ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್‌ರಂತಹ ಕೆಟ್ಟ ಸಚಿವನನ್ನು ನಾನು ನನ್ನ ರಾಜಕೀಯ ಜೀವನದಲ್ಲಿಯೇ ನೋಡಿಲ್ಲ.ಅವರೊಬ್ಬ ಜೋಕರ್ ಎಂದು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಅಮರಿಂದರ್ ಸಿಂಗ್ ಗುಡುಗಿದ್ದಾರೆ.
ರಕ್ಷಣಾ ಸಚಿವ ಪರಿಕ್ಕರ್‌ಗೆ ತಾವು ಹೊಂದಿರುವ ಖಾತೆಯ ಬಗ್ಗೆಯೇ ಜ್ಞಾನವಿಲ್ಲ. ಕೇವಲ ದಿನನಿತ್ಯ ಹೇಳಿಕೆ ನೀಡುವುದೇ ಕಾಯಕವಾಗಿದೆ. ಅವರನ್ನು ಕೂಡಲೇ ಸಚಿವ ಸ್ಥಾನದಿಂದ ತೆಗೆದುಹಾಕಬೇಕು ಎಂದು ಒತ್ತಾಯಿಸಿದ್ದಾರೆ.
ಸೀಮಿತ ದಾಳಿ ಕುರಿತಂತೆ ರಾಜಕೀಯ ನಾಯಕರಿಗೆ ಮಹತ್ವ ನೀಡಲು ನಿರಾಕರಿಸಿದ ಅವರು ನಮ್ಮ ಸೈನಿಕರ ಹತ್ಯೆಗೆ ಸೇನೆ ಸೀಮಿತ ದಾಳಿಯ ರೂಪದಲ್ಲಿ ಪ್ರತಿಕಾರ ತೆಗೆದುಕೊಂಡಿದೆ. ಇದೇನು ಮೊದಲ ಬಾರಿ ಸೀಮಿತ ದಾಳಿ ನಡೆದಿಲ್ಲ. ಇಂತಹ ಸೀಮಿತ ದಾಳಿಗಳು ಹಿಂದೆ ಕೂಡಾ ನಡೆದಿವೆ ಎಂದು ತಿರುಗೇಟು ನೀಡಿದ್ದಾರೆ.
ಭಾರತೀಯ ಸೇನೆಯ ಸೀಮಿತ ದಾಳಿಯನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಳ್ಳಲು ಯತ್ನಿಸುತ್ತಿದೆ. ಮುಂಬರುವ ಉತ್ತರಪ್ರದೇಶ ಚುನಾವಣೆಯಲ್ಲಿ ದಾಳವಾಗಿ ಬಳಸಲು ಸಂಚು ರೂಪಿಸಿದೆ. ನಾನು ಕೂಡಾ ಸೈನಿಕ ಸೇನೆ ಯಾವ ರೀತಿ ಯೋಚನೆ ಮಾಡುತ್ತದೆ ಎನ್ನುವುದು ನನಗೆ ತಿಳಿದಿದೆ. ಬಿಜೆಪಿ ಕೇವಲ ರಾಜಕೀಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಂಜಾಬ್‌ನಲ್ಲಿ ಬಿಜೆಪಿ- ಸಾದ್ ಸರಕಾರ ಅಧೋಗತಿಗೆ ಇಳಿದಿದೆ. ಡ್ರಗ್ಸ್ ಸೇರಿದಂತೆ ಅನೇಕ ಅವ್ಯವಹಾರಗಳಲ್ಲಿ ಉಭಯ ಪಕ್ಷಗಳ ನಾಯಕರು ಭಾಗಿಯಾಗಿದ್ದಾರೆ. ಮುಂಬರುವ ದಿನಗಳಲ್ಲಿ ಜನತೆ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಪಂಜಾಬ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಮರಿಂದರ್ ಸಿಂಗ್ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ