋಕ್‌ ಸವಾಲು

ಗಡಿಯಲ್ಲಿ ಮತ್ತೆ ಪಾಕ್‌ ಕಿರಿಕ್‌: ಅಪ್ರಚೋದಿತ ಗುಂಡಿನ ದಾಳಿಗೆ ತಕ್ಕ ಉತ್ತರ ನೀಡಿದ ಭಾರತೀಯ ಸೇನೆ

ಕೋಲ್ಕತ್ತಾದಲ್ಲಿ ಹೊತ್ತಿ ಉರಿದ ಹೋಟೆಲ್‌ ಕಟ್ಟಡ: 15 ಮಂದಿ ಸಜೀವ ದಹನ, ಹಲವರಿಗೆ ಗಾಯ

ಮುಂದಿನ ಸುದ್ದಿ
Show comments