Select Your Language

Notifications

webdunia
webdunia
webdunia
webdunia

ಭಾರತೀಯ ಮೂಲದ ಬಸ್ ಚಾಲಕನ ಜೀವಂತ ದಹನ

ಭಾರತೀಯ ಮೂಲದ ಬಸ್ ಚಾಲಕನ ಜೀವಂತ ದಹನ
ಬ್ರಿಸ್ಬೇನ್ , ಶುಕ್ರವಾರ, 28 ಅಕ್ಟೋಬರ್ 2016 (15:40 IST)
ಭಾರತೀಯ ಮೂಲದ ಬಸ್ ಚಾಲಕನನ್ನು ಪ್ರಯಾಣಿಕರ ಮುಂದೆಯೇ ಜೀವಂತವಾಗಿ ದಹಿಸಿದ ಕರಾಳ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. 

 
ಪಂಜಾಬಿ ಸಮುದಾಯಕ್ಕೆ ಸೇರಿದ್ದ 29 ವರ್ಷದ ಮನ್ಮೀತ್ ಅಲಿಸರ್ ಎಂದು ಗುರುತಿಸಲಾಗಿದ್ದು, ಆತ ಪ್ರಸಿದ್ಧ ಗಾಯಕನಾಗಿದ್ದ ಎಂದು ತಿಳಿದು ಬಂದಿದೆ. ಸುಮಾರು 48 ವರ್ಷದ ಶಂಕಿತ ಆರೋಪಿಯನ್ನು ಬಂಧಿಸಲಾಗಿದ್ದು, ಇದು ಜನಾಂಗೀಯ ದ್ವೇಷದಿಂದ ನಡೆದ ದಾಳಿಯಲ್ಲ ಎಂದು ಪೊಲೀಸರು ಸ್ಪಷ್ಟ ಪಡಿಸಿದ್ದಾರೆ.
 
ತಮ್ಮ ಮುಂದೆ ಚಾಲಕ ಹೊತ್ತಿ ಉರಿಯುತ್ತಿರುವುದನ್ನು ನೋಡಿ ಕಕ್ಕಾಬಿಕ್ಕಿಯಾದ ಪ್ರಯಾಣಿಕರು ಅಸಹಾಯಕರಾಗಿ ಆತ ದಹಿಸಿ ಹೋಗುವುದನ್ನು ನೋಡಿದ್ದಾರೆ.
 
ಬಸ್‌ನಲ್ಲಿ ಒಟ್ಟು 10 ಪ್ರಯಾಣಿಕರಿದ್ದರೆಂದು ಹೇಳಲಾಗುತ್ತಿದ್ದು ಬಸ್ ತುಂಬ ವ್ಯಾಪಿಸಿದ ಹೊಗೆಯಿಂದ ಉಸಿರಾಟದ ತೊಂಡರೆಗೊಳಗಾದ ಕೆಲವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಮತ್ತೆ ಕೆಲವರು ಕಿಟಕಿ ಒಡೆದು ಹೊರ ಬಂದಿದ್ದಾರೆ. 
 
ಕೃತ್ಯದ ಹಿಂದಿರುವ ಉದ್ದೇಶವಿನ್ನೂ ಬೆಳಕಿಗೆ ಬಂದಿಲ್ಲ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಧರ್ಮಗಳ ನಡುವೆ ವೈಷಮ್ಯ ಹುಟ್ಟು ಹಾಕಲು ಕಾಂಗ್ರೆಸ್‌ನಿಂದ ಟಿಪ್ಪು ಜಯಂತಿ:ಜಗದೀಶ್ ಶೆಟ್ಟರ್