Webdunia - Bharat's app for daily news and videos

Install App

ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ

Webdunia
ಶನಿವಾರ, 26 ಜುಲೈ 2014 (17:54 IST)
ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಸರಕಾರ ಹೇಳುವುದೊಂದು ಮಾಡುವುದೊಂದುಎಂದು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಲೇವಡಿ ಮಾಡಿದ್ದಾರೆ.
 
ಮೋದಿ ಸರ್ಕಾರ ಯಾವುದೇ ವಿಷಯದ ಕುರಿತು ಸ್ಪಂದಿಸಲಿ. ಆದರೆ, ಬೆಲೆ ಏರಿಕೆ ವಿರುದ್ದದ ಸಮರದಲ್ಲಿ ಸರಕಾರ ವಿಫಲವಾಗಿದೆ ಎಂದು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಮೋದಿ ಸರಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿವೆ.
 
ಅಚ್ಛೆ ದಿನ್ ಆಯೇಗಾ ಎಂದು ನರೇಂದ್ರ ಮೋದಿ ದೇಶದ ಜನತೆಗೆ ಭರವಸೆ ನೀಡಿದ್ದರು, ಆದರೆ, ಬೆಲೆಏರಿಕೆಯ ಕೊಡುಗೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಬೇಳೆ, ಅಕ್ಕಿ , ಹಾಲು-ಹಣ್ಣುಗಳ ಬೆಲೆ ಏರಿಕೆಯಾಗಿವೆ ಇದೀಗ ತರಕಾರಿಗಳ ದರಗಳು ಕೂಡಾ ಗಗನಕ್ಕೇರುತ್ತಿವೆ.. ಟೋಮ್ಯಾಟೋ ದರ ಕೂಡ ದೇಶದ ವಿವಿಧ ನಗರಗಳಲ್ಲಿ 60-70 ರೂಪಾಯಿಗಳಿಂದ 80 ರೂಪಾಯಿವರೆಗೆ ಪ್ರತಿ ಕೇಜಿಗೆ ಮಾರಾಟವಾಗುತ್ತಿದೆ. 
 
ದರ ಏರಿಕೆಯನ್ನು ಅಸ್ತ್ರವಾಗಿಸಿಕೊಂಡ ರಾಹುಲ್‌ ಗಾಂಧಿ, ಮೋದಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. " ಮೋದಿ ಸರ್ಕಾರ ಹೇಳುವುದಕ್ಕು ಮಾಡುವುದಕ್ಕು ವ್ಯತ್ಯಾಸವಿದೆ. ಮೋದಿ ಸರ್ಕಾರ ಬೆಲೆ ಏರಿಕೆ ನಿಯಂತ್ರಿಸುವ ಘೋಷಣೆ ಮಾಡಿತ್ತು. ಆದರೆ ಈ ಘೋಷಣೆಗಳು ಹುಸಿಯಾಗಿವೆ ಎಂದು ಕಿಡಿಕಾರಿದ್ದಾರೆ. 
 
ನರೇಂದ್ರ ಮೋದಿ ವಾಗ್ದಾಳಿಯ ನಂತರ ಮುಂಬೈನಲ್ಲಿ ಉಪವಾಸ ಆಚರಿಸುತ್ತಿದ್ದ ಮುಸ್ಲಿಮರಿಗೆ ಶಿವಸೇನೆ ಸದಸ್ಯರು ರೋಟಿ ತಿನ್ನಿಸಿರುವ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಆರೆಸ್ಸೆಸ್ ಮತ್ತು ಬಿಜೆಪಿಯತ್ತು ಇಂತಹದ್ದೆ ವಿಚಾರಧಾರೆಗಳು ಎಂದು ಅಮೇಥಿ ಪ್ರವಾಸದಲ್ಲಿದ್ದ ರಾಹುಲ್ ಗಾಂಧಿ ಹೇಳಿದ್ದಾರೆ.
 
ಮುಸ್ಲಿಮರಿಗೆ ರೋಟಿ ತಿನ್ನಿಸಿದ ಪ್ರಕರಣದಲ್ಲಿ ಬಿಜೆಪಿ ಭಾಗಿಯಾಗದೇ ಇರಬಹುದು. ಆದರೆ, ಅದರ ಮಿತ್ರಪಕ್ಷವಾದ ಶಿವಸೇನೆಯ ಸದಸ್ಯ ರಾಜನ್ ವಿಚಾರೆ ಐಆರ್‌ಸಿಟಿಸಿಯ ಮುಸ್ಲಿಂ ಮೇಲ್ವಿಚಾರಕನ ವಿರುದ್ಧ ಅಸಭ್ಯ ವರ್ತನೆ ತೋರಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ದೇಶದ ಜನತೆಯ ವಿಶ್ವಾಸಕ್ಕೆ ಮೋದಿ ನೇತೃತ್ವದ ಸರಕಾರ ಧಕ್ಕೆ ತಂದಿದ್ದರಿಂದ ವಿಪಕ್ಷಗಳು ವಾಗ್ದಾಳಿ ನಡೆಸಿವೆ. ಆದರೆ, ಬಿಜೆಪಿ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಒಳ್ಳೆಯ ದಿನಗಳನ್ನು ತರಲಿದೆಯೇ ಎನ್ನುವುದು ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments