Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿಯಿಂದ ನನ್ನ ಭಾಷಣದ ಶೈಲಿ ಕಾಪಿ: ಸೃತಿ ಇರಾನಿ

ರಾಹುಲ್ ಗಾಂಧಿಯಿಂದ ನನ್ನ ಭಾಷಣದ ಶೈಲಿ ಕಾಪಿ: ಸೃತಿ ಇರಾನಿ
ನವದೆಹಲಿ , ಮಂಗಳವಾರ, 24 ನವೆಂಬರ್ 2015 (20:54 IST)
ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ನನ್ನ ಭಾಷಣದ ಶೈಲಿಯನ್ನು ಕಾಪಿ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವೆ ಸೃತಿ ಇರಾನಿ ಹೇಳಿದ್ದಾರೆ.
 
ಭಾಷಣ ನೀಡುವ ಬಗ್ಗೆ ನನ್ನದೇ ಆದ ಶೈಲಿಯಿದೆ. ಅಮೇಥಿಯಲ್ಲಿ ನಾನು ಮಾಡಿರುವ ಯಾವುದೇ ಭಾಷಣದ ಟೇಪ್‌ಗಳನ್ನು ತೆಗೆದುಕೊಳ್ಳಿ, ನನ್ನ ಭಾಷಣದ ಶೈಲಿ ನಿಮಗೆ ಅರ್ಥವಾಗುತ್ತದೆ. ರಾಹುಲ್ ಗಾಂಧಿ ಕೂಡಾ ನನ್ನ ಭಾಷಣದ ಶೈಲಿಯನ್ನೇ ಆರಂಭಿಸಿರುವುದು ಅಚ್ಚರಿ ತಂದಿದೆ ಎಂದು ತಿಳಿಸಿದ್ದಾರೆ.
 
ಮಾಧ್ಯಮಗಳೊಂದಿಗೆ ಮಾತನಾಡಿದ ಸೃತಿ ಇರಾನಿ, ರಾಹುಲ್ ಗಾಂಧಿ ಇದೀಗ ತಮ್ಮ ಭಾಷಣಗಳಲ್ಲಿ ನನ್ನ ಶೈಲಿಯನ್ನು ಅನುಕರಿಸುತ್ತಿದ್ದಾರೆ. ತಮ್ಮ ಭಾಷಣ ಶೈಲಿಯನ್ನು ಮರೆತು ಹೋಗಿದ್ದಾರೆ ಎಂದು ಲೇವಡಿ ಮಾಡಿದರು.
 
ಕಳೆದ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸೃತಿ ಇರಾನಿ ಸೋಲನುಭವಿಸಿದ್ದರು. ಆದರೆ, ರಾಹುಲ್ ಗಾಂಧಿ ವಿರುದ್ದ ಸುಲಭವಾಗಿ ಸೋಲಲಿಲ್ಲ ಎಂದು ಕೇಂದ್ರ ಸಚಿವೆ ಸೃತಿ ಇರಾನಿ ತಿಳಿಸಿದ್ದಾರೆ.
 

Share this Story:

Follow Webdunia kannada