ನಾನಿನ್ನು ಬೇಗ ಮದುವೆಯಾಗ್ಬೇಕು: ರಾಯ್ ಬರೇಲಿಯಲ್ಲಿ ನಾಚಿಕೊಂಡು ವೇದಿಕೆಯಿಂದ ಹೋದ ರಾಹುಲ್ ಗಾಂಧಿ

Krishnaveni K
ಸೋಮವಾರ, 13 ಮೇ 2024 (15:13 IST)
ರಾಯ್ ಬರೇಲಿ: ಮೊದಲೆಲ್ಲಾ ರಾಹುಲ್ ಗಾಂಧಿ ಎಲ್ಲೇ ಹೋದರೂ ಮದುವೆ ಯಾವಾಗ ಎಂದು ಜನ ಪ್ರಶ್ನೆ ಕೇಳುತ್ತಲೇ ಇದ್ದರು. ಅದು ಇತ್ತೀಚೆಗೆ ಕಡಿಮೆಯಾದರೂ ಪೂರ್ತಿ ನಿಂತಿಲ್ಲ. ರಾಯ್ ಬರೇಲಿಯಲ್ಲಿ ಸಮಾವೇಶ ವೇಳೆ ರಾಹುಲ್ ಗೆ ಮದುವೆ ಬಗ್ಗೆ ಪ್ರಶ್ನೆ ಎದುರಾಗಿದೆ.

ರಾಯ್ ಬರೇಲಿಯಿಂದ ರಾಹುಲ್ ಗಾಂಧಿ ಮತ್ತೊಮ್ಮೆ ಸ್ಪರ್ಧೆ ನಡೆಸುತ್ತಿದ್ದಾರೆ. ಇಲ್ಲಿ ಪ್ರಚಾರ ಸಮಾವೇಶದಲ್ಲಿ ಭಾಗಿಯಾಗಿದ್ದಾಗ ಜನರು ರಾಹುಲ್ ಗಾಂಧಿ ಮದುವೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಜನರ ಒತ್ತಾಯಕ್ಕೆ ಮಣಿದ ರಾಹುಲ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ‘ಇನ್ನು ನಾನು ಬೇಗನೇ ಮದುವೆ ಮಾಡಿಕೊಳ್ಳಬೇಕಾಗುತ್ತದೆ’ ಎಂದಿದ್ದಾರೆ.

 
ಹೀಗೆ ಹೇಳಿ ನಾಚಿಕೊಂಡು ಅವರು ಮಾತು ಮುಗಿಸಿ ವೇದಿಕೆಯಿಂದ ನಡೆದಿದ್ದಾರೆ. ಈ  ವೇಳೆ ವೇದಿಕೆಯಲ್ಲಿದ್ದ ಸಹೋದರಿ ಪ್ರಿಯಾಂಕ ವಾದ್ರಾ ಕೂಡಾ ಜೋರಾಗಿ ನಕ್ಕರು. ಇದಕ್ಕೆ ಮೊದಲು ವೇದಿಕೆಯಲ್ಲಿ ಮಾತನಾಡಿದ ಅವರು ರಾಯ್ ಬರೇಲಿಯಲ್ಲಿ ಸ್ಪರ್ಧಿಸಲು ತೀರ್ಮಾನಿಸಿದ್ದೇಕೆ ಎಂಬ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.

‘ಒಮ್ಮೆ ನಾನು ನನ್ನ ತಾಯಿ ಜೊತೆ ಕುಳಿತು ಮಾತನಾಡುವಾಗ ನನಗೆ ಇಬ್ಬರು ಅಮ್ಮಂದಿರಿದ್ದಾರೆ ಎಂದೆ. ಅದು ನನ್ನ ತಾಯಿ ಸೋನಿಯಾಜಿ ಮತ್ತು ಅಜ್ಜಿ ಇಂದಿರಾ ಜಿ. ಇಬ್ಬರೂ ನನಗೆ ಸರಿಯಾದ ಮಾರ್ಗದರ್ಶನ ನೀಡಿದವರು. ರಾಯ್ ಬರೇಲಿ ಮತ್ತು ನಮ್ಮ ಕುಟುಂಬಕ್ಕೆ 100 ವರ್ಷಗಳ ಸಂಬಂಧವಿದೆ. ಈ ನೆಲ ನನ್ನ ಇಬ್ಬರೂ ಅಮ್ಮಂದಿರಿಗೆ ಕರ್ಮಭೂಮಿ. ಹೀಗಾಗಿ ನಾನು ಇಲ್ಲಿಂದ ಸ್ಪರ್ಧಿಸಲು ನಿರ್ಧರಿಸಿದೆ’ ಎಂದು ರಾಹುಲ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹಿಂದೂಗಳನ್ನು ಟಾರ್ಗೆಟ್ ಮಾಡಲಾಗಿದೆ: ಡಿಸಿಎಂ ಪವನ್ ಕಲ್ಯಾಣ್

ರಾಜ್ಯದಲ್ಲಿರುವ ಡ್ರಗ್ಸ್‌ ದಂಧೆ ವಿರುದ್ಧ ಕಠಿಣ ಕ್ರಮ, ಪೆಡ್ಲರ್‌ಗಳಿಗೆ ನಡುಕ

ಮತ್ತಷ್ಟು ಹಣ ಕೊಡದಿದ್ದರೆ ಬೆತ್ತಲೆ ಫೋಟೋ ವೈರಲ್ ಬೆದರಿಕೆ, ಯುವಕ ಆತ್ಮಹತ್ಯೆ

ಮೋದಿ ಬಳಿಕ ಬಿಜೆಪಿಯಿಂದ ಪ್ರಧಾನಿ ಅಭ್ಯರ್ಥಿ ಯಾರು: ಕೊನೆಗೂ ತಿಳಿಸಿದ ಮೋಹನ್ ಭಾಗವತ್

ಸಿದ್ದರಾಮಯ್ಯ ಇರುವಷ್ಟು ದಿನ ಉತ್ತಮ ಹೆಜ್ಜೆ ಇಡಲಿ: ವಿಜಯೇಂದ್ರ

ಮುಂದಿನ ಸುದ್ದಿ
Show comments