ರಾಹುಲ್‌ ಗಾಂಧಿಯ ಜನ್ಮದಿನ: ಭಾವನಾತ್ಮಕ ಸಂದೇಶ ಹಂಚಿದ ಸಹೋದರಿ ಪ್ರಿಯಾಂಕಾ

Sampriya
ಬುಧವಾರ, 19 ಜೂನ್ 2024 (14:03 IST)
Photo Courtesy X
ನವದೆಹಲಿ: ಕಾಂಗ್ರೆಸ್‌ನ ನಾಯಕ, ಸಂಸದ ರಾಹುಲ್ ಗಾಂಧಿ ಅವರು ಇಂದು 54ನೇ ಜನ್ಮದಿನ ಸಂಭ್ರಮದಲ್ಲಿದ್ದು, ಅವರಿಗೆ ಪ್ರಿಯಾಂಕಾ ಗಾಂಧಿ ಸೇರಿದಂತೆ ರಾಜಕೀಯ ಸೇರಿದಂತೆ ಗಣ್ಯರು ಹಾಗೂ ಅಭಿಮಾನಿಗಳು ಶುಭಾಶಯಗಳನ್ನು ಕೋರಿದ್ದಾರೆ.

ವಿಶೇಷವಾಗಿ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದಾರೆ. ರಾಹುಲ್ ಗಾಂಧಿ ಅವರನ್ನು ನನ್ನ ಗೆಳೆಯ, ವಾದಪ್ರಿಯ ಮಾರ್ಗದರ್ಶಕ, ತತ್ವಜ್ಞಾನಿ ಮತ್ತು ನಾಯಕ ಎಂದು ಸಂಬೋಧಿಸಿದ್ದಾರೆ.

ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಶುಭಾಶಯ ಕೋರಿದ್ದಾರೆ. ಬಡವರಿಗೆ ಬಂಧು, ರಾಜಕಾರಣಿಗಳಿಗೆ ಆದರ್ಶ ನಾಯಕ, ಯುವಜನರಿಗೆ ಸ್ಫೂರ್ತಿಯಾಗಿರುವ ದೇಶದ ಆಶಾಕಿರಣ ಮತ್ತು ಕಾಂಗ್ರೆಸ್ ಪಕ್ಷದ ಹೆಮ್ಮೆಯ ನಾಯಕ ರಾಹುಲ್ ಗಾಂಧಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ಸೈದ್ಧಾಂತಿಕ ಬದ್ದತೆ, ಜನಪರ ಕಾಳಜಿ ಮತ್ತು ಕಠಿಣಶ್ರಮದ ಮೌಲ್ಯಗಳನ್ನು ಅಳವಡಿಸಿಕೊಂಡು ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ನಾಯಕ ಮತ್ತು ಕಾರ್ಯಕರ್ತ ದುಡಿದರೆ ಕಾಂಗ್ರೆಸ್ ಪಕ್ಷ ಮತ್ತೆ ಗತವೈಭವದ ದಿನಗಳಿಗೆ ಮರಳುವುದರಲ್ಲಿ ಯಾವುದೇ ಸಂಶಯ ಇಲ್ಲ. ನಿಮಗೆ ಭಗವಂತ ಆಯುಷ್ಯ-ಆರೋಗ್ಯವನ್ನು ದಯಪಾಲಿಸಲಿ' ಎಂದು ಹೇಳಿದ್ದಾರೆ.

ದೇಶಕ್ಕೆ ಸೇವೆ ಸಲ್ಲಿಸುವ ನಿಮ್ಮ ಬದ್ಧತೆ ಮತ್ತು ಉತ್ಸಾಹ ಎಲ್ಲರಿಗೂ ಪ್ರೇರಣೆಯಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬರೆದುಕೊಂಡಿದ್ದಾರೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸ್ವೀಟ್ ಖರೀದಿಸಿದ ರಾಹುಲ್ ಗಾಂಧಿಗೆ ಶಾಕಿಂಗ್ ಬೇಡಿಕೆಯಿಟ್ಟ ಅಂಗಡಿ ಮಾಲೀಕ

ನಕ್ಸಲಿಸಂ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ದಿಟ್ಟ ಉತ್ತರ

ಪತ್ನಿ ಕೃತಿಕಾ ರೆಡ್ಡಿ ಹತ್ಯೆ ಬಗ್ಗೆ ಕೊನೆಗೂ ಸ್ಪೋಟಕ ಸತ್ಯ ಬಾಯ್ಬಿಟ್ಟ ಡಾ ಮಹೇಂದ್ರ ರೆಡ್ಡಿ

ಓಲಾ ಕಂಪೆನಿ ಎಂಜಿನಿಯರ್ ಅನುಮಾನಸ್ಪದ ಸಾವು, 28ಪುಟಗಳ ಡೆತ್‌ನೋಟ್‌ನಲ್ಲಿತ್ತು ಶಾಕಿಂಗ್ ಸಂಗತಿ

ಪ್ರತಿ ವರ್ಷದಂತೆ ಈ ಬಾರಿಯೂ ದೀಪಾವಳಿಗೆ ಈ ಕೆಲಸ ಮಾಡಲು ಮರೆಯದ ನರೇಂದ್ರ ಮೋದಿ

ಮುಂದಿನ ಸುದ್ದಿ
Show comments