Select Your Language

Notifications

webdunia
webdunia
webdunia
webdunia

ಬಡತನದಿಂದ ಸಿರಿತನದೆಡೆಗೆ: ಮೈಕ್ರೋಸಾಫ್ಟ್‌ನಲ್ಲಿ 1 ಕೋಟಿ ಜಾಬ್ ಆಫರ್ ಪಡೆದ ವೆಲ್ಡರ್ ಮಗ

ಬಡತನದಿಂದ ಸಿರಿತನದೆಡೆಗೆ: ಮೈಕ್ರೋಸಾಫ್ಟ್‌ನಲ್ಲಿ 1 ಕೋಟಿ ಜಾಬ್ ಆಫರ್ ಪಡೆದ ವೆಲ್ಡರ್ ಮಗ
ನವದೆಹಲಿ , ಶನಿವಾರ, 6 ಫೆಬ್ರವರಿ 2016 (12:17 IST)
ಬಿಹಾರದ ಖಾಗರಿಯಾದ ನಿವಾಸಿಯಾಗಿರುವ ಬಡ ವೆಲ್ಡರ್‌ ಚಂದ್ರಕಾಂತ್ ಸಿಂಗ್ ಚೌಹಾನ್ ತನ್ನ ಕಷ್ಟದ ದಿನಗಳು ಮಗನಿಂದ ಬಗೆಹರಿಯುತ್ತವೆ ಅಂದುಕೊಂಡಿರಬೇಕು. ಆದರೆ ಇಷ್ಟು ಬೇಗ ಎಂದಂತೂ ಅಂದುಕೊಂಡಿರಲಿಕ್ಕಿಲ್ಲ. ಚಂದ್ರಕಾಂತ್ ಸಿಂಗ್ ಪ್ರೀತಿಯ ಪುತ್ರ 21 ವರ್ಷದ ವಾತ್ಸಲ್ಯ ಸಿಂಗ್ ಚೌಹಾನ್ ಅಪ್ಪನ ಕನಸನ್ನು ನಿರಾಶೆಗೊಳಿಸಲಿಲ್ಲ. ಐಐಟಿ ಖಾರಗ್ಪುರದಲ್ಲಿ ಅಂತಿಮ ವರ್ಷದಲ್ಲಿ ಓದುತ್ತಿರುವಾಗಲೇ ಆತನಿಗೆ ಮೈಕ್ರೋಸಾಫ್ಟ್‌ನಿಂದ ಜಾಬ್ ಆಫರ್ ಬಂದಿದೆ. ಆತನು ಪಡೆಯಲಿರುವ ಸಂಬಳ ಬರೊಬ್ಬರಿ 1 ಕೋಟಿ (ವಾರ್ಷಿಕ).

 
ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ ಆತ ಮಾಹಿತಿ ತಂತ್ರಜ್ಞಾನದ ದಿಗ್ಗಜ ಕಂಪನಿಗೆ ಸೇರ್ಪಡೆಯಾಗಲಿದ್ದಾನೆ. 
 
ಕಳೆದ ಡಿಸೆಂಬರ್ ತಿಂಗಳಲ್ಲಿ ನಡೆದ ಕ್ಯಾಂಪಸ್ ಸಂದರ್ಶನದಲ್ಲಿ ವಾತ್ಸಲ್ಯ ಈ ಕೆಲಸಕ್ಕೆ ಆಯ್ಕೆಯಾಗಿದ್ದಾನೆ. ತಮ್ಮ ಮಾರ್ಗದರ್ಶಿ ವಿಶಾಲ್ ಜೋಶಿಯವರ ಸಲಹೆಯಂತೆ ತನ್ನ ಎರಡನೆಯ ಪ್ರಯತ್ನದಲ್ಲಿ ದೇಶಕ್ಕೆ 382 ಅಂಕ ಗಳಿಸಿ ಆತ ಐಐಟಿಗೆ ಪ್ರವೇಶ ಪಡೆದಿದ್ದ. ಪರಿಶ್ರಮದಿಂದ ಅಧ್ಯಯನ ನಡೆಸಿದ್ದ ಆತನ ಶ್ರಮಕ್ಕೀಗ ಫಲ ದೊರೆತಿದೆ.
 
ತನ್ನ ಮಗನ ಯಶಸ್ಸಿನ ಕುರಿತು ಪ್ರತಿಕ್ರಿಯಿಸುವ ತಂದೆ ಚಂದ್ರಕಾಂತ್ ಸಿಂಗ್ ನನಗೆ ಬಹಳ ಸಂತೋಷವಾಗುತ್ತಿದೆಯ ಕಳೆದ 20 ವರ್ಷಗಳ ನನ್ನ ಪರಿಶ್ರಮಕ್ಕೆ ಈಗ ಫಲ ದೊರಕಿದೆ. ನನ್ನ ಮಗನಿಗೆ ಉತ್ತಮ ಕೆಲಸ ಸಿಕ್ಕಿದೆ. ಆತ ದೇಶಕ್ಕಾಗಿ ಕೆಲಸ ಮಾಡಿ ನಮಗೆ ಹೆಮ್ಮೆ ತರುವಂತೆ ಮಾಡಬೇಕು ಎಂಬುದೇ ನನ್ನ ಬಯಕೆ ಎನ್ನುತ್ತಾರೆ. 
 

Share this Story:

Follow Webdunia kannada