Webdunia - Bharat's app for daily news and videos

Install App

10 ಜನ ಮುಸ್ಲಿಮರನ್ನು ರಕ್ಷಿಸಿದ ವಿಧವೆಯನ್ನು ಪ್ರಶಂಸಿಸಿದ ರಾಹುಲ್

Webdunia
ಮಂಗಳವಾರ, 27 ಜನವರಿ 2015 (16:00 IST)
ಮುಜಫ್ಫರ್‌ಪುರದಲ್ಲಿ ಕಳೆದ ಕೆಲ ದಿನಗಳ ಹಿಂದೆ ನಡೆದ ಗಲಭೆಯಲ್ಲಿ 10 ಜನ ಮುಸ್ಲಿಮರ ಪ್ರಾಣ ಕಾಪಾಡಿದ  ಶೈಲ್ ದೇವಿಯವರಿಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅಭಿನಂದನಾ ಸಂದೇಶವನ್ನು ಕಳುಹಿಸಿದ್ದಾರೆ. 
 
ದಂಗೆಯ ಸಮಯದಲ್ಲಿ ದೃಢವಾಗಿ ನಿಂತ ನೀವು, ಭರವಸೆಯ ಕಿರಣವಾಗಿ ಹೊರಹೊಮ್ಮಿದ್ದೀರಿ".  ಎಂದು ರಾಹುಲ್ ಜನವರಿ 23 ರಂದು ಶೈಲ್ ದೇವಿಯವರಿಗೆ ಕಳುಹಿಸಿದ ಪತ್ರದಲ್ಲಿ ಬರೆದಿದ್ದಾರೆ. 
 
20 ವರ್ಷದ ಹಿಂದೂ ಯುವಕನನ್ನು ಆತ ಪ್ರೀತಿಸಿದ ಮುಸ್ಲಿಮ್ ಯುವತಿಯ ಮನೆಯವರು ಕೊಂದಿದ್ದಾರೆ ಎಂದು ಆರೋಪಿಸಿ ಮುಜಪ್ಫರ್‌ಪುರದಲ್ಲಿ ದಂಗೆ ಉಂಟಾಗಿತ್ತು. ಆ ಸಮಯದಲ್ಲಿ 5,000 ಜನರು ಅಜಿಜ್ಪುರ ಬಹಿಲ್ವಾರಾ ಗ್ರಾಮದ ಮುಸ್ಲಿಮರ ಮೇಲೆ ದಾಳಿ ಮಾಡಲು ಪ್ರಾರಂಭಿಸಿದರು. ತಮ್ಮ ನೆರೆಹೊರೆಯವರ ಪ್ರಾಣ ಅಪಾಯದಲ್ಲಿರುವುದನ್ನು ಗಮನಿಸಿದ  ಶೈಲ್ ದೇವಿ ಅವರನ್ನು ತಮ್ಮ ಮನೆಯಲ್ಲಿ ಅಡಗಿಸಿಟ್ಟು ಕಾಪಾಡಿದ್ದರು. 
 
ಬಿಹಾರ್ ಮುಖ್ಯಮಂತ್ರಿ ಜಿತನ್‌ರಾಮ್ ಮ್ಹಾಂಜಿ ಕೂಡ  ಶೈಲ್ ದೇವಿಗೆ 50,000 ನಗದು ಬಹುಮಾನವನ್ನು ನೀಡಿ ಸನ್ಮಾನಿಸಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments