Select Your Language

Notifications

webdunia
webdunia
webdunia
webdunia

ಮೋದಿಯ 10 ಲಕ್ಷ ರೂಪಾಯಿ ಸೂಟ್: ರಾಹುಲ್ ಟೀಕೆ

ಮೋದಿಯ 10 ಲಕ್ಷ ರೂಪಾಯಿ ಸೂಟ್: ರಾಹುಲ್ ಟೀಕೆ
ನವದೆಹಲಿ , ಶುಕ್ರವಾರ, 30 ಜನವರಿ 2015 (12:10 IST)
ದೆಹಲಿ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿರುವ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವರು ಒಬಾಮಾ ಭೇಟಿಯ ಸಂದರ್ಭದಲ್ಲಿ ಧರಿಸಿದ್ದ ದುಬಾರಿ ಬೆಲೆಯ ಸೂಟ್‌ಗೆ ಸಂಬಂಧಿಸಿದಂತೆ ತೀವೃ ವಾಗ್ದಾಳಿ ನಡೆಸಿದ್ದಾರೆ. 
ಈಶಾನ್ಯ ದೆಹಲಿಯ ಶಾಸ್ತ್ರಿ ಪಾರ್ಕ್‌ನಲ್ಲಿ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ರಾಹುಲ್ ,"ಕಪ್ಪು ಹಣ ಮರಳಿ ತಂದು ಪ್ರತಿಯೊಬ್ಬರ ನಾಗರಿಕರ ಖಾತೆಗೆ 15 ಲಕ್ಷ ಜಮಾ ಮಾಡುವುದಾಗಿ ಮೋದಿ ಭರವಸೆ ಕೊಟ್ಟಿದ್ದರು. ನಿಮಗೆ ಹಣ ದೊರೆತಿದಿಯೇ?’ . ಇಲ್ಲ ನಿಮಗೆ ದೊರೆತಿಲ್ಲ. ಆದರೆ ಮೋದಿಯವರು 10 ಲಕ್ಷ ರೂಪಾಯಿಯ ಸೂಟ್ ಧರಿಸುತ್ತಿದ್ದಾರೆ", ಎಂದು ಆರೋಪಿಸಿದ್ದಾರೆ. 
 
ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಅವರ ಜತೆ ನಡೆಸಿದ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಹತ್ತು ಲಕ್ಷ ರೂಪಾಯಿ ಮೌಲ್ಯದ ಸೂಟ್‌ ಧರಿಸಿದ್ದರು ಹೇಳಲಾಗುತ್ತಿದೆ. ಅದನ್ನು ಲಂಡನ್‌ನ ಪ್ರಸಿದ್ಧ ಟೈಲರ್ ಬಳಿ ಹೊಲಿಸಲಾಗಿತ್ತು.
 
ಮೋದಿಯವರ ಸ್ವಚ್ಛಭಾರತ ಅಭಿಯಾನದ ವಿರುದ್ಧ ಸಹ ವಾಗ್ದಾಳಿ ನಡೆಸಿದ ರಾಹುಲ್, "ಯುವಕರು ಉದ್ಯೋಗ ನೀಡಿ ಎಂದು ಕೇಳಿದಾಗ ಮೋದಿಯವರು ಕಸಗುಡಿಸಿ ಎಂದು ಪೊರಕೆ ಹಿಡಿಸಿದರು", ಎಂದು ವ್ಯಂಗ್ಯವಾಡಿದ್ದಾರೆ. 

Share this Story:

Follow Webdunia kannada