Webdunia - Bharat's app for daily news and videos

Install App

ನೋಟ್ ಬ್ಯಾನ್ ಗದ್ದಲದಲ್ಲೂ ರಾಹುಲ್ ಹಾಲಿಡೆ ಮೂಡ್

Webdunia
ಶನಿವಾರ, 31 ಡಿಸೆಂಬರ್ 2016 (16:21 IST)
ನೋಟ್ ನಿಷೇಧದ ಗದ್ದಲದಲ್ಲಿ ಮುಳುಗಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇಂದು ವಿದೇಶಕ್ಕೆ ಹಾರಿದ್ದಾರೆ. ಈ ಬಗ್ಗೆ ಟ್ವೀಟ್ ಮೂಲಕ ಅವರು ಮಾಹಿತಿ ನೀಡಿದ್ದಾರೆ. 
 
ಟ್ವಿಟರ್‌ನಲ್ಲಿ ದೇಶವಾಸಿಗಳಿಗೆ ಹೊಸ ವರ್ಷದ ಶುಭಾಶಯ ತಿಳಿಸಿರುವ ರಾಹುಲ್, ನವ ವರ್ಷ ನಿಮಗೆ ಸಂತೋಷ ಮತ್ತು ಯಶಸ್ಸನ್ನು ತರಲಿ ಎಂದು ಹಾರೈಸಿದ್ದಾರೆ ಮತ್ತು ತಾವು ಇಂದು ವಿದೇಶಕ್ಕೆ ತೆರಳುತ್ತಿದ್ದು ಜನವರಿ 4ಕ್ಕೆ ವಾಪಸ್ಸಾಗುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ ಯಾವ ದೇಶಕ್ಕೆ ಹೋಗುತ್ತಿದ್ದೇನೆ ಎಂಬುದನ್ನು ಮಾತ್ರ ಅವರು ಬಿಟ್ಟುಕೊಟ್ಟಿಲ್ಲ. ಕೆಲ ಮೂಲಗಳ ಪ್ರಕಾರ ರಾಹುಲ್ ಲಂಡನ್‌ಗೆ ತೆರಳುತ್ತಿದ್ದಾರೆ. 
 
ಕಳೆದ ಬಾರಿ ಸಹ ಹೊಸ ವರ್ಷದ ಸಂದರ್ಭದಲ್ಲಿ ಅವರಿರಲಿಲ್ಲ. ಅವರು ಎಲ್ಲಿಗೆ ಹೋಗಿದ್ದರೆಂಬುದು ಗುಟ್ಟಾಗಿಯೇ ಇತ್ತು. ವಿರೋಧ ಪಕ್ಷದ ನಾಯಕರಂತ ಜವಾಬ್ದಾರಿ ಸ್ಥಾನದಲ್ಲಿರುವವರು 30 ರಿಂದ 40 ದಿನಗಳ ಕಾಲ ಪತ್ತೆ ಇಲ್ಲದಿದ್ದುದು ದೇಶದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. 
 
ಆದರೆ ಈ ಬಾರಿ ಅವರು ಸೀಮಿತ ರಜೆಯ ಮೇಲೆ ಹೊಸ ವರ್ಷಾಚರಣೆಗೆ ವಿದೇಶಕ್ಕೆ ಹಾರುತ್ತಿದ್ದಾರೆ. 
 
ಜನವರಿ 4ಕ್ಕೆ ದೇಶಕ್ಕೆ ವಾಪಸ್ಸಾಗುವ ಅವರು ಮತ್ತೆ ನೋಟ್ ಬ್ಯಾನ್ ಜನಾಂದೋಲನವನ್ನು ಮುನ್ನಡೆಸಲಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments