Select Your Language

Notifications

webdunia
webdunia
webdunia
webdunia

ಮಂದಿರಕ್ಕೆ ಹೋಗುವವರಿಂದಲೇ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ: ರಾಹುಲ್ ಗಾಂಧಿ

ಮಂದಿರಕ್ಕೆ ಹೋಗುವವರಿಂದಲೇ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ: ರಾಹುಲ್ ಗಾಂಧಿ
ನವದೆಹಲಿ , ಗುರುವಾರ, 21 ಆಗಸ್ಟ್ 2014 (12:10 IST)
ನಿಯಮಿತವಾಗಿ ದೇವಸ್ಥಾನಕ್ಕೆ ಭೇಟಿ ನೀಡುವವರು, ದೇವಿಯನ್ನು ಪೂಜಿಸುವವವರು ಬಸ್ ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ಶೋಷಣೆಯನ್ನು ನೀಡುತ್ತಾರೆ ಎಂದು ಹೇಳುವುದರ ಮೂಲಕ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೊಸ ವಿವಾದವನ್ನು ತಲೆಗೆಳೆದುಕೊಂಡಿದ್ದಾರೆ. 

ತಮ್ಮ ತಂದೆಯ ಜನ್ಮದಿನದ ಅಂಗವಾಗಿ ದೆಹಲಿಯಲ್ಲಿ  ನಡೆದ ಸಮಾರಂಭವೊಂದರಲ್ಲಿ ಪಕ್ಷದ ಮಹಿಳಾ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆ ಸಂದರ್ಭದಲ್ಲಿ ಅವರ ತಾಯಿ ಸೋನಿಯಾ ಗಾಂಧಿ ಕೂಡ ವೇದಿಕೆಯ ಮೇಲಿದ್ದರು. 
 
"ಭಾರತದಲ್ಲಿ  ಜನರು ದೇವತೆಯನ್ನು ಪೂಜಿಸುತ್ತಾರೆ ಮತ್ತು ಮಹಿಳೆಯರನ್ನು ತಾಯಿ ಮತ್ತು ಸಹೋದರಿಯರೆಂದು ಕರೆಯುತ್ತಾರೆ. ಅದೇ ಜನರು  ಬಸ್ ಇತರ ಸ್ಥಳಗಳಲ್ಲಿ ಆಕೆಯ ಮೇಲೆ ಶೋಷಣೆ ಮಾಡುತ್ತಾರೆ" ಎಂದು ಅವರು ಹೇಳಿದರು. 
 
"ಕೇವಲ ಕಾನೂನುಗಳನ್ನು ಜಾರಿಗೆ ತರುವುದರಿಂದ  ಸಮಾಜ ಬದಲಾಗುವುದಿಲ್ಲ. ಜನರ ವಿಚಾರಧಾರೆಯಲ್ಲಿ ಬದಲಾವಣೆಯಾದಾಗ  ಮಾತ್ರ ಸಮಾಜ ವಿಕಾಶ ಸಾಧಿಸಬಹುದು" ಎಂದು ರಾಹುಲ್ ಅಭಿಪ್ರಾಯ ಪಟ್ಟರು. 
 
ರಾಹುಲ್ ಭಾಷಣ ಬಹುತೇಕವಾಗಿ ಮಹಿಳಾ ಸಬಲೀಕರಣದ  ಮೇಲೆ ಕೇಂದ್ರೀಕೃತವಾಗಿತ್ತು.  ಜನಸಾಮಾನ್ಯರಿಗೆ ಶಕ್ತಿ ನೀಡುವ ವಿಷಯದಲ್ಲಿ ಯುಪಿಎ ಸರ್ಕಾರದ ಕೊಡುಗೆಯನ್ನು ನೆನೆದು ಅವರು  ಮೆಚ್ಚುಗೆ ವ್ಯಕ್ತಪಡಿಸಿದರು.
 
ಮಂದಿರಕ್ಕೆ ಹೋಗುವವರು ನಿರ್ದಿಷ್ಟ ಸಮುದಾಯದ ಜನರಾಗಿರುವುದರಿಂದ, ರಾಹುಲ್ ಗಾಂಧಿ ಅವರ ಈ ಶಬ್ಧ ಪ್ರಯೋಗಕ್ಕೆ  ಖಂಡನೆ ವ್ಯಕ್ತವಾಗುತ್ತಿದೆ. 
 
ತಮ್ಮ ಮಾತುಗಳನ್ನು ಮುಂದುವರೆಸಿದ ಅವರು "ನಾವು ಮಹಿಳೆಯರನ್ನು ಸಬಲರನ್ನಾಗಿಸಬೇಕಿದೆ. ಅವರಲ್ಲಿ ಶಕ್ತಿ ತುಂಬಬೇಕು ಮತ್ತು ಅವರ ನೋವುಗಳನ್ನು ಹಂಚಿಕೊಳ್ಳಬೇಕು. ಪಕ್ಷಕ್ಕೆ ಸುನಾಮಿಯಂಥ ಬಲಿಷ್ಠ ಸದಸ್ಯೆಯರ ಅಗತ್ಯವಿದೆ" ಎಂದಿದ್ದಾರೆ.

Share this Story:

Follow Webdunia kannada